For Quick Alerts
  ALLOW NOTIFICATIONS  
  For Daily Alerts

  ಡಾ ರಾಜ್ ಕುರಿತು ಹೆಮ್ಮೆಯ ಮಾತನ್ನಾಡಿದ ಬಾಲಿವುಡ್ ನಟ ಅನಿಲ್ ಕಪೂರ್

  |
  ಡಾ ರಾಜ್ ಕುರಿತು ಹೆಮ್ಮೆಯ ಮಾತನ್ನಾಡಿದ ಬಾಲಿವುಡ್ ನಟ ಅನಿಲ್ ಕಪೂರ್ | FILMIBEAT KANNADA

  ಡಾ ರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಮಾತ್ರ ಆಸ್ತಿ ಎಂದುಕೊಂಡಿದ್ದರು ಅದು ತಪ್ಪು. ರಾಜ್ ಕುಮಾರ್ ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ರೀತಿ ಚಕ್ರವರ್ತಿ ಇದ್ದಂತೆ. ಇದನ್ನ ನಮ್ಮ ಇಂಡಸ್ಟ್ರಿಯವರು ಯಾರೂ ಹೇಳುತ್ತಿಲ್ಲ. ಬಾಲಿವುಡ್ ನ ಸ್ಟಾರ್ ನಟ ಅನಿಲ್ ಕಪೂರ್ ಹೇಳಿದ್ದಾರೆ.

  ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅನಿಲ್ ಕಪೂರ್, ಸಿಲಿಕಾನ್ ಸಿಟಿ ಜನರಿಗೆ ಸಖತ್ ಮನರಂಜನೆ ನೀಡಿದರು. ಗಾಯಕ ವಿಜಯ್ ಪ್ರಕಾಶ್ ಜೊತೆ ವೇದಿಕೆ ಹಂಚಿಕೊಂಡ ಅನಿಲ್ ಕಪೂರ್ ತಮ್ಮದೇ ಎವರ್ ಗ್ರೀನ್ ಕನ್ನಡ ಹಾಡಿಗೆ ಧ್ವನಿಗೂಡಿಸಿದರು.

  'ಪಲ್ಲವಿ ಅನುಪಲ್ಲವಿ' ಸಿನಿಮಾ ನೆನೆದು ಭಾವುಕ ಟ್ವೀಟ್ ಮಾಡಿದ ಅನಿಲ್ ಕಪೂರ್'ಪಲ್ಲವಿ ಅನುಪಲ್ಲವಿ' ಸಿನಿಮಾ ನೆನೆದು ಭಾವುಕ ಟ್ವೀಟ್ ಮಾಡಿದ ಅನಿಲ್ ಕಪೂರ್

  ಅಷ್ಟಕ್ಕು, ಅಣ್ಣಾವ್ರ ಬಗ್ಗೆ ಅನಿಲ್ ಕಪೂರ್ ಹೇಳಿದ್ದೇನು? ಭಾರತೀಯ ಚಿತ್ರರಂಗಕ್ಕೆ ರಾಜ್ ಕುಮಾರ್ ಚಕ್ರವರ್ತಿ ಇದ್ದಂತೆ ಅಂದಿದ್ದು ಯಾಕೆ? ಮುಂದೆ ಓದಿ...

  ಅವರು ಬರಿ ರಾಜ್ ಕುಮಾರ್ ಮಾತ್ರವಲ್ಲ

  ಅವರು ಬರಿ ರಾಜ್ ಕುಮಾರ್ ಮಾತ್ರವಲ್ಲ

  ''ಅವರು ಬರಿ ಡಾ ರಾಜ್ ಕುಮಾರ್ ಮಾತ್ರವಲ್ಲ. ಎಲ್ಲ ನಟರಿಗೂ ಅವರು ಚಕ್ರವರ್ತಿ ಇದ್ದಂತೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ರಾಜ್ ಕುಮಾರ್ ಕೀರ್ತಿ ತಂದುಕೊಟ್ಟಿಲ್ಲ. ಇಡೀ ದೇಶಕ್ಕೆ ಅವರು ಹೆಸರು ತಂದಿದ್ದಾರೆ. ಅವರು ಸದಾ ನಮ್ಮೆಲ್ಲರ ಹೃದಯದಲ್ಲಿರುತ್ತಾರೆ'' ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

  ಚೆನ್ನೈನಲ್ಲಿದ್ದ ಅಣ್ಣಾವ್ರ ಮನೆ ಹುಡುಕಿಕೊಂಡು ಹೋಗಿದ್ದ ಬಿರಾದರ್ ಗೆ ರಾಜ್ ಹೇಳಿದ್ದೇನು?ಚೆನ್ನೈನಲ್ಲಿದ್ದ ಅಣ್ಣಾವ್ರ ಮನೆ ಹುಡುಕಿಕೊಂಡು ಹೋಗಿದ್ದ ಬಿರಾದರ್ ಗೆ ರಾಜ್ ಹೇಳಿದ್ದೇನು?

  ಪಲ್ಲವಿ ಅನುಪಲ್ಲವಿ ಮೊದಲ ಚಿತ್ರ

  ಪಲ್ಲವಿ ಅನುಪಲ್ಲವಿ ಮೊದಲ ಚಿತ್ರ

  ಅನಿಲ್ ಕಪೂರ್ ಕನ್ನಡದಲ್ಲಿ ಸಿನಿಮಾ ಮಾಡಿದ್ದಾರೆ. ಮಣಿರತ್ನಂ ಚೊಚ್ಚಲ ನಿರ್ದೇಶನದ ಪಲ್ಲವಿ ಅನುಪಲ್ಲವಿ ಚಿತ್ರದಲ್ಲಿ ಅನಿಕ್ ಕಪೂರ್ ನಾಯಕನಾಗಿ ನಟಿಸಿದ್ದರು. ಇದು ಇವರಿಬ್ಬರು ಮೊದಲ ಕನ್ನಡ ಸಿನಿಮಾ. 1983ರಲ್ಲಿ ಈ ಚಿತ್ರ ತೆರೆಕಂಡಿತ್ತು. ಇದಾದ ಬಳಿಕ ಮತ್ತೆ ಕನ್ನಡ ಸಿನಿಮಾ ಮಾಡಿಲ್ಲ ಅನಿಲ್ ಕಪೂರ್.

  ವಿಜಯ್ ಪ್ರಕಾಶ್ ಗೆ ಅಭಿಮಾನಿ

  ವಿಜಯ್ ಪ್ರಕಾಶ್ ಗೆ ಅಭಿಮಾನಿ

  ''ನಾನು ವಿಜಯ್ ಪ್ರಕಾಶ್ ಅವರ ಬಹುದೊಡ್ಡ ಅಭಿಮಾನಿ. ನಾನು ನಟಿಸಿದ್ದ ಸ್ಲಂ ಡಾಗ್ ಮಿಲೇನಿಯರ್ ಚಿತ್ರದಲ್ಲಿ ಜೈ ಹೋ ಹಾಗೂ ಯುವರಾಜ ಚಿತ್ರದಲ್ಲಿ ಮನಮೋಹಿನಿ ಹಾಡುಗಳನ್ನ ಹಾಡಿದ್ದಾರೆ. ಅವರ ಹಾಡುಗಳು ನಿಜಕ್ಕೂ ಅದ್ಭುತ. ಎಆರ್ ರೆಹಮಾನ್ ಅವರ ನೆಚ್ಚಿನ ಗಾಯಕರಲ್ಲಿ ವಿಜಯ್ ಪ್ರಕಾಶ್ ಕೂಡ ಒಬ್ಬರು'' ಎಂದು ಅನಿಲ್ ಕಪೂರ್ ಹೇಳಿಕೊಂಡರು.

  ನಗುವ ನಯನ ಮಧುರ ಮೌನ

  ನಗುವ ನಯನ ಮಧುರ ಮೌನ

  'ಪಲ್ಲವಿ ಅನು ಪಲ್ಲವಿ' ಚಿತ್ರದ ಅತ್ಯುತ್ತಮ ಹಾಡು 'ನಗುವ ನಯನ ಮಧುರ ಮೌನ.....' ಹಾಡನ್ನ ಅನಿಲ್ ಕಪೂರ್ ಹಾಡಿದ್ದಾರೆ. ಬೆಂಗಳೂರು ಗಣೇಶ ಉತ್ಸವದಲ್ಲಿ ವಿಜಯ್ ಪ್ರಕಾಶ್ ಜೊತೆ ಅನಿಲ್ ಕಪೂರ್ ಧ್ವನಿ ಗೂಡಿಸಿದ್ದಾರೆ

  English summary
  Dr rajkumar is a emperor of all actors in india said bollywood actor anil kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X