For Quick Alerts
  ALLOW NOTIFICATIONS  
  For Daily Alerts

  ದುಬೈನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ ಯುವರಾಜ್ ಕುಮಾರ್

  |
  ದುಬೈನಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ ಯುವರಾಜ್ ಕುಮಾರ್ | FILMIBEAT KANNADA

  ಡಾ.ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಎರಡನೆ ಪುತ್ರ ಯುವರಾಜ್ ಕುಮಾರ್ ಈ ವರ್ಷ ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಪಕ್ಕ ಎನ್ನುತ್ತಿವೆ ಮೂಲಗಳು. ಈಗಾಗಲೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿರುವ ಯುವರಾಜ್ ಕುಮಾರ್ ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.

  ಸದ್ಯ ದುಬೈನಲ್ಲಿ ಬೀಡು ಬಿಟ್ಟಿರುವ ಯುವ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ದುಬೈನಲ್ಲಿರುವ ಯುವ ಮಸ್ತ್ ಮಜಾ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ದುಬೈನಲ್ಲಿ 'ಜಾಕಿ' ಹಾಡಿಗೆ ಟಿಕ್ ಟಾಕ್ ಮಾಡಿದ್ದ ಯುವ ಈಗ ಮತ್ತೊಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ.

  ಯುವರಾಜ'ನನ್ನು ಲಾಂಚ್ ಮಾಡ್ತಿದ್ದಾರೆ 'ಕೆಜಿಎಫ್' ಸಹ ನಿರ್ದೇಶಕಯುವರಾಜ'ನನ್ನು ಲಾಂಚ್ ಮಾಡ್ತಿದ್ದಾರೆ 'ಕೆಜಿಎಫ್' ಸಹ ನಿರ್ದೇಶಕ

  ಫ್ಲೈಬೋರ್ಡಿಂಗ್ ಮಾಡಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಸಖತ್ ಎಂಜಾಯ್ ಮಾಡುತ್ತಿರುವ ಯುವ ಫ್ಲೈಬೋರ್ಡಿಂಗ್ ಮಾಡಿ ಸಂತಸಪಟ್ಟಿದ್ದಾರೆ. ಫ್ಲೈಬೋರ್ಡಿಂಗ್ ಮಾಡುತ್ತಿರುವ ವಿಡೀಯೋವನ್ನು ಶೇರ್ ಮಾಡಿ ಮೊದಲ ಬಾರಿಗೆ ಫ್ಲೈಬೋರ್ಡಿಂಗ್ ಮಾಡುತ್ತೀನಿ ಎಂದು ಹೇಳಿಕೊಂಡಿದ್ದಾರೆ.

  ಸದಾ ವರ್ಕೌಟ್ ಮಾಡುತ್ತ ಜಿಮ್ ನಲ್ಲಿ ಕಾಲಕಳೆಯುವ ಯುವ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಖತ್ ತಯಾರಿ ನಡೆಸುತ್ತಿದ್ದಾರೆ. ಯುವ ಚೊಚ್ಚಲ ಚಿತ್ರಕ್ಕೆ 'ಕೆಜಿಎಫ್' ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪುನೀತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಪ್ರಶಾಂತ್ ನೀಲ್ ಜೊತೆಗೆ ಕೆಲಸ ಮಾಡಿದ ಅನುಭವ ಹೊಂದಿರುವ ಪುನೀತ್ 'ಕೆಜಿಎಫ್' ಚಿತ್ರದ ಸಣ್ಣ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಈಗ ದೊಡ್ಮೆನೆ ಹುಡುಗನ ಮೊದಲ ಸಿನಿಮಾ ನಿರ್ದೇಶನ ಮಾಡುವ ಅವಕಾಶ ಪುನೀತ್ ಪಾಲಾಗಿದೆ. ಈಗಾಗಲೇ ಈ ಸಿನಿಮಾದ ಬಗ್ಗೆ ಸಾಕಷ್ಟು ಬಾರಿ ಮಾತುಗಳು ಆಗಿದೆಯಂತೆ. ಸಧ್ಯದಲ್ಲೇ ಯುವ ಸಿನಿಮಾ ಅನೌನ್ಸ್ ಆಗಲಿದೆ.

  English summary
  Dr.Rajkumar grandson Yuva Rajkumar mast enjoying in Dubai. He is celebrating new year in Dubai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X