For Quick Alerts
  ALLOW NOTIFICATIONS  
  For Daily Alerts

  ನಲವತ್ತು ವರ್ಷಗಳ ನಂತರ ಅಣ್ಣಾವ್ರ ಚಿತ್ರ ರಿಲೀಸ್

  By Rajendra
  |

  ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಚಿತ್ರಗಳು ಈಗ ಬಿಡುಗಡೆಯಾದರೂ ಗಲ್ಲಾಪೆಟ್ಟಿಗೆ ಝಣಝಣ ಕಾಂಚಾಣದಿಂದ ತುಂಬಿಹೋಗುತ್ತದೆ. ಅವರ ಚಿತ್ರಗಳ ಮುಂದೆ ಇಂದಿನ ಸ್ಟಾರ್ ನಟರ ಚಿತ್ರಗಳೂ ಸೈಡಿಗೆ ಹೋಗಬೇಕಾದ್ದೇ. ಇತ್ತೀಚೆಗೆ ಬಿಡುಗಡೆಯಾದ 'ಕಸ್ತೂರಿ ನಿವಾಸ' ಚಿತ್ರವೇ ಇದಕ್ಕೆ ಉದಾಹರಣೆ.

  ಇದೀಗ ಅಣ್ಣಾವ್ರ ಅಭಿನಯದ ಮತ್ತೊಂದು ಅಮೋಘ ಚಿತ್ರ ನೂತನ ತಂತ್ರಜ್ಞಾನದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ನಲವತ್ತು ವರ್ಷಳ ನಂತರ 'ಎರಡು ಕನಸು' (1974) ಚಿತ್ರ ಫೆಬ್ರವರಿ 6ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ. 5.1 ಡಿಜಿಟಲ್ ಸಿನಿಮಾ ಸ್ಕೋಪ್ ನೊಂದಿಗೆ ಶ್ರೀನಾಕೋಡ ಎಂಟರ್ ಪ್ರೈಸಸ್ ನವರು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

  ಬೆಂಗಳೂರಿನ ಭೂಮಿಕಾ (ಸ್ಟೇಟ್ಸ್) ಚಿತ್ರಮಂದಿರ ಸೇರಿದಂತೆ ವಿಶಾಲ್, ನವರಂಗ್, ಗುರುಸಿದ್ದೇಶ್ವರ, ಗೋಪಾಲನ್ ಚಿತ್ರಮಂದಿರಗಳಲ್ಲಿ ಮೈಸೂರು, ದಾವಣಗೆರೆ, ತುಮಕೂರು, ಹಾಸನ, ರಾಣೆಬೆನ್ನೂರು, ಭದ್ರಾವತಿ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲೂ ಫೆ.6ರಿಂದ ಅಮೋಘ ಪ್ರಾರಂಭ.

  ದೊರೈ ಭಗವಾನ್ ಜೋಡಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ವಾಣಿ ಅವರ ಅದೇ ಹೆಸರಿನ ಕಾದಂಬರಿ ಆಧಾರಿತವಾಗಿದೆ. ರಾಜನ್ ನಾಗೇಂದ್ರ ಅವರ ಸಂಗೀತದಲ್ಲಿ ಮೂಡಿಬಂದ ಮ್ಯೂಸಿಕಲ್ ಹಿಟ್ ಚಿತ್ರವಿದು. ಅಣ್ಣಾವ್ರ ಜೊತೆಗೆ ಕಲ್ಪನಾ, ಮಂಜುಳಾ ಜೋಡಿಯನ್ನು ಕಣ್ತುಂಬಿಕೊಳ್ಳಬಹುದು.

  ಚಿತ್ರದಲ್ಲಿ ರಾಮು ಆಗಿ ರಾಜ್ ಕುಮಾರ್, ಗೌರಿ ಪಾತ್ರದಲ್ಲಿ ಕಲ್ಪನಾ ಹಾಗೂ ಲಲಿತಾ ಪಾತ್ರದಲ್ಲಿ ಮಂಜುಳಾ ಅಭಿನಯಿಸಿದ್ದಾರೆ. ಕೆ.ಎಸ್. ಅಶ್ವತ್ಥ್, ಬಾಲಕೃಷ್ಣ, ರಾಜಾನಂದ, ಸಂಪತ್, ಬಿ ಜಯಶ್ರೀ ಹಾಗೂ ಪಂಡರಿಬಾಯಿ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.

  ಚಿತ್ರದಲ್ಲಿನ ಐದು ಹಾಡುಗಳನ್ನು ಚಿ. ಉದಯ್ ಶಂಕರ್ ರಚಿಸಿದ್ದಾರೆ. ಬಾಡಿ ಹೋದ ಬಳ್ಳಿಯಿಂದ, ಎಂದು ನಿನ್ನ ನೋಡುವೆ, ತಂನಂ ತಂನಂ, ಎಂದೆಂದು ನಿನ್ನನು ಮರೆತು, ಪೂಜಿಸಲೆಂದೇ ಹೂಗಳ ತಂದೆ ಹಾಡುಗಳು ಇಂದಿಗೂ ಜನಪ್ರಿಯ. (ಫಿಲ್ಮಿಬೀಟ್ ಕನ್ನಡ)

  English summary
  Dr. Rajkumar's musical blockbuster movie 'Eradu Kanasu' (1974) releases with 5.1 digital sound and new technology on 6th February. The movie based on the novel of the same name by Vani. The film starred Rajkumar, Kalpana and Manjula in lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X