ಅಣ್ಣಾವ್ರ ಅಭಿಮಾನಿಗಳಿಗೆ ಸಂತಸದ ಸುದ್ದಿ: ಹೊಸ ರೂಪದಲ್ಲಿ ಬರ್ತಿದೆ 'ಭಾಗ್ಯವಂತರು'

ಡಾ.ರಾಜ್ ಕುಮಾರ್ ಮತ್ತು ಸರೋಜದೇವಿ ಅಭಿನಯದ ಸೂಪರ್ ಹಿಟ್ ಭಾಗ್ಯವಂತರು ಸಿನಿಮಾ ಹೊಸ ರೂಪದಲ್ಲಿ ಬರಲು ಸಿದ್ಧವಾಗುತ್ತಿದೆ. 1977ರಲ್ಲಿ ರಿಲೀಸ್ ಆಗಿದ್ದ ಸಿನಿಮಾ ಇದಾಗಿದ್ದು, ನಿರ್ದೇಶಕ ಭಾರ್ಗವ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿತ್ತು. ಚಿತ್ರಕ್ಕೆ ದ್ವಾರಕೀಶ್ ಬಂಡವಾಳ ಹೂಡಿದ್ದರು.

Recommended Video

Amir Khan's staff tested corona positive:ಅಮೀರ್ ಖಾನ್ ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್

ಇದೀಗ ಹೊಸ ತಂತ್ರಜ್ಞಾನದಲ್ಲಿ ತೆರೆಗೆ ಬರಲು ಸಿದ್ಧತೆ ನಡೆಯುತ್ತಿದೆ. ವಿತರಕ ಎಂ. ಮುನಿರಾಜು ಅವರು 'ಭಾಗ್ಯವಂತರು' ಚಿತ್ರವನ್ನು ಮತ್ತೆ ರಿಲೀಸ್ ಮಾಡುತ್ತಿದ್ದಾರೆ. ಸಿನಿಮಾಸ್ಕೋಪ್ 7.1 ಮತ್ತು ಡಿ.ಐ ಅಳವಡಿಸಲಾಗುತ್ತಿದ್ದು, ಹೊಸ ರೂಪದಲ್ಲಿ ಸಿನಿ ಅಭಿಮಾನಿಗಳ ಮುಂದೆ ಬರುತ್ತಿದೆ.

ಸುಮಾರು 5 ತಿಂಗಳ ಹಿಂದೆಯೆ ಸಿನಿಮಾದ ಕೆಲಸಗಳು ಪ್ರಾರಂಭವಾಗಿದೆಯಂತೆ. ಎಲ್ಲವು ಅಂದುಕೊಂಡತೆ ಆಗಿದ್ದರೆ ಸಿನಿಮಾ ಡಾ.ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಲಾಕ್ ಡೌನ್ ಪರಿಣಾಮ ಸಿನಿಮಾ ಕೆಲಸಗಳು ಹಾಗೆ ಉಳಿದ ಪರಿಣಾಮ ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗಿಲ್ಲ. ಮತ್ತೆ ಸಿನಿಮಾ ಕೆಲಸಗಳ ಪ್ರಾರಂಭವಾಗಿದ್ದು, ಸಿನಿಮಾ ಪ್ರದರ್ಶನಕ್ಕೆ ಅನುಮತಿ ಸಿಗುತ್ತಿದ್ದಂತೆ ರಿಲೀಸ್ ಮಾಡಲು ತಯಾರಿ ನಡೆಸಲಾಗಿದೆ.

Dr.Rajkumars Super Hit Bhagyavantharu Movie All Set To Rerelease

ಕೌಟುಂಬಿಕ ಮೌಲ್ಯಗಳನ್ನು ಬಿತ್ತಿದ ಸಿನಿಮಾ ಇದಾಗಿದ್ದು, ಈ ಸಿನಿಮಾ ನೋಡಿದ ನಂತರ ಎಷ್ಟೊ ಕುಟುಂಬಗಳು ಒಂದಾದ ಪ್ರಸಂಗಗಳಿವೆ. ಈ ಎವರ್ ಗ್ರೀನ್ ಸಿನಿಮಾ ಇಂದಿನ ಪೀಳಿಗೆಯವರ ಮನಗೆಲ್ಲುತ್ತೆ.

More from Filmibeat

English summary
Dr.Rajkumar starrer super hit Bhagyavantharu movie all set to re release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X