James: ರಾಜ್‌ಕುಮಾರ್-ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾದಲ್ಲಿದೆ ಒಂದೇ ರೀತಿಯ ಸಂದೇಶ

ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಆಭಿನಯದ 'ಜೇಮ್ಸ್' ಸಿನಿಮಾ ರಿಲೀಸ್ ಆಗಿದೆ. ಮಾರ್ಚ್ 17 ರಂದು ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ ಬಂದ 'ಜೇಮ್ಸ್' ಅಬ್ಬರ ಜೋರಾಗಿದೆ.‌ 'ಜೇಮ್ಸ್' ಸಿನಿಮಾ ನೋಡಿದವರು ಅಪ್ಪು ನೆನೆದು ಭಾವುಕರಾಗುತ್ತಿದ್ದಾರೆ. 'ಜೇಮ್ಸ್' ನಲ್ಲಿ ಪುನೀತ್ ರಾಜ್‍ಕುಮಾರ್ ಅವರನ್ನು ‌ಎಲ್ಲರೂ ಕಣ್ತುಂಬಿ ಕೊಳ್ಳುತ್ತಿದ್ದಾರೆ.

'ಜೇಮ್ಸ್' ಮೂಲಕ ನಟ ಪುನೀತ್ ರಾಜ್‍ಕುಮಾರ್ ಅಪ್ಪ ರಾಜ್‌ಕುಮಾರ್ ಹಾದಿ ತುಳಿದಿದ್ದಾರೆ. ವರನಟ ಡಾ.ರಾಜ್ ಕುಮಾರ್ ಅವರಂತೆಯೇ ಅಪ್ಪು ಕೂಡ‌ ತಮ್ಮ‌ ಇಹಲೋಕಪಯಣ ಬೆಳೆಸಿದ್ದಾರೆ. ರಾಜ್‌ಕುಮಾರ್ ಸಿನಿಮಾಗಳು, ಕೇವಲ ಸಿನಿಮಾಗಳಾಗಿರಲಿಲ್ಲ. ಎಷ್ಟೋ ಜನರ ಬದುಕು ಬದಲಿಸೋ, ಜೀವನ ಪಾಠವೇ ಆಗಿದ್ದವು. ರಾಜ್‌ಕುಮಾರ್ ಸಿನಿಮಾಗಳಿಗೆ ಕೌಟುಂಬಿಕ ಪ್ರೇಕ್ಷಕರೇ ಹೆಚ್ಚು.

ಅದೇ ರೀತಿ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳಿಗೂ ಫ್ಯಾಮಿಲಿ ಆಡಿಯನ್ಸ್ ಹೆಚ್ಚು. ಪುನೀತ್ ರಾಜ್‍ಕುಮಾರ್ ಅಂದರೆ, ಅವರ ಸಿನಿಮಾಗಳು ಅಂದರೆ ಮಕ್ಕಳಿಗೆ ಅತಿ ಅಚ್ಚು ಮೆಚ್ಚು. ಈಗ ರಾಜ್‌ಕುಮಾರ್ ಮತ್ತು ಪುನೀತ್ ಸಿನಿಮಾಗಳ ಹೋಲಿಕೆಗೆ ಕಾರಣವಾಗಿದೆ 'ಜೇಮ್ಸ್' ಮತ್ತು 'ಶಬ್ದವೇದಿ' ಚಿತ್ರಗಳು.

ಅಂದು ರಾಜ್‌ಕುಮಾರ್ ಇಂದು ಪುನೀತ್ ರಾಜ್‍ಕುಮಾರ್!

ಅಂದು ರಾಜ್‌ಕುಮಾರ್ ಇಂದು ಪುನೀತ್ ರಾಜ್‍ಕುಮಾರ್!

ರಾಜ್‌ಕುಮಾರ್ ಅವರ ಸಿನಿಮಾಗಳಂತೆ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳು ಕೂಡ ಬದುಕಿನ ಮೌಲ್ಯಗಳನ್ನು ಹೇಳಿವೆ. ಸಮಾಜದ ಪಿಡುಗುಗಳ ವಿರುದ್ಧ ಅವರ ಚಿತ್ರಗಳು ದನಿ ಎತ್ತಿವೆ. ರಾಜ್ ಕುಮಾರ್ ಅಭಿನಯದ 'ಶದ್ಧವೇಧಿ' ಸಿನಿಮಾ ಅವರು ನಾಯಕನಾಗಿ ಅಭಿನಯಿಸಿದ ಕೊನೆಯ‌ ಸಿನಿಮಾ. ಅಂತೆಯೇ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್'. ಈ ಎರಡೂ ಸಿನಿಮಾಗಳು ಒಂದೇ ತಕ್ಕಡಿಯಲ್ಲಿ ಇವೆ. ಅಪ್ಪನಂತೆ ಸಮಾಜಕ್ಕೆ ದೊಡ್ಡದೊಂದು ಸಂದೇಶ ಸಾರಿ ಅಪ್ಪು ಇಹಲೋಕ ತ್ಯಜಿಸಿದ್ದಾರೆ.

'ಶಬ್ದವೇಧಿ', 'ಜೇಮ್ಸ್'ನಲ್ಲಿ ಡ್ರಗ್ಸ್ ವಿರುದ್ಧದ ಹೋರಾಟ!

'ಶಬ್ದವೇಧಿ', 'ಜೇಮ್ಸ್'ನಲ್ಲಿ ಡ್ರಗ್ಸ್ ವಿರುದ್ಧದ ಹೋರಾಟ!

ಸಾಮಾನ್ಯವಾಗಿ ಡ್ರಗ್ಸ್ ಪ್ರಕರಣಗಳನ್ನು ನೀವೂ ಕೇಳಿರುತ್ತೀರಿ. ಆದರೆ ಅದು ಸಮಾಜಕ್ಕೆ ಎಷ್ಟು ಮಾರಕ ಮತ್ತು ಅದರ ಹಿಂದೆ ಯಾವರೀತಿಯ ಮಾಫಿಯ ಇರುತ್ತದೆ ಎನ್ನುವುದು 'ಶಬ್ದವೇಧಿ' ಮತ್ತು 'ಜೇಮ್ಸ್' ಚಿತ್ರಗಳಲ್ಲಿ ತೋರಿಸಲಾಗಿದೆ. ರಾಜ್ ಕುಮಾರ್ ಅವರು ತಮ್ಮ ಕೊನೆಯ ಚಿತ್ರ 'ಶಬ್ದವೇಧಿ'ಯಲ್ಲಿ ಡ್ರಗ್ಸ್ ವಿರುದ್ಧ ಸಮರ ಸಾರುತ್ತಾರೆ. 'ಜೇಮ್ಸ್' ಸಿನಿಮಾದ ಮುಖ್ಯ ತಿರುಳು ಕೂಡ ಅದೇ ಆಗಿದೆ.

ಇದು ಅಚ್ಚರಿಯ ಕಾಕತಾಳಿಯ!

ಇದು ಅಚ್ಚರಿಯ ಕಾಕತಾಳಿಯ!

ಶಬ್ದವೇಧಿ ಚಿತ್ರದಲ್ಲಿ ರಾಜ್‌ಕುಮಾರ್ ಅವರು ಪೋಲಿಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಜೇಮ್ಸ್' ‌ಚಿತ್ರದಲ್ಲಿ ಅಪ್ಪು ಸೈನಿಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇಬ್ಬರೂ ಸಮಾಜಿಕ ಸೇವೆ ಮಾಡುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಡ್ರಗ್ಸ್ ವಿರುದ್ಧ ಹೋರಾಡುತ್ತಾರೆ. 'ಶಬ್ದವೇಧಿ' ರಾಜ್‌ಕುಮಾರ್ ಕೊನೆಯ ಸಿನಿಮಾ. 'ಜೇಮ್ಸ್' ಪುನೀತ್‌ ರಾಜ್‌ಕುಮಾರ್ ಕೊನೆಯ ಸಿನಿಮಾ. ರಾಜ್‌ಕುಮಾರ್ ಅವರ ಸಿನಿಮಾಗಳು ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದವು. ಅದೇ ರೀತಿ ಅಪ್ಪು ಹಲವು ಸಿನಿಮಾಗಳು ಕೂಡ ಅದೇ ರೀತಿ ಸಾಮಾಜದಲ್ಲಿ ಬದಲಾವಣೆ ಆಗ ಬೇಕು ಎನ್ನುವ ರೀತಿಯ ಸಂದೇಶಗಳನ್ನು ಹೊತ್ತು ತರುತ್ತಿತ್ತು. 'ಶಬ್ದವೇಧಿ' ಮತ್ತು 'ಜೇಮ್ಸ್' ಸಿನಿಮಾಗಳು ಒಂದೇ ರೀತಿಯ ಸಂದೇಶ ಸಾರಿವೆ ಎನ್ನುವುದು ಕಾಕತಾಳಿಯವೇ ಸರಿ.

'ಜೇಮ್ಸ್' ಎಲ್ಲೆಡೆ ಯಶಸ್ವಿ ಪ್ರದರ್ಶನ!

'ಜೇಮ್ಸ್' ಎಲ್ಲೆಡೆ ಯಶಸ್ವಿ ಪ್ರದರ್ಶನ!

ಪವರ್ ಸ್ಟಾರ್‌ ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಗೂ ಮೊದಲೇ ಹತ್ತು ಹಲವು‌ದಾಖಲೆಗಳನ್ನು ಮಾಡಿದೆ. ವಿಶ್ವಾದ್ಯಂತ 'ಜೇಮ್ಸ್' ಅಬ್ಬರಿಸುತ್ತಿದೆ. ವಿದೇಶಗಳಲ್ಲೂ ಜೇಮ್ಸ್ ರೆಕಾರ್ಡ್ ಮಾಡಿದೆ. ಕನ್ನಡದ ಚಿತ್ರ ಜೇಮ್ಸ್ ಪ್ಯಾ‌ನ್ ಇಂಡಿಯಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಜೊತೆಗೆ ನೋಡುಗರಿಂದ ಸೈ ಎನಿಸಿಕೊಂಡಿದೆ.

More from Filmibeat

English summary
Dr.Rajkumar Last Film Shabdavedhi And Puneeth Rajkumar Last Film James have Same Concept both are fighting Against Drugs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X