ರಾಜ್ ಮೊಮ್ಮಗನ ಚಿತ್ರಕ್ಕೆ ಅಕ್ಷಯ ತೃತೀಯ ಮಹೂರ್ತ
ಸ್ಯಾಂಡಲ್ ವುಡ್ ಗೆ ರಾಜ್ ಕುಟುಂಬದ ಮೂರನೇ ತಲೆಮಾರಿನ ಕುಡಿ ಎಂಟ್ರಿಕೊಡೋ ಬಗ್ಗೆ ನಾವು ಈ ಹಿಂದೆಯೇ ಸಾಕಷ್ಟು ಬರೆದಿದ್ದೇವೆ. ಈಗ ಚಿತ್ರದ ಟೈಟಲ್ ಕನ್ಫರ್ಮ್ ಆಗಿದೆ. 'ಸಿದ್ದಾರ್ಥ' ಅನ್ನೋ ಸಾಫ್ಟ್ ಅಂಡ್ ಸೌಂಡಿಂಗ್ ಟೈಟಲ್ ಮೂಲಕ ವಿನಯ್ ರಾಜ್ ಸ್ಯಾಂಡಲ್ ವುಡ್ ಎಂಟ್ರಿಗೆ ವೇದಿಕೆ ರೆಡಿಯಾಗಿದೆ.
ಕಳೆದ ಮೂರು ವರ್ಷಗಳಿಂದ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಸಿನಿಮಾಗೆ ಎಂಟ್ರಿಕೊಡ್ತಾರೆ, ಹೀರೋ ಆಗ್ತಾರೆ ಅನ್ನೋ ಸುದ್ದಿ ಪ್ರತೀ ರಾಜ್ ಬರ್ತಡೇಗೂ ಸದ್ದು ಮಾಡ್ತಿತ್ತು. ರಾಘವೇಂದ್ರ ರಾಜ್ ಕುಮಾಮಾರ್ ಸದ್ಯದಲ್ಲೇ ಶುರುಮಾಡ್ತೀವಿ ಎಲ್ಲವನ್ನ ಹೇಳ್ತೀವಿ ಅಂತ ಹೇಳಿದಾಗ ವಿಷಯ ತಣ್ಣಗಾಗ್ತಿತ್ತು.
ಇತ್ತೀಚೆಗೆ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಹಲವು ಕರೆಗಳು ಹೋಗಿದ್ವು. ಯಾವಾಗ ವಿನಯ್ ರಾಜ್ ಎಂಟ್ರಿ ಅಂತ ರಾಘವೇಂದ್ರ ರಾಜ್ ಕುಮಾರ್ ಶಾಂತರಾಗಿ ಹೇಳಿದ್ರು. ನಿಮ್ಮ ಉತ್ಸಾಹ ಪ್ರೀತಿಗಾದ್ರೂ ಮಗನನ್ನ ಬೇಗ ಇಂಟ್ರುಡ್ಯೂಸ್ ಮಾಡ್ತೀನಿ ಅಂತ. ಮತ್ತೆ ಅದೇ ಹಳೇ ಮಾತು ಅಂತ ಪತ್ರಕರ್ತರು ಸುಮ್ಮನಾಗಿದ್ರು. ಚಿತ್ರದ ಮತ್ತಷ್ಟು ಡೀಟೈಲ್ಸ್ ವಿನಯ್ ರಾಜ್ ಕುಮಾರ್ ನ್ಯೂಲುಕ್ ಸ್ಲೈಡ್ ನಲ್ಲಿ ನೋಡಿ ಆನಂದಿಸಿ.

'ಸಿದ್ದಾರ್ಥ' ಸಿನಿಮಾ ಮೇ 2ಕ್ಕೆ ಮುಹೂರ್ತ
ಈಗ ಏಪ್ರಿಲ್ 24 ಬಂತು, ವಿನಯ್ ರಾಜ್ ಎಂಟ್ರಿ ಆಗಲಿಲ್ಲ ಅಂದುಕೊಂಡು ಸುಮ್ಮನಾದವ್ರಿಗೆ ಈಗ ಬಂಪರ್ ಸುದ್ದಿ. 'ಸಿದ್ದಾರ್ಥ' ಸಿನಿಮಾ ಮೇ 2ಕ್ಕೆ ಮುಹೂರ್ತ.

ಸಿದ್ಧಾರ್ಥ ಸಾಫ್ಟ್ ಅಂಡ್ ಸೌಂಡಿಂಗ್
ರಾಜ್ ಫ್ಯಾಮಿಲಿ ಸದಾ ಸರಳ ಮತ್ತು ಸದ್ಭಾವನೆಯ ಸಂಕೇತ. ಆ ಕುಟುಂಬಕ್ಕೆ ತಕ್ಕಂತೆ ಸಖತ್ ಸಾಫ್ಟ್ ಟೈಟಲ್ ಇಟ್ಟಿದ್ದಾರೆ. ಟೈಟಲ್ ಎಷ್ಟು ಸೈಲೆಂಟ್ ಅನ್ನಿಸ್ತಿದೆಯೋ ಅಷ್ಟೇ ಪವರ್ ಫುಲ್ ಕೂಡ.

ಮಿಲನ ನಿರ್ದೇಶಕ ಪ್ರಕಾಶ್ ಸಿನಿಮಾ
ಮಿಲನ ಸಿನಿಮಾ ಟೈಟಲ್ಲನ್ನೂ ಮೂರೇ ಅಕ್ಷರದಲ್ಲಿ ನೀಲಿ ಬಣ್ಣದಲ್ಲಿ ಡಿಸೈನ್ ಮಾಡಿಸಿದ್ದ ನಿರ್ದೇಶಕ ಪ್ರಕಾಶ್ ಮತ್ತೊಮ್ಮೆ ಲವಲವಿಕೆಯ ಟೈಟಲ್ ಮೊರೆ ಹೋಗಿದ್ದಾರೆ. ಜೊತೆಗೆ 'ಗೀವ್ ಮಿ ಅ ಬ್ರೇಕ್' ಅನ್ನೋ ಟ್ಯಾಗ್ ಲೈನ್ ಕೂಡ ಇದೆ.

ವಿನಯ್ ರಾಜ್ ಸ್ಟೈಲಿಷ್ ಹೀರೋ
ವಿನಯ್ ರಾಜ್ ಫೋಟೋಶೂಟ್ ಫಸ್ಟ್ ಲುಕ್ ನೋಡ್ತಿದ್ರೆ ಒಬ್ಬ ಸ್ಟೈಲಿಷ್ ಹೀರೋ ಲುಕ್ ಇಲ್ಲಿದೆ. ಗಿಟಾರ್ ಹಿಡಿದುಕೊಂಡು ಸಿಂಪಲ್ಲಾಗಿ ಕಾಲೇಜ್ ಹುಡುಗನ ಹಾಗೆ ನಡೆದು ಬರೋ ಲುಕ್ ಇದೆ.

ಲುಕ್ ಗೆ ಸ್ಪೆಷಲ್ ಇಂಪಾರ್ಟೆನ್ಸ್
ವಿನಯ್ ರಾಜ್ ಸಿಂಪಲ್ ಫೋಟೋಶೂಟ್ ನಡೆಸಿರೋ ಚಿತ್ರತಂಡ ವಿನಯ್ ರಾಜ್ ಲುಕ್ ಗೆ ಸ್ಪೆಷಲ್ ಇಂಪಾರ್ಟೆನ್ಸ್ ಕೊಟ್ಟಿದೆ. ರಾಜ್ ಕುಟುಂಬದ ಮೂರನೇ ತಲೆಮಾರಿನ ಓಪನಿಂಗ್ ಸಿನಿಮಾವನ್ನ ಸ್ವತಃ ಹೋಮ್ ಬ್ಯಾನರ್ನಿಂದ ನಿರ್ಮಾಣ ಮಾಡಲಾಗುತ್ತಿದೆ.

ಮಿಲನದಂತಹ ಲವ್ಲೀ ಸಿನಿಮಾ !
ಪಿವಿಆರ್ ನಲ್ಲಿ ಕನ್ನಡ ಚಿತ್ರವೊಂದು ಒಂದು ವರ್ಷ ಓಡಿದ್ದ ದಾಖಲೆ ಸೃಷ್ಟಿಸಿದ್ದು 'ಮಿಲನ' ಸಿನಿಮಾದ್ದು. ಮಿಲನ ನಿರ್ದೇಶಕ ಪ್ರಕಾಶ್ ಈಗ ಸಿದ್ದಾರ್ಥ ಸಿನಿಮಾಗೆ ಭರ್ಜರಿಯಾಗೆ ಸಿದ್ಧರಾಗಿದ್ದಾರೆ.

ವಿ.ಹರಿಕೃಷ್ಣ ಸಂಗೀತ
ಮಿಲನ ಸಿನಿಮಾವನ್ನ ಸಿಂಪಲ್ಲಾಗಿ ಮಾಡಿ ಮುಗಿಸೋ ಯೋಚನೆಯಲ್ಲಿರೋ ನಿರ್ದೇಶಕರು ಕಂಪ್ಲೀಟ್ ಸಿದ್ದಾರ್ಥ ತಂಡದ ಮಾಹಿತಿ ಕೊಡದಿದ್ರೂ ವಿ ಹರಿಕೃಷ್ಣಗೆ ಸಂಗೀತಕ್ಕೆ ತಯಾರಿ ಮಾಡಿಕೊಳ್ಳೋಕೆ ಹೇಳಿದ್ದಾರೆ.


Click it and Unblock the Notifications











