twitter
    For Quick Alerts
    ALLOW NOTIFICATIONS  
    For Daily Alerts

    ಡಾ.ರಾಜ್ ಕುಮಾರ್ ಫೋನ್ ನಲ್ಲಿ ಮಾತನಾಡುತ್ತಿರುವ ಅಪರೂಪದ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್ ಕುಮಾರ್

    |

    'ನುಡಿದರೆ ಮುತ್ತಿನ ಹಾರದಂತೆ ಇರಬೇಕು, ನುಡಿದರೆ ಮಾಣಿಕ್ಯ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು..' ಬಸವಣ್ಣನವರ ಈ ಪ್ರಸಿದ್ಧ ವಚನ ಕೇಳಿದ್ದೀರಾ. ಡಾ.ರಾಜ್ ಕುಮಾರ್ ಬಾಯಲ್ಲಿ ಕನ್ನಡ ಕೇಳುತ್ತಿದ್ದರೆ ಬಸವಣ್ಣನವರ ವಚನದ ಈ ಸಾಲುಗಳು ನೆನಪಾಗುತ್ತೆ.

    Recommended Video

    Dhruva Sarja admitted to Hospital?ಧ್ರುವ ಸರ್ಜಾ ಆಸ್ಪತ್ರೆಗೆ ದಾಖಲು? ಸುದ್ದಿ ನಿಜವೇ? | Filmibeat Kannada

    ಅಣ್ಣಾವ್ರ ಬಾಯಲ್ಲಿ ಪರಿಶುದ್ಧವಾದ ಕನ್ನಡ ಕೇಳುವುದೆ ಚಂದ. ಇಂದು ಅಣ್ಣಾವ್ರ ಮಾತನ್ನು ಕೇಳಿಸಿಕೊಳ್ಳುವ ಭಾಗ್ಯವಿಲ್ಲದಿದ್ದರೂ, ಸಿನಿಮಾಗಳಲ್ಲಿ, ವಿಡಿಯೋಗಳ ಮೂಲಕ ಡಾ.ರಾಜ್ ಕುಮಾರ್ ಮಾತನಾಡುವುದನ್ನು ಕೇಳಿರುತ್ತೀರಾ. ಈಗ ರಾಜ್ ಕುಮಾರ್ ಫೋನ್ನಲ್ಲಿ ಮಾತನಾಡುತ್ತಿರುವ ಅಪರೂಪದ ವಿಡಿಯೋವುಂದು ವೈರಲ್ ಆಗಿದೆ.

    ಅಣ್ಣಾವ್ರ ಅಭಿಮಾನಿಗಳಿಗೆ ಸಂತಸದ ಸುದ್ದಿ: ಹೊಸ ರೂಪದಲ್ಲಿ ಬರ್ತಿದೆ 'ಭಾಗ್ಯವಂತರು'ಅಣ್ಣಾವ್ರ ಅಭಿಮಾನಿಗಳಿಗೆ ಸಂತಸದ ಸುದ್ದಿ: ಹೊಸ ರೂಪದಲ್ಲಿ ಬರ್ತಿದೆ 'ಭಾಗ್ಯವಂತರು'

    ಈ ವಿಡಿಯೋವನ್ನು ಅಣ್ಣಾವ್ರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋನ್ನಲ್ಲಿ ಡಾ.ರಾಜ್ ಕುಮಾರ್ ಅವರ ತಂದೆಯವರ ಬಗ್ಗೆ ಮಾತನಾಡುತ್ತಿದ್ದಾರೆ. ಅಪ್ಪ ಕಲಿಸಿದ ಪಾಠ, ಮಾರ್ಗದರ್ಶನದ ಬಗ್ಗೆ ಫೋನ್ ನಲ್ಲಿ ಹೇಳುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಯ ಅಪ್ಪಾಜಿಯ ಫೋನ್ ಸಂಭಾಷಣೆಯಲ್ಲಿ ಏನಿದೆ? ಮುಂದೆ ಓದಿ..

    ತಂದೆಯ ಬಗ್ಗೆ ಡಾ.ರಾಜ್ ಕುಮಾರ್ ಮಾತು

    ತಂದೆಯ ಬಗ್ಗೆ ಡಾ.ರಾಜ್ ಕುಮಾರ್ ಮಾತು

    "ಇದೆಲ್ಲ ಯಾವದರ ಫಲವೆಂದರೆ ನನಗೆ ಮಾರ್ಗದರ್ಶನ ಮಾಡಿದ್ರಲ್ಲ ನಮ್ಮ ಅಪ್ಪಾಜಿ ಇದು ಅವರ ಫಲ. ಅವರಿಂದ ಬಂದಿದ್ದು. ಇಷ್ಟು ವರ್ಷಗಳ ಕಾಲ ದೇವರು ಹೀಗೆ ನನ್ನನು ನಿಲ್ಲಿಸಿದ್ದಾನೆ ಅಂದರೆ ಅದಕ್ಕೆ ಅವರು ತೋರಿದ ಮಾರ್ಗದರ್ಶನ. ನಾವು ಓದಿಲ್ಲ, ನಮಗೆ ಒಂದು ಪದವಿ ತೆಗೆದುಕೊಳ್ಳಲು ಅಥವಾ ಓದಲು ಆಗಲಿಲ್ಲ. ಇಷ್ಟೆಲ್ಲ ನಡೆಯುತ್ತಿದ್ದೆ ಅಂದರೆ ಅವರ ಮಾರ್ಗದರ್ಶನ ಕಾರಣ" ಎಂದು ಅವರ ತಂದೆಯ ಬಗ್ಗೆ ಹೇಳುತ್ತಿದ್ದಾರೆ.

    ನಮ್ಮ ಅಪ್ಪಾಜಿ ಯಾವಾಗಲು ಹೆದರಿಸುತ್ತಿದ್ದರು

    ನಮ್ಮ ಅಪ್ಪಾಜಿ ಯಾವಾಗಲು ಹೆದರಿಸುತ್ತಿದ್ದರು

    "ಅವರ ಮಾರ್ಗದರ್ಶನ ಎಷ್ಟಿತ್ತು ಅಂದರೆ ಅವರು ನನ್ನನ್ನು ಯಾವಾಗಲು ಹೆದರಿಸುತ್ತಿದ್ದರು, ನನ್ನ ಮಾತುಕತೆ, ನನ್ನ ನಡವಳಿಕೆ ಮತ್ತು ನನ್ನ ನಡಿಗೆ ಇದನ್ನೆಲ್ಲ ಗಮನಿಸಿ ನನಗೆ ಆಗಾಗ ಹೇಳೋರು, ಸ್ವಲ್ಪ ತಿದ್ದಿಕೋ, ನೋಡಪ್ಪಾ.. ನೀನು ಅಂದ್ಕೋತಿಯಾ ಇದೆಲ್ಲ ನಿನಗೆ ಚೆನ್ನಾಗಿ ಇರುತ್ತೆ ಅಂತ. ನೋಡೋರಿಗೆ ಚೆನ್ನಾಗಿರೋದಿಲ್ಲ. ಅವರ ಜೊತೆಯಲ್ಲಿ ಬದುಕಬೇಕಲ್ಲ. ಈಗಲೆ ಜೀವನದಲ್ಲಿ ಅಳವಡಿಸಿಕೊಂಡರೆ ಒಳ್ಳೆದು ಅಂತ ಚಿಕ್ಕಂದಿರಲ್ಲಿ ನಮ್ಮನ್ನು ಹೊಡೆದು, ಹೆದರಿಸಿ, ಬೆದರಿಸಿ ಸಾಕಿದ್ರು"


    ನಿರ್ದೇಶಕ ಭಗವಾನ್ ಬಳಿ ಪಾರ್ವತಮ್ಮ ರಾಜಕುಮಾರ್ ಮಾಡಿದ್ದ ಅಪರೂಪದ ಕೋರಿಕೆ ಬಹಿರಂಗ

    ಅನುಕೂಲ ಇದ್ದಿದ್ರೆ ವಿದ್ಯಾವಂತರನ್ನಾಗಿ ಮಾಡುತ್ತಿದ್ದೆ

    ಅನುಕೂಲ ಇದ್ದಿದ್ರೆ ವಿದ್ಯಾವಂತರನ್ನಾಗಿ ಮಾಡುತ್ತಿದ್ದೆ

    "ನನಗೆ ಅನುಕೂಲ ಇದ್ದಿದ್ದರೆ ನಿಮ್ಮನ್ನೆಲ್ಲ ವಿದ್ಯಾವಂತರನ್ನಾಗಿ ಮಾಡುತ್ತಿದ್ದೆ. ಅನುಕೂಲ ಇಲ್ಲದಿದ್ದರಿಂದ ಕಂದ ನಾನು ನಿನಗೆ ಹೆದರಿಸುತ್ತೇನೆ, ಹೊಡಿತ್ತೇನೆ, ಇದರ ಪರಿಣಾಮ ಮುಂದೆ ನಾನೇನಾದರು ಬದುಕಿದ್ರೆ ನಾನು ನೋಡುತ್ತೇನೆ. ನೀನು ನೋಡು. ಜ್ಞಾಪಕ ಮಾಡಿಕೊ ಎಂದು ಹೇಳುತ್ತಿದ್ದರು. ನನಗೆ ಬಂದ ಫಲ ಅಂತ ಎಂದು ಹೇಳ ಬಹುದು. ನನ್ನ ಪ್ರಯತ್ನಕ್ಕಿಂತಲು, ನನ್ನ ಪ್ರಯತ್ನ ಬಹಳ ಕಮ್ಮಿ, ಬಗವಂತನದ್ದೆ ಜಾಸ್ತಿ ಎನಿಸುತ್ತೆ."

    <br />ಬಣ್ಣ ತುಂಬಿಕೊಂಡು ಬರಲಿದೆ ಡಾ.ರಾಜ್ ಅವರ ಮತ್ತೊಂದು ಸಿನಿಮಾ
    ಬಣ್ಣ ತುಂಬಿಕೊಂಡು ಬರಲಿದೆ ಡಾ.ರಾಜ್ ಅವರ ಮತ್ತೊಂದು ಸಿನಿಮಾ

    ರಾಜ್ ಕುಮಾರ್ ಬಗವಂತನನ್ನು ನೋಡಿದ್ದಾರಾ?

    ರಾಜ್ ಕುಮಾರ್ ಬಗವಂತನನ್ನು ನೋಡಿದ್ದಾರಾ?

    "ಬಗವಂತನ ಎಲ್ಲಿ ನೋಡಲು ಸಾದ್ಯ. ಈ ಹಿಂದೆ ಒಂದು ಸಮಾರಂಭದಲ್ಲಿ ಹೇಳಿದ್ದೆ. ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟ ಸಮಯದಲ್ಲಿ ಹೇಳಿದೆ, ಲಕ್ಷಾಂತರ ಜನ ನೆರೆದಿದ್ದಾಗ ನಿಮ್ಮ ರಾಜ್ ಕುಮಾರ್ ದೇವರು ನೋಡಿದ್ದಾರೆ ಅಂದ್ರೆ ನಂಬುತ್ತೀರಾ ಅಂತ ಕೇಳಿದ್ದಾಗ, ಅವರಿಗೆಲ್ಲ ಆಶ್ಚರ್ಯವಾಯಿತು. ನೋಡಿದ್ರು ನೋಡಿರಬಹುದು ಅಣ್ಣಾವ್ರು ಎಂದು ಆಶ್ಚರ್ಯ. ಆಗ ಹೇಳಿದೆ, ನೋಡಿ ಇಲ್ಲಿದೆ ನನ್ನ ದೇವರುಗಳೆಲ್ಲ. ಒಬ್ಬ ವ್ಯಕ್ತಿಯನ್ನ ನೋಡೋಕೆ ಎಷ್ಟು ದೃಷ್ಟಿಗಳು ನೋಡುತ್ತಿವೆ. ಇವರೆಲ್ಲ ದೇವರುಗಳಲ್ಲದೆ ಬೇರೆ ಏನು ಆಗಲಿಕ್ಕೆ ಸಾಧ್ಯ. ದೇವರುಗಳಿಲ್ಲದೆ ನೀವು ಸಂತೋಷ ಪಡೊಕ್ಕೆ ಆಗುತ್ತಾ, ಅಥವಾ ನಾನು ನಿಮ್ಮನ್ನು ನೋಡಲಿಕ್ಕೆ ಆಗುತ್ತಾ. ಅವನು ಬೇರೆ ಇಲ್ಲೂ ಅಲ್ಲ ನಮ್ಮ ಒಳಗಡೆ ಇದಾನೆ"

    English summary
    Dr.rajkumar talking on the phone Rare video viral on social media. Raghavendra Rajkumar shares this video.
    Saturday, July 4, 2020, 15:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X