For Quick Alerts
  ALLOW NOTIFICATIONS  
  For Daily Alerts

  ಸಿದ್ದಗಂಗಾ ಮಠದ 10 ಸಾವಿರ ಮಕ್ಕಳಿಗೆ ನೇತ್ರ ತಪಾಸಣೆ ಮಾಡಿಸಿದ ಅಪ್ಪು

  |
  Puneeth Rajkumar walks in his father's path | FILMIBEAT KANNADA

  ನಟ ಡಾ ರಾಜ್ ಕುಮಾರ್ ಕುಟುಂಬ ತಮ್ಮ ಟ್ರಸ್ಟ್ ಮೂಲಕ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇದೀಗ ಪುನೀತ್ ರಾಜ್ ಕುಮಾರ್ ನೇತ್ರ ತಪಾಸಣೆ ಮಾಡಿಸಿದ್ದಾರೆ.

  ತುಮಕೂರಿನ ಸಿದ್ದಗಂಗಾ ಮಠದ 10 ಸಾವಿರ ಮಕ್ಕಳಿಗೆ ಉಚಿತವಾಗಿ ನೇತ್ರ ತಪಾಸಣೆಯನ್ನು ಮಾಡಿಸಲಾಗಿದೆ. ಈ ಕಾರ್ಯಕ್ರಮ ಡಾ ರಾಜ್ ಕುಮಾರ್ ಟ್ರಸ್ಟ್, ಬೆಂಗಳೂರು ಹಾಗೂ ಡಾ ರಾಜ್ ಕುಮಾರ್ ನೇತ್ರ ಸಂಗ್ರಹಣ ಕೇಂದ್ರ ಬಿಡದಿ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು.

  ರಾಜ್ ಹುಟ್ಟುಹಬ್ಬಕ್ಕೆ ನೇತ್ರದಾನ ಮಾಡಿದ 'ಸರಿಗಮಪ' ತಂಡರಾಜ್ ಹುಟ್ಟುಹಬ್ಬಕ್ಕೆ ನೇತ್ರದಾನ ಮಾಡಿದ 'ಸರಿಗಮಪ' ತಂಡ

  ನಿನ್ನೆ (ನವೆಂಬರ್ 26) ನಡೆದ ಈ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ, ಸಹೋದರಿ ಪೂರ್ಣಿಮಾ, ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು, ಚಿತ್ರನಟ ದೊಡ್ಡಣ್ಣ ಹಾಗೂ ಸಾಧು ಕೋಕಿಲ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  ಕಣ್ಣಿನ ಪರೀಕ್ಷೆಯ ಜೊತೆಗೆ ಉಚಿತವಾಗಿ ಮಕ್ಕಳಿಗೆ ಕನ್ನಡಕಗಳನ್ನು ವಿತರಣೆ ಮಾಡಲಾಗಿತ್ತು. ಅಂದಹಾಗೆ, ಈ ವಿಷಯವನ್ನು ಪುನೀತ್ ರಾಜ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಜ್ ಕುಮಾರ್ ಕಣ್ಣು ದಾನ ಮಾಡಿ ಮಾದರಿ ಆಗಿದ್ದು, ಅದರ ಜೊತೆಗೆ ಈ ರೀತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.

  ನೇತ್ರದಾನ ಮಾಡಲು ಮುಂದಾದ ನಟ ಸಂಚಾರಿ ವಿಜಯ್ನೇತ್ರದಾನ ಮಾಡಲು ಮುಂದಾದ ನಟ ಸಂಚಾರಿ ವಿಜಯ್

  ಅಂದಹಾಗೆ, ಪುನೀತ್ ರಾಜ್ ಕುಮಾರ್ ಸದ್ಯ 'ಯುವರತ್ನ' ಸಿನಿಮಾದಲ್ಲಿ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ.

  English summary
  Dr Rajkumar trust held free eye test champion for Siddaganga Matha children.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X