Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಾ ರಾಜ್ ಕುಮಾರ್ ಕಂಡಿದ್ದ ಈ ಕನಸು ಇನ್ನು ನನಸಾಗಿಲ್ಲ
Recommended Video

ಪ್ರತಿಯೊಬ್ಬರಿಗೂ ಒಂದೊಂದು ಕನಸು ಇರುತ್ತೆ. ಆ ಕನಸನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಶ್ರೀಮಂತನಾಗಲಿ ಬಡವನಾಗಲಿ ಅವರದ್ದೇ ಆದ ಚಿಕ್ಕದೋ, ದೊಡ್ಡದೋ ಕನಸನ್ನು ಕಟ್ಟಿಕೊಂಡಿರುತ್ತಾರೆ.
ಕೆಲವರಿಗೆ ಆ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಅದೇ ರೀತಿ ಕನ್ನಡ ಸಿನಿಮಾರಂಗದ ಮೇರು ನಟರಾದ ಡಾ ರಾಜ್ ಕುಮಾರ್ ಅವರಿಗೂ ಒಂದು ಕನಸು ಇತ್ತಂತೆ. ಆ ಕನಸನ್ನು ಬದುಕಿರುವ ವರೆಗೂ ನನಸು ಮಾಡಿಕೊಳ್ಳಲು ಸಾಧ್ಯವೇ ಆಗಿಲ್ಲವಂತೆ.
ಇಂದಿನಿಂದ
ಕನ್ನಡದ
ಮತ್ತೊಂದು
ಅದ್ಧೂರಿ
ಧಾರಾವಾಹಿ
ಶುರು
ಆ ಕನಸಿನ ಬಗ್ಗೆ ನಿರ್ದೇಶಕರೊಬ್ಬರ ಬಳಿ ಹೇಳಿಕೊಂಡಿದ್ದಾರೆ. ಅಣ್ಣಾವ್ರ ಮಾತನ್ನ ಕೇಳಿದ ನಿರ್ದೇಶಕರು ಅದೇ ಪ್ರೇರಣೆಯಿಂದಾಗಿ ಈಗ ಆ ವಿಚಾರವಾಗಿ ಹೊಸ ಧಾರಾವಾಹಿಯನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಹಾಗಾದರೆ ಡಾ ರಾಜ್ ಕುಮಾರ್ ಕಟ್ಟಿದ್ದ ಕನಸು ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ಇನ್ನು ನನಸಾಗಿಲ್ಲ ಅಣ್ಣಾವ್ರ ಕನಸು
ಡಾ ರಾಜ್ ಕುಮಾರ್ ಮಹದೇಶ್ವರ ಪಾತ್ರವನ್ನು ಮಾಡಬೇಕು ಎನ್ನುವ ಕನಸನ್ನು ಕಂಡಿದ್ದರಂತೆ. ಈ ವಿಚಾರವನ್ನು ನಿರ್ದೇಶಕ ಮಹೇಶ್ ಸುಖಧರೆ ಅವರ ಬಳಿ ಅಣ್ಣಾವ್ರು ಹಂಚಿಕೊಂಡಿದ್ದರಂತೆ.

ಮಹದೇಶ್ವರನ ಗುಣಗಾನ ಮಾಡಿದ ಡಾ ರಾಜ್
ಮಹೇಶ್ ಸುಖಧರೆ ಶಿವರಾಜ್ ಕುಮಾರ್ ಅಭಿನಯದ 'ಸಾರ್ವಭೌಮ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆ ಸಮಯದಲ್ಲಿ ಅಣ್ಣಾವರ ಜೊತೆ ಸಮಯ ಕಳೆಯಲು ಹೆಚ್ಚು ಅವಕಾಶ ಸಿಕ್ಕಿತಂತೆ. ಆಗ ಅಪ್ಪಾಜಿ ಅವರು ಮಹದೇಶ್ವರನ ಬಗ್ಗೆ ಹೆಚ್ಚು ಕಥೆಗಳನ್ನು ಹೇಳುತ್ತಿದ್ದರು ಎನ್ನುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಮಹೆಶ್ ಸುಖಧರೆ.

ಧಾರಾವಾಹಿ ರೂಪದಲ್ಲಿ ಮಹದೇಶ್ವರನ ಕಥೆ
'ಉಘೇ ಉಘೇ ಮಾದೇಶ್ವರ' ಹೆಸರಿನಲ್ಲಿ ಇಂದಿನಿಂದ ಒಂದು ಗಂಟೆಗಳ ಕಾಲ ಮಹದೇಶ್ವರನ ಕಥೆ ಜೀ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಶನಿವಾರ ಹಾಗೂ ಭಾನುವಾರ ಸಂಜೆ 6.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ 'ಉಘೇ ಉಘೇ ಮಾದೇಶ್ವರ' ಸೀರಿಯಲ್ ಪ್ರಸಾರ ಆಗುತ್ತಿದೆ.

ಕಿರುತೆರೆಗೆ ಕಾಲಿಟ್ಟ ಮಹೇಶ್ ಸುಖಧರೆ
ಸೈನಿಕ', 'ಅಂಬರೀಶ' ಹ್ಯಾಪಿ ಬರ್ತಡೇ ಸಿನಿಮಾ ಗಳನ್ನು ನಿರ್ದೇಶನ ಮಾಡಿ ಸಕ್ಸಸ್ ಫುಲ್ ಡೈರೆಕ್ಟರ್ ಎನ್ನಿಸಿಕೊಂಡಿದ್ದ ನಿರ್ದೇಶಕ ಮಹೇಶ್ ಸುಖಧರೆ ಕಿರುತೆರೆಗೆ ಕಾಲಿಟ್ಟಿದ್ದಾರೆ. 'ಉಘೇ ಉಘೇ ಮಾದೇಶ್ವರ' ಧಾರಾವಾಹಿಯನ್ನು ಮಹೇಶ್ ನಿರ್ದೇಶಿಸುವುದರ ಜೊತೆಯಲ್ಲಿ ನಿರ್ಮಾಣವನ್ನು ಮಾಡುತ್ತಿದ್ದಾರೆ.