For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ಅವರನ್ನು ದೇವರು ಅಂದ ಆ ನಟ ಯಾರು?

  By Suneetha
  |

  ಸ್ಯಾಂಡಲ್ ವುಡ್ ನ ವರನಟ ಡಾ.ರಾಜ್ ಕುಮಾರ್ ಅವರನ್ನು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು 'ಡಾ ರಾಜ್ ಕುಮಾರ್ ಅವರು ನಿಜವಾದ ದೇವರು' ಎಂದು ಕರೆದಿದ್ದಾರೆ.

  ಇದು ಇಡೀ ಕರ್ನಾಟಕದ ಜನತೆಗೆ, ಅದ್ರಲ್ಲೂ ಇಂದು 60ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ, ಕನ್ನಡಿಗರು ಹೆಮ್ಮೆಯಿಂದ ಬೀಗಬೇಕಾದ ಹೇಳಿಕೆಯನ್ನು ತಮಿಳು ಸೂಪರ್ ಸ್ಟಾರ್ ನೀಡಿದ್ದಾರೆ.

  ಜೊತೆಗೆ ಡಾ.ರಾಜ್ ಅವರನ್ನು ರಾಘವೇಂದ್ರ ಸ್ವಾಮಿ ಎಂದು ರಜನಿಕಾಂತ್ ಅವರು ಪರಿಗಣಿಸುತ್ತಾರಂತೆ. ಅಂದಹಾಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ದೇವರು ರಾಘವೇಂದ್ರ ಸ್ವಾಮಿಗೂ ಒಂದು ಪ್ರಬಲವಾದ ಸಂಬಂಧವಿದೆ ಎಂದು ಇತ್ತೀಚೆಗೆ ನಡೆದ ಒಂದು ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ರಜನಿ ಅವರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

  ಅಂದಹಾಗೆ ವೆಂಟೇಶ್ವರ ಸ್ವಾಮಿ ಅವರು ಡಾ.ರಾಜ್ ಅವರ ಕನಸಲ್ಲಿ ಬಂದು ಕಾಡಿದ್ರೆ, ಶ್ರೀ ರಾಘವೇಂದ್ರ ಸ್ವಾಮಿ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಕನಸಲ್ಲಿ ಬಂದ ಕಾಡಿದ್ರಂತೆ. ಆ ನಂತರ ರಜನಿ ಅವರು ಮಂತ್ರಾಲಯ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಬಂದರಂತೆ. ತದನಂತರ ಇದೀಗ ರಜನಿ ಅವರು ತಮ್ಮ ನಿವಾಸದಲ್ಲಿಯೇ ರಾಘವೇಂದ್ರ ಸ್ವಾಮಿ ಅವರ ವಿಗ್ರಹ ಪ್ರತಿಷ್ಠಾಪನೆ ಮಾಡಿ ಆರಾಧನೆ ಮಾಡುತ್ತಿದ್ದಾರೆ.

  ಜೊತೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ 25ನೇ ಚಿತ್ರ 'ಶ್ರೀ ರಾಘವೇಂದ್ರ ಸ್ಟಾಮಿ' ಆಗಿರಬೇಕೆಂದು ಅವರು ಅಭಿಲಾಷೆ ವ್ಯಕ್ತಪಡಿಸಿದಾಗ ರಜನಿ ಅವರ ಆಪ್ತರಾದ ಕೆ.ಬಾಲಚಂದರ್ ಅವರು ರಾಘವೇಂದ್ರ ಸ್ವಾಮಿ ಸಿನಿಮಾ ಮಾಡುವ ಮೂಲಕ ರಜನಿ ಕಾಂತ್ ಅವರ ಆಸೆಯನ್ನು ಪೂರೈಸಿದ್ದರು.

  ಆದರೆ ಅದೃಷ್ಟವಶಾತ್ ಆ ಸಿನಿಮಾ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳಲಿಲ್ಲ. ಆ ಸಂದರ್ಭದಲ್ಲಿ ಡಾ.ರಾಜ್ ಅವರು ರಜನಿ ಅವರಿಗೆ ಬಹಳ ಆಪ್ತರಾಗಿದ್ದು, ವರನಟ ಆ ಸಿನಿಮಾ ನೋಡಿದರಂತೆ. ಸಿನಿಮಾ ನೋಡಿದ ಡಾ.ರಾಜ್ ಅವರು 'ನಾನು ಮಾಡಿದ 'ಮಂತ್ರಾಲಯ ಮಹಾತ್ಮೆ' ಕೂಡ ಫಸ್ಟ್ ಬಿಡುಗಡೆ ಆದಾಗ ಅಷ್ಟಾಗಿ ರೆಸ್ಪಾನ್ಸ್ ಪಡೆದುಕೊಳ್ಳಲಿಲ್ಲ, ಆದರೆ ನಾನು ಆ ಚಿತ್ರವನ್ನು ಎರಡನೇ ಬಾರಿ ರನ್ ಮಾಡಿದಾಗ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಎಂದರಂತೆ.

  ಆನಂತರ ಡಾ.ರಾಜ್ ಅವರ ಸಲಹೆ ಮೇರೆಗೆ ರಜನಿ ಅವರು 'ಶ್ರೀ ರಾಘವೇಂದ್ರ ಸ್ವಾಮಿ' ಚಿತ್ರವನ್ನು ಎರಡನೇ ಬಾರಿ ಚಿತ್ರಮಂದಿರಗಳಲ್ಲಿ ರನ್ ಮಾಡಿದಾಗ ಒಳ್ಳೆ ಕಲೆಕ್ಷನ್ ಮಾಡಿದ್ದನ್ನು ಕಂಡು ರಜನಿ ಅವರು ವರನಟ ಡಾ.ರಾಜ್ ಅವರಿಗೆ ನಿಜವಾದ ರಾಘವೇಂದ್ರ ಸ್ವಾಮಿ ಎಂದು ಕರೆದಿದ್ದಾರೆ.

  ಒಟ್ನಲ್ಲಿ ಪರಭಾಷೆಯವರು ನಮ್ಮ ಕನ್ನಡದ ನಟನನ್ನು ದೇವರಿಗೆ ಹೋಲಿಸಿ ಅವರನ್ನು ಆರಾಧಿಸುತ್ತಾರೆ, ಅಂದರೆ ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ ಅಲ್ವಾ?.

  English summary
  What a statement to the ears of Kannadigas on the 60th Kannada Rajyotsava! Rajanikanth super star of Tamil cinema and recognised at the universe for his potential says like Lord Raghavendra Swamy – Dr Rajakumar is also Lord to him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X