»   » ತೆಲುಗು ಚಿತ್ರದಲ್ಲಿ ಡಾ.ರಾಜ್ ಕುಮಾರ್ ಪಾತ್ರ.!

ತೆಲುಗು ಚಿತ್ರದಲ್ಲಿ ಡಾ.ರಾಜ್ ಕುಮಾರ್ ಪಾತ್ರ.!

Posted By:
Subscribe to Filmibeat Kannada

ವರನಟ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಪಾತ್ರ ತೆಲುಗಿನ ಚಿತ್ರದಲ್ಲಿ ಮೂಡಿ ಬರಲಿದೆ ಎಂಬ ಸುದ್ದಿ ಟಾಲಿವುಡ್ ನಿಂದ ಕೇಳಿ ಬಂದಿದೆ. ಈ ಚಿತ್ರದಲ್ಲಿ ಲೆಜೆಂಡ್ ಬಾಲಕೃಷ್ಣ ನಾಯಕರಾಗಲಿದ್ದಾರಂತೆ.

ತೆಲುಗು ಚಿತ್ರದಲ್ಲಿ ರಾಜ್ ಕುಮಾರ್ ಪಾತ್ರವೇಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಆದ್ರೆ, ಅದಕ್ಕೆ ಉತ್ತರ ಬಾಲಕೃಷ್ಣ ಅವರ ತಂದೆ ಎನ್.ಟಿ.ಆರ್. ಹೌದು, ತೆಲುಗು ಚಿತ್ರಲೋಕದ ದಿಗ್ಗಜ ನಟ ಎನ್.ಟಿ.ಆರ್ ಅವರ ಜೀವನಾಧರಿತ ಸಿನಿಮಾ ತಯಾರಾಗುತ್ತಿದ್ದು, ಈ ಚಿತ್ರದಲ್ಲಿ ಅಣ್ಣಾವ್ರ ಪಾತ್ರ ಬರಲಿದೆಯಂತೆ.

Dr Rajkumar Role in ntr biography

ಡಾ. ರಾಜ್ ಕುಮಾರ್ ಮಾತ್ರವಲ್ಲದೇ, ಎನ್.ಟಿ.ಆರ್ ಅವರ ಸಮಕಾಲಿನ ನಟರಾದ ಎಂ.ಜಿ.ಆರ್, ಶಿವಾಜಿ ಗಣೇಶನ್, ಅಕ್ಕಿನೇನಿ ನಾಗೇಶ್ವರ ರಾವ್, ಶೋಭನ್ ಬಾಬು ಮೊದಲಾದವರೂ ಪಾತ್ರಗಳು ಈ ಚಿತ್ರದಲ್ಲಿ ಮೂಡಲಿದೆ. ಆದ್ರೆ, ಡಾ.ರಾಜ್ ಪಾತ್ರವನ್ನ ಯಾರು ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Dr Rajkumar Role in ntr biography

ಎನ್‍.ಟಿ.ಆರ್ ಮತ್ತು ರಾಜ್ ಮಧ್ಯೆ ಉತ್ತಮ ಬಾಂಧವ್ಯವಿತ್ತು. ಎರಡು ಕುಟುಂಬಗಳ ನಡುವೆಯೂ ಉತ್ತಮ ಬಾಂಧವ್ಯವಿತ್ತು. ಬಾಲಕೃಷ್ಣ ಅಭಿನಯದ ಗೌತಮಿಪುತ್ರ ಶಾತಕರ್ಣಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಅತಿಥಿಯಾಗಿ ನಟಿಸಿದ್ದರು. ಪುನೀತ್ ರಾಜ್‍ಕುಮಾರ್ ಅಭಿನಯದ ಪವರ್ ಚಿತ್ರದಲ್ಲಿ ಜ್ಯೂ.ಎನ್‍.ಟಿ.ಆರ್ ಹಾಡು ಹಾಡಿದ್ದರು.

ಅಂದ್ಹಾಗೆ, ರಾಮ್ ಗೋಪಾಲ್ ವರ್ಮ ಕೂಡ ಎನ್.ಟಿ.ಆರ್ ಅವರ ಜೀವನದ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರ ಬೇರೆ. ಈ ಚಿತ್ರ ಬೇರೆ ಎಂಬುದು ಗಮನಾರ್ಹ.

English summary
Dr.Rajkumar's role in NTR' Biography Movie. ಎನ್.ಟಿ.ಆರ್ ಅವರ ಜೀವನಾಧರಿತ ಚಿತ್ರದಲ್ಲಿ ಡಾ.ರಾಜ್ ಕುಮಾರ್ ಅವರ ಪಾತ್ರವೂ ಬರಲಿದೆಯಂತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X