For Quick Alerts
  ALLOW NOTIFICATIONS  
  For Daily Alerts

  'ವಿದೇಶದಲ್ಲಿ ನನ್ನನ್ನು ನೋಡಿದ್ರೆ ಶಿವರಾಜ್ ಕುಮಾರ್ ಬ್ರದರ್ ಅಂತಾರೆ'

  |

  ತೆಲುಗು ಖ್ಯಾತ ಹಾಸ್ಯ ನಟ ಆಲಿ ಮತ್ತೊಮ್ಮೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಿಗ್ ಬಾಸ್, ಸಿಸಿಎಲ್ ಖ್ಯಾತಿಯ ರಾಜೀವ್ ನಟನೆಯ 'ಉಸಿರೇ ಉಸಿರೇ' ಸಿನಿಮಾದಲ್ಲಿ ಆಲಿ ಅಭಿನಯಿಸಿದ್ದಾರೆ. ಟಾಲಿವುಡ್ ಇಂಡಸ್ಟ್ರಿಯ ಬಹುಬೇಡಿಕೆಯ ನಟ ಆಲಿ ಅಪರೂಪಕ್ಕೆ ಕನ್ನಡ ಸಿನಿಮಾಗಳನ್ನು ಮಾಡ್ತಾರೆ. ಪ್ರತಿ ಸಿನಿಮಾ ಮಾಡಿದಾಗಲೂ ಬೆಂಗಳೂರಿಗೆ ಬರ್ತಾರೆ. ಸಿಲಿಕಾನ್ ಸಿಟಿಗೆ ಬಂದ ಸಮಯದಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಕನ್ನಡ ಕಲಾವಿದರ ಬಗ್ಗೆ ಬಹಳ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

  ಈಗ ರಾಜೀವ್ ನಟನೆಯ 'ಉಸಿರೇ ಉಸಿರೇ' ಸಿನಿಮಾ ಪ್ರೆಸ್‌ಮೀಟ್ ಹಿನ್ನೆಲೆ ಬೆಂಗಳೂರಿಗೆ ಬಂದಿದ್ದ ಆಲಿ, ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ ನಟಿಸಿದ್ದು ಖುಷಿ ಕೊಟ್ಟಿದೆ ಎಂದಿದ್ದಾರೆ. ಇನ್ನು ಕನ್ನಡದಲ್ಲಿ ನಿಮ್ಮ ನೆಚ್ಚಿನ ಕಲಾವಿದ ಯಾರು ಎಂದು ಪ್ರಶ್ನಿಸಿದ್ದಕ್ಕೆ, ''ದಿ ಗ್ರೇಟ್ ಲೆಜೆಂಡರಿ ಕಲಾವಿದ ಡಾ ರಾಜ್ ಕುಮಾರ್'' ಎಂದರು.

  ಗೆಳೆಯ ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ದೂರು ನೀಡಿದ ನಟ ಆಲಿ!ಗೆಳೆಯ ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ದೂರು ನೀಡಿದ ನಟ ಆಲಿ!

  ಅಣ್ಣಾವ್ರ ಜೊತೆ ಮತ್ತು ಅಣ್ಣಾವ್ರ ಕುಟುಂಬದ ಜೊತೆ ನನಗೆ ಒಳ್ಳೆಯ ಒಡನಾಟ ಇದೆ. ಅವರು ಹಾಡು ಹಾಡಬೇಕಾದರೆ ಪಕ್ಕದಲ್ಲಿ ನಾನು ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಿತ್ತು. ಚೆನ್ನೈನಲ್ಲಿ ಅವರನ್ನು ಭೇಟಿ ಮಾಡಿದೆ. ಬೆಂಗಳೂರಿಗೆ ಬಂದಾಗ ಅವರ ಮನೆಗೆ ಭೇಟಿ ಕೊಟ್ಟಿದ್ದೆ. ಅವರ ಮನೆಯಲ್ಲಿ ಊಟ ಮಾಡಿದ್ದೇನೆ. ಅವರ ಮಕ್ಕಳ ಜೊತೆಯೂ ನಾನು ಸ್ನೇಹ ಹೊಂದಿದ್ದೇನೆ'' ಎಂದರು.

  ''ರಾಜ್ ಕುಮಾರ್ ಮಕ್ಕಳ ಜೊತೆ ನನ್ನದೊಂದು ಫೋಟೋ ಇದೆ. ಫಾರೀನ್‌ನಲ್ಲಿ ಕೆಲವರು ನನ್ನನ್ನು ನೋಡಿ 'ಅರೇ ನೀವು ಶಿವರಾಜ್ ಕುಮಾರ್ ಅಂತಾರಾ, ಅದಕ್ಕೆ ನಾನು ಅಲ್ಲ, ಅವರು ನಮ್ಮ ದೊಡ್ಡಣ್ಣ, ನಾನು ಅವರ ತಮ್ಮ ಅಂದಿದ್ದೇನೆ'' ಎಂದು ನೆನಪು ಮೆಲುಕು ಹಾಕಿದರು. ಮುಂದೆ....

  ಸಿನಿಮಾ ನಿರ್ಮಾಪಕನಾದ ಹಾಸ್ಯನಟನಿಗೆ ಪ್ರಭಾಸ್ ಬೆಂಬಲಸಿನಿಮಾ ನಿರ್ಮಾಪಕನಾದ ಹಾಸ್ಯನಟನಿಗೆ ಪ್ರಭಾಸ್ ಬೆಂಬಲ

  1983ರಲ್ಲಿ ಕನ್ನಡ ಸಿನಿಮಾ ಮಾಡಿದ್ದೇನೆ

  1983ರಲ್ಲಿ ಕನ್ನಡ ಸಿನಿಮಾ ಮಾಡಿದ್ದೇನೆ

  ತೆಲುಗು ನಟ ಆಲಿ ಅವರು 1983ರಲ್ಲಿಯೇ ಕನ್ನಡ ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ಬಹಿರಂಗಪಡಿಸಿದರು. ರೆಬೆಲ್ ಸ್ಟಾರ್ ಅಂಬರೀಶ್, ಜಯಪ್ರದ ನಟಿಸಿದ್ದ ಚಿತ್ರದಲ್ಲಿ ನಾನು ಅಭಿನಯಿಸಿದ್ದೆ ಎಂದು ಮಾಹಿತಿ ಹಂಚಿಕೊಂಡರು. ಕನ್ನಡದಲ್ಲಿ ರಾಜ್ ಕುಮಾರ್, ತೆಲುಗಿನಲ್ಲಿ ಎನ್‌ಟಿಆರ್ ಹಾಗೂ ಹಿಂದಿಯಲ್ಲಿ ದಿಲೀಪ್ ಕುಮಾರ್-ಅಮಿತಾಭ್ ಬಚ್ಚನ್ ನನಗೆ ಇಷ್ಟ ಎಂದಿದ್ದಾರೆ.

  'ಸೂಪರ್' ಚಿತ್ರದಲ್ಲಿ ಎಂಟ್ರಿ

  'ಸೂಪರ್' ಚಿತ್ರದಲ್ಲಿ ಎಂಟ್ರಿ

  ದಾಖಲೆಗಳ ಪ್ರಕಾರ ತೆಲುಗು ನಟ ಆಲಿ ಕನ್ನಡಕ್ಕೆ ಅಧಿಕೃತವಾಗಿ ಬಂದಿದ್ದು, 2010ರಲ್ಲಿ ತೆರೆಕಂಡ 'ಸೂಪರ್' ಚಿತ್ರದ ಮೂಲಕ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿದ್ದ ಸಿನಿಮಾ ಚಡ್ಡಿ ಬ್ರದರ್ಸ್ ಆಗಿ ಆಲಿ ಮತ್ತು ಸಾಧು ಕೋಕಿಲಾ ಕಾಣಿಸಿಕೊಂಡಿದ್ದರು. ಇದಾದ ಮೇಲೆ ಕೋಮಲ್ ಕುಮಾರ್ ನಟನೆಯ 'ನಮೋ ಭೂತಾತ್ಮ' ಮತ್ತು 'ಕೆಂಪೇಗೌಡ-2' ಚಿತ್ರಗಳಲ್ಲಿ ನಟಿಸಿದ್ದರು. ಈಗ ರಾಜೀವ್ ಜೊತೆ 'ಉಸಿರೇ ಉಸಿರೇ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

  ರಾಜ್-ವಿಷ್ಣು-ಅಂಬಿ ನಂತರ ಸುದೀಪ್

  ರಾಜ್-ವಿಷ್ಣು-ಅಂಬಿ ನಂತರ ಸುದೀಪ್

  ''ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅಂತಹ ಕಲಾವಿದ ಬಳಿಕ ಅಷ್ಟು ದೊಡ್ಡ ಹೆಸರು ಸಂಪಾದನೆ ಮಾಡಿರುವ ಕಲಾವಿದ ಸುದೀಪ್. ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ನಟಿಸಿದ್ದಾರೆ. ಅದ್ಭುತ ಕಲಾವಿದ ಮಾತ್ರ ಅದ್ಭುತ ವ್ಯಕ್ತಿ ಸಹ ಅವರು. ನಮ್ಮ ಇಂಡಸ್ಟ್ರಿಯಲ್ಲು ಅವರ ಬಗ್ಗೆ ಮಾತನಾಡುವುದು ಹೆಮ್ಮೆ ಇದೆ'' ಎಂದು ಆಲಿ ಮೆಚ್ಚುಗೆ ವ್ಯಕ್ತಪಡಿಸಿದರು.

  ಆಲಿ ಹೆಸರಿನಲ್ಲಿ ಹಲವು ದಾಖಲೆ ಇದೆ

  ಆಲಿ ಹೆಸರಿನಲ್ಲಿ ಹಲವು ದಾಖಲೆ ಇದೆ

  ಬಾಲನಟನಾಗಿ ಸುಮಾರು 200 ಚಿತ್ರಗಳಲ್ಲಿ ಆಲಿ ಅಭಿನಯಿಸಿದ್ದಾರೆ. ನಾಯಕನಟನಾಗಿ 55ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಸೇರಿ 1100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಆಲಿ ಬಣ್ಣ ಹಚ್ಚಿದ್ದಾರೆ.

  'ಉಸಿರೇ ಉಸಿರೇ' ಸಿನಿಮಾ ಬಗ್ಗೆ

  'ಉಸಿರೇ ಉಸಿರೇ' ಸಿನಿಮಾ ಬಗ್ಗೆ

  ಸಿಸಿಎಲ್ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಜೀವ್ 'ಉಸಿರೇ ಉಸಿರೇ' ಚಿತ್ರಕ್ಕೆ ನಾಯಕ. ಶ್ರೀಜಿತ್ ಘೋಷ್ ನಾಯಕಿ. ಸಿಎಂ ವಿಜಯ್ ಈ ಚಿತ್ರ ನಿರ್ದೇಶಿಸಿದ್ದು, ಪ್ರದೀಪ್ ಯಾದವ್ ಬಂಡವಾಳ ಹಾಕಿದ್ದಾರೆ. ವಿವೇಕ್ ಚಕ್ರವರ್ತಿ ಸಂಗೀತ, ಕೆಎಂ ಪ್ರಕಾಶ್ ಸಂಕಲನ, ಜಿಎನ್ ಸರವರಣನ್ ಛಾಯಾಗ್ರಾಹಣವಿದೆ.

  English summary
  Kannada industry legend Dr Rajkumar is my favourite Actor says Tollywood Comedy Actor Ali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X