Just In
Don't Miss!
- Automobiles
ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ
- News
ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾದ 'ಅಣ್ಣಾವ್ರ ಮೊಮ್ಮಗ'

ಡಾ ರಾಜ್ ಕುಮಾರ್ ಮನೆಯಲ್ಲಿ ಇನ್ನ ಕೆಲವೇ ದಿನಗಳಲ್ಲಿ ಮದುವೆ ಸಂಭ್ರಮ ಮನೆ ಮಾಡಲಿದೆ. ಕಳೆದ ವರ್ಷವಷ್ಟೇ ಅಣ್ಣಾವ್ರ ಮನೆಯ ಹಿರಿಯ ಮೊಮ್ಮಗಳ ಮದುವೆ ಅದ್ದೂರಿಯಾಗಿ ನಡೆದಿತ್ತು.(Photo Gallery-ರಾಜ್ ಮೊಮ್ಮಗನ ನಿಶ್ಚಿತಾರ್ಥ ಸಂಪೂರ್ಣ ಚಿತ್ರಗಳು ನೋಡಿ)
ನಿರೂಪಮ ಶಿವರಾಜ್ ಕುಮಾರ್ ರ ಮದುವೆ ಆಗಿ ವರ್ಷ ಕಳೆಯುತ್ತಿದ್ದಂತೆ ಈಗ ಹಿರಿಯ ಮೊಮ್ಮಗನ ಮದುವೆ ಸಂಭ್ರಮ ಮನೆ ಮಾಡಿದೆ. 'ಡಾ ರಾಜ್ ಕುಮಾರ್' ಹಾಗೂ ಪಾರ್ವತಮ್ಮ ಅವರ ಹಿರಿಯ ಪುತ್ರಿ 'ಲಕ್ಷ್ಮಿ ಹಾಗೂ ಗೋವಿಂದರಾಜು' ರ ಪುತ್ರ 'ಶಾನ್' ರ ಮದುವೆ ನಿಶ್ಚಯವಾಗಿದೆ.

ದಾಂಪತ್ಯ ಜೀವನಕ್ಕೆ ಡಾ ರಾಜ್ ರ 'ಮೊಮ್ಮಗ'
ಕಲಾ ಸಾರ್ವಭೌಮ ಡಾ ರಾಜ್ ಕುಮಾರ್ ರ ಹಿರಿಯ ಪುತ್ರಿಯಾದ ಲಕ್ಷ್ಮಿ ಅವ್ರ ಹಿರಿಯ ಪುತ್ರ 'ಶಾನ್' (ಷಣ್ಮುಖ)ರ ನಿಶ್ವಿತಾರ್ಥ ಇತ್ತೀಚಿಗಷ್ಟೇ ನಡದಿದೆ. ಸಾಗರದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು ಇನ್ನ ಕೆಲವೇ ದಿನಗಳಲ್ಲಿ ಶಾನ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಡಾ.ರಾಜ್ ಕುಮಾರ್ ಹೋಟೆಲ್ ಗೆ ದಶಕದ ಸಂಭ್ರಮ

ಶಾನ್ ವೆಡ್ಸ್ ಸಿಂಧೂ
ಸಾಗರ ನಗರದ ವಕೀಲರಾದ ಬರೂರು ನಾಗರಾಜ್ ರವರ ಮಗಳಾದ 'ಸಿಂಧೂ' ಅವರನ್ನ 'ಶಾನ್' ವಿವಾಹವಾಗ್ತಿದ್ದಾರೆ. ಸಾಗರದ 'ಟಿಪ್ ಟಾಪ್ ಹೋಟೆಲ್' ನಲ್ಲಿ ನಿನ್ನೆ (ನವೆಂಬರ್ 26)ರಂದು ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದೆ.
ಡಾ.ರಾಜ್ ಮೊಮ್ಮಗ ಧೀರನ್ ಬಗ್ಗೆ ಕೆಲವು ಇಂಟರೆಸ್ಟಿಂಗ್ ಸಂಗತಿಗಳು

ಕುಟುಂಬಸ್ಥರ ಸಮ್ಮುಖದಲ್ಲಿ 'ನಿಶ್ಚಿತಾರ್ಥ'
ಸಾಗರದಲ್ಲಿ ನಡೆದ ಶಾನ್ ಹಾಗೂ ಸಿಂಧೂ ನಿಶ್ಚಿತಾರ್ಥದಲ್ಲಿ ಇಡೀ ರಾಜ್ ಕುಟುಂಬವೇ ಭಾಗಿಯಾಗಿತ್ತು. ಪುನೀತ್ ರಾಜ್ ಕುಮಾರ್ , ಶಿವರಾಜ್ ಕುಮಾರ್ ,ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಇನ್ನೂ ಅನೇಕರು ಸಮಾರಂಭದಲ್ಲಿ ಬಾಗಿಯಾಗಿದ್ರು.
ಚಂದನವನದ ಎಂಟ್ರಿಗೆ ಸಜ್ಜಾದ ಡಾ.ರಾಜ್ ರವರ ಮತ್ತೊಬ್ಬ ಮೊಮ್ಮಗ!

ಅಣ್ಣನ 'ಎಂಗೆಂಜ್ ಮೆಂಟ್' ನಲ್ಲಿ ಸಹೋದರರು
ಶಾನ್ ಡಾ ರಾಜ್ ಕುಮಾರ್ ಕುಟುಂಬದ ಹಿರಿಯ ಮೊಮ್ಮಗ ಆಗಿರೋದ್ರಿಂದ ನಿಶ್ಚಿತಾರ್ಥದ ಸಂಭ್ರಮ ಜೋರಾಗಿಯೇ ಇತ್ತು. ಕುಟುಂಬದ ಮೊಮ್ಮಕ್ಕಳೆಲ್ಲರೂ ಸಮಾರಂಭದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ರು. ವಿನಯ್ ರಾಜ್ ಕುಮಾರ್ , ಧೀರೇನ್ ರಾಮ್ ಕುಮಾರ್ , ನಿವೇದಿತಾ ರಾಜ್ ಕುಮಾರ್ ,ಧನ್ಯಾ ರಾಮ್ ಕುಮಾರ್ ಹೀಗೆ ಇನ್ನೂ ಅನೇಕರು ಎಂಗೆಂಜ್ ಮೆಂಟ್ ನಲ್ಲಿ ಉಪಸ್ಥಿತರಿದ್ದರು .