twitter
    For Quick Alerts
    ALLOW NOTIFICATIONS  
    For Daily Alerts

    ಡಾ.ರಾಜ್ ಕುಮಾರ್ 'ಕಸ್ತೂರಿ ನಿವಾಸ' ಚಿತ್ರಕ್ಕೆ 50 ವರ್ಷದ ಸಂಭ್ರಮ

    |

    'ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು...' ಈ ಹಾಡನ್ನು ಕೇಳದ ಕನ್ನಡಿಗರಿಲ್ಲ. ಡಾ. ರಾಜ್ ರಾಜ್ ಕುಮಾರ್ ನಟನೆಯ ಕಸ್ತೂರಿ ನಿವಾಸ ಸಿನಿಮಾದ ಹಾಡಿದು. 1971ರಲ್ಲಿ ತೆರೆಗೆ ಬಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು.

    ಜಿ.ಬಾಲಸುಬ್ರಹ್ಮಣ್ಯಂ ಅವರ ಕತೆ, ಡಾ. ರಾಜ್ ಕುಮಾರ್ ಅದ್ಭುತ ಅಭಿನಯ, ದೊರೆ ಭಗವಾನ್ ಅವರ ನಿರ್ದೇಶನ ಜನಮನ್ನಣೆಗಳಿಸಿತ್ತು. ಸ್ಯಾಂಡಲ್ ವುಡ್ ನ ಈ ಎವರ್ ಗ್ರೀನ್ ಸಿನಿಮಾ ರಿಲೀಸ್ ಆಗಿ 50 ವರ್ಷ ಪೂರೈಸಿದೆ. ಸುವರ್ಣಮಹೋತ್ಸವದ ಸಂಭ್ರಮದಲ್ಲಿರುವ ಕಸ್ತೂರಿ ನಿವಾಸ ಸಿನಿಮಾವನ್ನು ಮತ್ತೊಮ್ಮೆ ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ.

    ಡಾ ರಾಜ್ ಕುಮಾರ್ ಅವರ ನೆಚ್ಚಿನ ಟಿವಿ ಬಗ್ಗೆ ಜಗ್ಗೇಶ್ ಹೇಳಿದ ಕಥೆಡಾ ರಾಜ್ ಕುಮಾರ್ ಅವರ ನೆಚ್ಚಿನ ಟಿವಿ ಬಗ್ಗೆ ಜಗ್ಗೇಶ್ ಹೇಳಿದ ಕಥೆ

    ಚಿರಕಾಲ ಮನದಲ್ಲಿ ಉಳಿಯುವಂತ ಪಾತ್ರ

    ಚಿರಕಾಲ ಮನದಲ್ಲಿ ಉಳಿಯುವಂತ ಪಾತ್ರ

    ಚಿತ್ರದಲ್ಲಿ ಡಾ.ರಾಜ್ ಕುಮಾರ್ ಉದ್ಯಮಿಯಾಗಿ, ಗೆಳೆಯನಾಗಿ, ಭಗ್ನ ಪ್ರೇಮಿಯಾಗಿ ಮತ್ತು ಪತಿಯಾಗಿ ಕಾಣಿಸಿಕೊಂಡಿದ್ದಾರೆ. ಡಾ.ರಾಜ್ ಅವರ ಪಾತ್ರ, ಅಭಿನಯ ಚಿರಕಾಲ ಮನದಲ್ಲಿ ಉಳಿಯುವಂಥದ್ದು. ಡಾ.ರಾಜ್ ಕುಮಾರ್ ಗೆ ನಾಯಕಿಯರಾಗಿ ಜಯಂತಿ ಮತ್ತು ಆರತಿ ಕಾಣಿಸಿಕೊಂಡಿದ್ದರು.

    16 ಚಿತ್ರಮಂದಿರಗಳಲ್ಲಿ 100 ದಿನ ಪೂರೈಸಿದ ಸಿನಿಮಾ

    16 ಚಿತ್ರಮಂದಿರಗಳಲ್ಲಿ 100 ದಿನ ಪೂರೈಸಿದ ಸಿನಿಮಾ

    ವಿಶೇಷ ಎಂದರೆ ಕಸ್ತೂರಿ ನಿವಾಸ ಸಿನಿಮಾ ಸುಮಾರು 16 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಣೆ ಮಾಡಿತ್ತು. ಇನ್ನು ಚಿತ್ರದ ಹಾಡುಗಳು ಇಂದಿಗೂ ಗುನುಗುವಂತೆ ಇದೆ. ಪಿ.ಬಿ ಶ್ರೀನಿವಾಸ್, ಪಿ ಸುಶೀಲ, ಎಲ್ ಆರ್ ಈಶ್ವರಿ ಅವರ ಹಿನ್ನಲೆ ಗಾಯನ ಪದೇ ಪದೇ ಕೇಳಬೇಕು ಎನಿಸುತ್ತೆ.

    2014ರಲ್ಲಿ ಕಲರ್ ಫುಲ್ ಆದ ಕಪ್ಪು ಬಿಳುಪು ಕಸ್ತೂರಿ ನಿವಾಸ

    2014ರಲ್ಲಿ ಕಲರ್ ಫುಲ್ ಆದ ಕಪ್ಪು ಬಿಳುಪು ಕಸ್ತೂರಿ ನಿವಾಸ

    ಅಂದಹಾಗೆ 1971ರಲ್ಲಿ ತೆರೆಗೆ ಬಂದ ಕಪ್ಪುಬಿಳುಪು ಕಸ್ತೂರಿ ನಿವಾಸಕ್ಕೆ 2014ರಲ್ಲಿ ಬಣ್ಣ ತುಂಬಲಾಗಿದೆ. ಕಲರ್ ಫುಲ್ ಕಸ್ತೂರಿ ನಿವಾಸ ರೀ ರಿಲೀಸ್ ಆಗಿ ಉತ್ತಮ ಕಲೆಕ್ಷನ್ ಮಾಡಿತ್ತು. ಸುಮಾರು 2 ಕೋಟಿ ವೆಚ್ಚದಲ್ಲಿ ಕಸ್ತೂರಿ ನಿವಾಸ ಚಿತ್ರವನ್ನು ಕಲರ್ ಫುಲ್ ಮಾಡಿದ್ದು ಕೆಸಿಎನ್ ಮೋಹನ್.

    ಹೊಸ ತಂತ್ರಜ್ಞಾನದೊಂದಿಗೆ ಬರುತ್ತಿದೆ ಅಣ್ಣಾವ್ರ 'ಭಾಗ್ಯವಂತರು'ಹೊಸ ತಂತ್ರಜ್ಞಾನದೊಂದಿಗೆ ಬರುತ್ತಿದೆ ಅಣ್ಣಾವ್ರ 'ಭಾಗ್ಯವಂತರು'

    ರಿ-ರಿಲೀಸ್ ಆದಾಗಲು ಉತ್ತಮ ಕಲೆಕ್ಷನ್

    ರಿ-ರಿಲೀಸ್ ಆದಾಗಲು ಉತ್ತಮ ಕಲೆಕ್ಷನ್

    ಸಿನಿಮಾ ರಿ-ರಿಲೀಸ್ ಆದಾಗಲು ಉತ್ತಮ ಕಲೆಕ್ಷನ್ ಮಾಡಿತ್ತು. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದರು. ನಲವತ್ತು ವರ್ಷಗಳ ಬಳಿಕ ಕಪ್ಪು ಬಿಳುಪು ಸಿನಿಮಾ, ಅದರಲ್ಲೂ ಅಣ್ಣಾವ್ರ ಸಿನಿಮಾ ಕಲರ್ ಫುಲ್ ಆಗಿ ಬಂದಿರುವ ಸಿನಿಮಾವನ್ನು ಬೆಳ್ಳಿ ಪರದೆ ಮೇಲೆ ನೋಡುವುದೇ ಒಂದು ವರ್ಣನಾತೀತ ಅನುಭವವಾಗಿತ್ತು.

    ರಘುರಾಮ್ ಹೇಳಿದ್ದೇನು?

    ರಘುರಾಮ್ ಹೇಳಿದ್ದೇನು?

    ಈ ಸಿನಿಮಾದ ಬಗ್ಗೆ ನಿರ್ದೇಶಕ ಮತ್ತು ನಟ ರಘುರಾಮ್ ಮಾತನಾಡಿ, 'ಮನರಂಜನೆಗಾಗಿ ಚಿತ್ರಗಳನ್ನ ತಯಾರಿಸೋದು ಅಭ್ಯಾಸ. ಉತ್ತಮ ಮೌಲ್ಯ ಜೊತೆಗೆ ಕನ್ನಡ ಸಿನಿಮಾಗಳಿಗೆ ಅತ್ಯುತ್ತಮವಾದ ಘನತೆ, ಗಾಂಭೀರ್ಯದ ಮೆರಗು ತಂದಿದ್ದು ಅಪ್ಪಾಜಿಯ ಈ ಕಸ್ತೂರಿ ನಿವಾಸ. ಈ ಚಿತ್ರ ಸಿನಿಮಾಗಳ ಲೋಕದಲ್ಲಿ ಎಂದೆಂದೂ ಇತಿಹಾಸ' ಎಂದು ಹೇಳಿದ್ದಾರೆ.

    English summary
    Dr Rajkumar's Kasturi Nivasa Movie Completes 50 Years.
    Friday, January 29, 2021, 14:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X