ಬಂಗಾರದ ಮನುಷ್ಯನಾಗಿ ಬಣ್ಣ ಹಚ್ಚಲು ಶಿವಣ್ಣ ಸಿದ್ಧ
ಸದ್ಯದ ಪರಿಸ್ಥಿತಿಯಲ್ಲಿ ಮತ್ತೆ ಬದಲಾವಣೆಯ ಅಗತ್ಯವಿದೆ. ಬಹಳಷ್ಟು ಯುವಕರು ಅನಾವಶ್ಯಕ ಪಟ್ಟಣ ಸೇರಿಕೊಳ್ಳುತ್ತಿದ್ದಾರೆ. ಸರಿಯಾದ ವಿದ್ಯೆಯಿಲ್ಲದೇ ನಗರ ಸೇರಿಕೊಂಡ ಯುವಕರು ಇಲ್ಲಿ ಒಳ್ಳೆಯ ಗುಟಮಟ್ಟದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಆದರೆ ಒಮ್ಮೆ ಬಂದಮೇಲೆ ಅವರು ವಾಪಸ್ ನಗರ ಸೇರಿಕೊಳ್ಳಲೂ ಇಷ್ಟಪಡುತ್ತಿಲ್ಲ. ಹೊಲ-ಗದ್ದೆಗಳಲ್ಲಿ ಬೆವರು ಸುರಿಸಿ ದುಡಿಯಿವ ಕೈಗಳು ಮಾಯವಾಗುತ್ತಿವೆ.
ಇಂತಹ ಸಮಯದಲ್ಲಿ ಡಾ ರಾಜ್ ಕುಮಾರ್ ಮಗ ಶಿವರಾಜ್ ಕುಮಾರ್ 'ಬಂಗಾರದ ಮನುಷ್ಯ'ನಾಗಿ ಮತ್ತೆ ಪ್ರೇಕ್ಷಕರ ಮುಂದೆ ಬರುವುದೇ ಪ್ರಸ್ತುತ ಎಂಬುದು ಸಾಕಷ್ಟು ಸಿನಿಅಭಿಮಾನಿಗಳ ಅಭಿಲಾಷೆ ಹಾಗೂ ಅಭಿಮತ. ಈ ಬಗ್ಗೆ ಯೋಚಿಸಿ ಸ್ವತಃ ಶಿವಣ್ಣ ಅದನ್ನು ಬಹಿರಂಗವಾಗಿಯೇ ಬಾಯಿಬಿಟ್ಟಿದ್ದಾರೆ. ಇನ್ನು ಕನ್ನಡದ ನಿರ್ಮಾಪಕರು ಹಾಗೂ ನಿರ್ದೇಶಕರುಗಳು ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿದರೆ ಮತ್ತೆ 'ಬಂಗಾರದ ಮನುಷ್ಯ'ನ ಸೃಷ್ಟಿ ಸಾಧ್ಯ.
ಮತ್ತೆ 'ಬಂಗಾರದ ಮನುಷ್ಯ' ಚಿತ್ರ ಬಂದರೆ ಖಂಡಿತ ಸಮಾಜದಲ್ಲಿ ಸಾಕಷ್ಟು ಬದಲಾವಣೆ ಆಗುವುದಂತೂ ಖಂಡಿತ. ಸ್ವತಃ ಶಿವಣ್ಣ ಆ ಬಗ್ಗೆ ಆಸಕ್ತಿ ತಾಳಿರುವುದರಿಂದ ಆ ಚಿತ್ರ ಮತ್ತೆ ಬರುವ ಬಗ್ಗೆ ನಿರೀಕ್ಷೆಯನ್ನಂತೂ ಇಟ್ಟುಕೊಳ್ಳಬಹುದು. ಆದರೆ ಸದ್ಯವೇ ಈ ಚಿತ್ರವನ್ನು ಮತ್ತೆ ತರಲು ಯಾರಾದರೂ ಮನಸ್ಸು ಮಾಡಬಹುದೇ? ಅಥವಾ ಶಿವಣ್ಣರ ಮಾತನ್ನು ಯಾರೂ ಸೀರಿಯಸ್ ಅಗಿ ತೆಗೆದುಕೊಳ್ಳದೇ ಚಿತ್ರದ ಮರುಸೃಷ್ಟಿ ಯೋಜನೆ ಮೂಲೆಗುಂಪಾಗಬಹುದೇ?
ಈ ಬಗ್ಗೆ ಕಾಲವೇ ಉತ್ತರ ಹೇಳಬೇಕು. ನಾಳೆ, ಅಂದರೆ 01 ನವೆಂಬರ್ 2012 ರಂದು ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರರಾದ 'ಸಂಗೊಳ್ಳಿ ರಾಯಣ್ಣ' ಬಗ್ಗೆ ದರ್ಶನ್ ನಾಯಕತ್ವದಲ್ಲಿ ಚಿತ್ರ ತೆರೆಗೆ ಬರುತ್ತಿದೆ. ಕನ್ನಡದಲ್ಲಿ ಅತ್ಯಂತ ದುಬಾರಿ ಚಿತ್ರವೆಂಬ ಹೆಗ್ಗಳಿಕೆಯ 'ಸಂಗೊಳ್ಳಿ ರಾಯಣ್ಣ', ಸ್ಯಾಂಡಲ್ ವುಡ್ ನಿರ್ಮಾಪಕರು ಹಾಗೂ ನಿರ್ದೇಶಕರುಗಳು ಹೊಸ ರೀತಿಯಲ್ಲಿ ಯೋಚಿಸಿಲು ಮುನ್ನುಡಿ ಬರೆದರೆ ಆಶ್ಚರ್ಯವಿಲ್ಲ. (ಒನ್ ಇಂಡಿಯಾ ಕನ್ನಡ)


Click it and Unblock the Notifications











