ಶಿವಣ್ಣನ ಪೋಸ್ಟರ್ ಮುದ್ದಾಡಿದ ಅಣ್ಣಾವ್ರ ಸೋದರಿ ನಾಗಮ್ಮ; ಅಪ್ಪು ಸಾವಿನ ಸುದ್ದಿ ಇನ್ನೂ ಗೊತ್ತಿಲ್ಲ!

ಸಾಲು ಸಾಲು ಚಿತ್ರಗಳಲ್ಲಿ ನಿರತರಾಗಿರುವ ಶಿವಣ್ಣ ನೃತ್ಯ ಸಂಯೋಜಕ ಹಾಗೂ ನಿರ್ದೇಶಕ ಎ ಹರ್ಷ ಅವರ ಜತೆ ಮೊದಲಿಗೆ 2013ರಲ್ಲಿ ಭಜರಂಗಿ ಎಂಬ ಸಿನಿಮಾದಲ್ಲಿ ಅಭಿನಯಿಸಿ ಭರ್ಜರಿ ಬ್ಲಾಕ್‌ಬಸ್ಟರ್ ನೀಡಿದ್ದರು. ಮೊದಲ ಕಾಂಬಿನೇಶನ್‌ನಲ್ಲಿಯೇ ಅಬ್ಬರಿಸಿದ ಈ ಜೋಡಿ ವಜ್ರಕಾಯ ಎಂಬ ಸಿನಿಮಾ ಮಾಡಿ ಎರಡನೇ ಬಾರಿಗೆ ಜೊತೆಯಾಯಿತು.

ನಂತರ ಇಬ್ಬರ ಕಾಂಬಿನೇಷನ್‌ನ ಮೂರನೇ ಚಿತ್ರವಾಗಿ ಭಜರಂಗಿ 2 ಸಿನಿಮಾ ತೆರೆಕಂಡಿತ್ತು. ಈ ಚಿತ್ರ ಕಳೆದ ವರ್ಷ ಅಕ್ಟೋಬರ್ 29ರಂದು ಬಿಡುಗಡೆಗೊಂಡಿತ್ತು. ಹೀಗೆ ಮೂರು ಚಿತ್ರಗಳಲ್ಲಿ ಕೆಲಸ ಮಾಡಿರುವ ಶಿವಣ್ಣ ಮತ್ತು ಎ ಹರ್ಷ ಜೋಡಿ ನಾಲ್ಕನೇ ಬಾರಿಗೆ ಒಂದಾಗುತ್ತಿದ್ದು ಈ ಚಿತ್ರಕ್ಕೆ ವೇದ ಎಂಬ ಶೀರ್ಷಿಕೆ ಇಡಲಾಗಿದೆ.

ಚಿತ್ರ ಟೈಟಲ್ ಇದೂ ಕೂಡ ಭಜರಂಗಿ ರೀತಿಯ ವಿಭಿನ್ನ ಸಜ್ಜೆಕ್ಟ್ ಎಂಬ ಸೂಚನೆಯನ್ನು ನೀಡಿದ್ದು, ಚಿತ್ರದ ಪೋಸ್ಟರ್‌ಗಳು ವೈರಲ್ ಆಗಿದ್ದವು. ಇನ್ನು ಈ ಚಿತ್ರದ ಪೋಸ್ಟರ್ ಒಂದನ್ನು ಇದೀಗ ಶಿವರಾಜ್‌ಕುಮಾರ್ ಅವರ ಅತ್ತೆ ನಾಗಮ್ಮ ಅವರು ನೋಡಿ ಸಂತಸ ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ಸಹ ಕೆಟ್ಟ ಬೇಸರ ಆಗುವುದಂತೂ ಖಚಿತ.

ನಾಗಮ್ಮ ಅವರಿಗೆ ಇನ್ನೂ ತಿಳಿದಿಲ್ಲ ಅಪ್ಪು ನಿಧನದ ಸುದ್ದಿ

ನಾಗಮ್ಮ ಅವರಿಗೆ ಇನ್ನೂ ತಿಳಿದಿಲ್ಲ ಅಪ್ಪು ನಿಧನದ ಸುದ್ದಿ

ಈ ಅಕ್ಟೋಬರ್ 29 ಬಂದರೆ ಕರ್ನಾಟಕ ಕಂಡ ಅತಿಕೆಟ್ಟ ದಿನಕ್ಕೆ ಒಂದು ವರ್ಷ ತುಂಬಲಿದೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಳೆದ ವರ್ಷದ ಅಕ್ಟೋಬರ್ 29ರಂದು ನಿಧನ ಹೊಂದಿದ್ದರು. ಮುಂದಿನ ತಿಂಗಳ 29ಕ್ಕೆ ಅಪ್ಪು ನಿಧನ ಹೊಂದಿ ಒಂದು ವರ್ಷ ಕಳೆಯಲಿದೆ. ಆದರೆ ಇನ್ನೂ ಸಹ ಅಪ್ಪು ಅವರ ಅತ್ತೆ ನಾಗಮ್ಮ ಅವರಿಗೆ ಅಪ್ಪು ನಿಧನದ ಸುದ್ದಿಯನ್ನು ತಿಳಿಸಿಲ್ಲ. ಅಪ್ಪು ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದ್ದ ನಾಗಮ್ಮ ಅವರನ್ನು ಮನೆಯಲ್ಲೇ ಇರಿಸಲಾಗಿದ್ದು, ಅಪ್ಪು ವಿದೇಶಕ್ಕೆ ಶೂಟಿಂಗ್‌ಗೆ ತೆರಳಿದ್ದಾರೆ ಎಂದು ವಿಷಯವನ್ನು ಮುಚ್ಚಿಡಲಾಗಿದೆ.

ಶಿವಣ್ಣನ ಪೋಸ್ಟರ್ ಕಂಡು ಮುತ್ತಿಟ್ಟ ನಾಗಮ್ಮ

ಶಿವಣ್ಣನ ಪೋಸ್ಟರ್ ಕಂಡು ಮುತ್ತಿಟ್ಟ ನಾಗಮ್ಮ

ಇನ್ನು ಅಪ್ಪು ಇಲ್ಲ ಎಂಬ ನಿಜ ಗೊತ್ತಿಲ್ಲದ ನಾಗಮ್ಮ ಶಿವಣ್ಣವ ವೇದ ಚಿತ್ರದ ಪೋಸ್ಟರ್ ಕಂಡು "ಆಹಾ ಅಣ್ಣನೇ ಕಣಪ್ಪ.. ನಮ್ಮಣ್ಣ ಕಣಪ್ಪ" ಎಂದು ಪೋಸ್ಟರ್‌ಗೆ ಮುತ್ತಿಟ್ಟಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಣ್ಣನ ಮಕ್ಕಳ ಮೇಲೆ ಇಷ್ಟು ಪ್ರೀತಿಯನ್ನು ಹೊಂದಿರುವ ನಾಗಮ್ಮ ಅವರಿಗೆ ಅಪ್ಪು ಸಾವಿನ ಸುದ್ದಿ ಗೊತ್ತಾದರೆ ಗತಿಯೇನು, ಅವರಿಗೆ ಸುದ್ದಿ ತಿಳಿಯದಿರುವುದೇ ಒಳ್ಳೆಯದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಅತ್ತೆ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದ ಅಪ್ಪು

ಅತ್ತೆ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದ ಅಪ್ಪು

ಇನ್ನು ಅಪ್ಪು ಹೆಚ್ಚಾಗಿ ತಮ್ಮ ಗಾಜನೂರಿಗೆ ಭೇಟಿ ನೀಡಿ ಅಲ್ಲಿನ ಕುಟುಂಬಸ್ಥರ ಜತೆ ಕಾಲ ಕಳೆಯುತ್ತಿದ್ದರು. ಅಪ್ಪು ಕೊನೆಯದಾಗಿ ಗಾಜನೂರಿಗೆ ಭೇಟಿ ನೀಡಿದ್ದಾಗ ಇದೇ ನಾಗಮ್ಮನವರೆ ಜತೆಗೆ ಹಲವು ಫೋಟೊಗಳನ್ನು ತೆಗೆಸಿಕೊಂಡಿದ್ದರು. ಈ ಫೋಟೊಗಳನ್ನು ಅಪ್ಪು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದರು.

More from Filmibeat

English summary
Dr Rajkumar's sister Nagamma kissed Shiva Rajkumar's Veda movie poster and it's video goes viral. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X