ಮೈಸೂರಿಗೂ ಅಣ್ಣಾವ್ರ ಕುಟುಂಬಕ್ಕೂ ಜನುಮ ಜನುಮದ ಅನುಬಂಧ
Recommended Video

ಅರಮನೆ ನಗರಿ ಮೈಸೂರು ಅಂದರೆ ಯಾರಿಗಿಷ್ಟ ಇಲ್ಲ ಹೇಳಿ. ಸಾಕಷ್ಟು ವರ್ಷಗಳ ಹಿಂದೆ ನಿವೃತ್ತಿಯ ಬದುಕು ಮೈಸೂರಿನಲ್ಲಿ ಕಳೆಯಬೇಕು ಎನ್ನುವುದು ಅನೇಕರ ಆಸೆ ಆಗಿತ್ತು, ಆದರೆ ಈಗಲೇ ಮೈಸೂರಿಗೆ ಹೋಗಿ ಜೀವನ ಮಾಡೋಣ ಎನ್ನುವಂತೆ ಜನರು ಬದಲಾಗಿದ್ದಾರೆ. ಮೈಸೂರು ಅಷ್ಟು ಪ್ರಖ್ಯಾತಿ ಗಳಿಸುವುದರ ಜೊತೆಯಲ್ಲಿ ಅಲ್ಲಿಯ ಪರಿಸರ, ಜೀವನ ಶೈಲಿ ಹೆಚ್ಚು ಹೆಚ್ಚು ಜನರನ್ನು ಆಕರ್ಷಣೆ ಮಾಡುತ್ತಿದೆ.
ಇನ್ನು ಇಂದು ಯುವ ರಾಜ್ ಕುಮಾರ್ ನಿಶ್ಚಿತಾರ್ಥ ಮೈಸೂರಿನಲ್ಲಿ ನಡೆದಿದ್ದು ಅಣ್ಣಾವ್ರ ಕುಟುಂಬಸ್ಥರು ಎರಡು ದಿನಗಳಿಂದಲೇ ಮೈಸೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ಅವರ ನಿಶ್ಚಿತಾರ್ಥ ಸಂಭ್ರಮದಲ್ಲಿ ನೆರೆವೇರಿದೆ.
ಮೈಸೂರಿಗೂ ಡಾ ರಾಜ್ ಕುಮಾರ್ ಕುಟುಂಬಕ್ಕೂ ಎಲ್ಲಿಲ್ಲದ ನಂಟಿದೆ. ಸಾಕಷ್ಟು ದಿನಗಳಿಂದಲೂ ಮೈಸೂರಿಗೂ ಅಣ್ಣಾವ್ರ ಕುಟುಂಬಕ್ಕೂ ಬಿಡಿಸಲಾಗದ ಬಂಧ ಬೆಳೆದುಕೊಂಡು ಬಂದಿದೆ. ಅಂತಹ ಅನುಬಂಧವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ರಾಜ್ ಕುಮಾರ್ ಸಿನಿಮಾಗಳ ಶೂಟಿಂಗ್
ಡಾ ರಾಜ್ ಕುಮಾರ್ ಅವರ ಅತೀ ಹೆಚ್ಚು ಸಿನಿಮಾಗಳು ಮೈಸೂರಿನಲ್ಲೇ ಚಿತ್ರೀಕರಣ ಆಗಿದೆ. ಅದಷ್ಟೇ ಅಲ್ಲದೆ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಚಿತ್ರಗಳನ್ನೂ ಮೈಸೂರಿನಲ್ಲೇ ಚಿತ್ರೀಕರಿಸಲಾಗಿದೆ.

ದಸರಾ ನೋಡಲು ಬರುವ ರಾಜ್ ಫ್ಯಾಮಿಲಿ
ಮೈಸೂರಿನ ದಸರಾ ನೋಡಲು ಇಂದಿಗೂ ಡಾ ರಾಜ್ ಕುಟುಂಬಸ್ಥರು ತಪ್ಪದೇ ಬರುತ್ತಾರಂತೆ. ದಸರಾ ನೋಡುವುದು ಎಂದರೆ ಇಂದಿಗೂ ಖುಷಿ ಕೊಡುತ್ತೆ ಎನ್ನುತ್ತಾರೆ ಶಿವರಾಜ್ ಕುಮಾರ್.

ಪವರ್ ಸ್ಟಾರ್ ಇಷ್ಟದ ದೇವತೆ ಚಾಮುಂಡಿ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಾಗ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿರುತ್ತಲೇ ಇರುತ್ತಾರೆ. ಜೀವನಲ್ಲೇ ಯಾವುದೇ ರೀತಿ ಬದಲಾವಣೆ ಕಂಡಾಗ ಪುನೀತ್ ರಾಜ್ ಕುಮಾರ್ ಬರಿ ಕಾಲಿನಲ್ಲಿ ಚಾಮುಂಡಿ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆಯುತ್ತಾರೆ.

ರಾಜ್ ಕುಟುಂಬದ ಶಕ್ತಿ ಧಾಮ
ನಿರ್ಗತಿಕ ಹೆಣ್ಣು ಮಕ್ಕಳು ಮತ್ತು ಅನಾಥ ಹೆಂಗಸರ ಆಶ್ರಯಕ್ಕಾಗಿ ಪಾರ್ವತಮ್ಮ ರಾಜ್ ಕುಮಾರ್ ಆರಂಭಿಸಿದ ಶಕ್ತಿಧಾಮ ಕೂಡ ಮೈಸೂರಿನಲ್ಲೇ ಇರುವುದು. ಆಗಾಗ ಶಿವರಾಜ್ ಕುಮಾರ್ ಪುನೀತ್ ರಾಜ್ ಕುಮಾರ್ ಮೈಸೂರಿಗೆ ಭೇಟಿ ನೀಡುತ್ತಿರುತ್ತಾರೆ.

ಡಾ ರಾಜ್ ಮನೆಗೆ ಮೈಸೂರು ಸೊಸೆ
ಯುವರಾಜ್ ಕುಮಾರ್ ಮದುವೆ ಆಗುತ್ತಿರುವ ಶ್ರೀದೇವಿ ಭೈರಪ್ಪ ಮೈಸೂರಿನವರು ಎನ್ನುವುದು ವಿಶೇಷ. ಡಾ ರಾಜ್ ಕುಮಾರ್ ಮನೆಗೆ ಮೊದಲ ಸೊಸೆಯಾಗಿ(ಮೊಮ್ಮಗಳು) ಮೈಸೂರಿನ ಮಗಳು ಬರುತ್ತಿದ್ದಾರೆ.


Click it and Unblock the Notifications











