»   » ಕನ್ನಡಿಗರ ಹೆಮ್ಮೆಯ ಕಣ್ಮಣಿ 'ಡಾ.ರಾಜ್'ಗೆ 11ನೇ ಪುಣ್ಯ ಸ್ಮರಣೆ

ಕನ್ನಡಿಗರ ಹೆಮ್ಮೆಯ ಕಣ್ಮಣಿ 'ಡಾ.ರಾಜ್'ಗೆ 11ನೇ ಪುಣ್ಯ ಸ್ಮರಣೆ

Posted By:
Subscribe to Filmibeat Kannada

ಕರ್ನಾಟಕ ರತ್ನ, ಗಾನಗಂಧರ್ವ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಡಾ.ರಾಜ್‌ಕುಮಾರ್ ಅವರು ನಮ್ಮನಗಲಿ ಇಂದಿಗೆ 11 ವರ್ಷಗಳು ಕಳೆದಿವೆ. ಈ ವಿಶೇಷ ಪುಣ್ಯ ಸ್ಮರಣೆಯ ದಿನದಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಅಭಿಮಾನಿಗಳು ಮತ್ತು ರಾಜ್ ಕುಟುಂಬದಿಂದ ವಿಶೇಷ ಪೂಜೆ ಮಾಡಲಾಯಿತು.[ಇಡೀ ಕರುನಾಡೇ ಕಣ್ಣೀರಿಟ್ಟ ಕರಾಳ ದಿನಕ್ಕೆ 11 ವರ್ಷ]

Dr Rajkumar's 11th Death Anniversary

ಪಾರ್ವತಮ್ಮ ರಾಜ್ ಕುಮಾರ್, ನಟ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಸೇರಿದಂತೆ ಅಣ್ಣಾವ್ರ ಕುಟುಂಬದ ಸದಸ್ಯರು ಇಂದು ಸ್ಮಾರಕಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

Dr Rajkumar's 11th Death Anniversary

ಈ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಹಾಗೂ ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ ಗೋವಿಂದು ಕೂಡ ಭಾಗಿಯಾಗಿದ್ದರು. ಇದಕ್ಕೂ ಮುಂಚೆ ಸದಾಶಿವನಗರದಲ್ಲಿರುವ ಡಾ.ರಾಜ್ ನಿವಾಸದಲ್ಲಿ ಕುಟುಂಬಸ್ಥರಿಂದ ಪೂಜೆ ನೆರವೇರಿಸಲಾಗಿತ್ತು.

Dr Rajkumar's 11th Death Anniversary

ನಟ ಸಾರ್ವಭೌಮನ ಸಮಾಧಿ ಬಳಿ ಇಂದು ಜನಸಾಗರವೇ ಹರಿದು ಬಂದಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ರಾಜ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ.

English summary
Today (April 12th 2017), Kannada Legend Actor Dr Rajkumar's 11th Death Anniversary.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada