ಪಂಚೆ ಕಟ್ಟಿಕೊಂಡೆ ಜಿಮ್ ಮಾಡುತ್ತಿದ್ದರು ಡಾ ರಾಜ್! ಅಪ್ಪನ ಫೊಟೋ ಕ್ಲಿಕ್ಕಿಸುತ್ತಿದ್ರು ಅಪ್ಪು

ಡಾ ರಾಜ್‌ ಕುಮಾರ್ ಕನ್ನಡಿಗರ ಕಣ್ಮಣಿ, ಕನ್ನಡಿಗರ ಆಸ್ತಿ, ಚಿತ್ರರಂಗದ ಮೇರು ನಟ. ಡಾ ರಾಜ್‌ಕುಮಾರ್ ಬಗ್ಗೆ ಏನು ಹೇಳಿದರೂ ಕಡಿಮೆಯೇ. ಯಾಕೆಂದರೆ ಅವರು ಚಿತ್ರರಂಗಕ್ಕೆ ಹಾಗೂ ಕನ್ನಡ ನಾಡು ನುಡಿಗೆ ಕೊಟ್ಟಂತಹ ಕೊಡುಗೆ ಅಷ್ಟಿಷ್ಟಲ್ಲ. ಕನ್ನಡವನ್ನೆ ಉಸಿರಾಗಿಸಿಕೊಂಡು, ಸಿನಿಮಾವನ್ನೆ ಜೀವ ಎಂದುಕೊಂಡು ಬದುಕಿದ್ದಷ್ಟು ದಿನವೂ ಇದ್ದ ಏಕೈಕ ವ್ಯಕ್ತಿ ಅಂದರೇ ಅದು ಡಾ ರಾಜ್‌ ಕುಮಾರ್ ಮಾತ್ರ. ಅಭಿನಯ ಅಂತ ಬಂದರೇ ಪರಾಕಾಯ ಪ್ರವೇಶ ಮಾಡುತ್ತಿದ್ದರು.

ಯಾವುದೇ ಪಾತ್ರ ಇರಲಿ, ಅದಕ್ಕೆ ಜೀವ ತುಂಬುವ ಕೆಲಸವನ್ನು ಡಾ ರಾಜ್‌ಕುಮಾರ್ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಸಿನಿಮಾ ಅಭಿನಯದ ಜೊತೆಗೆ ಶಿಸ್ತನ್ನು ಅಳವಡಿಸಿಕೊಂಡಿದ್ದ ಡಾ ರಾಜ್‌ ಅವರಿಗೆ ವ್ಯಾಯಾಮ ಮತ್ತು ಯೋಗ ಮಾಡುವ ಅಭ್ಯಾಸವು ಇತ್ತು. ಆದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಡಾ ರಾಜ್ ಈಗ ಯುವಕರು ಮಾಡುವಂತಹ ಜಿಮ್ ವರ್ಕ್‌ಔಟ್‌ಗಳನ್ನು ಆಗಲೇ ಮಾಡುತ್ತಿದ್ದರು ಅಂದರೇ ನೀವು ನಂಬಲೇಬೇಕು.

ಹೌದು. ಡಾ ರಾಜ್‌ ಯಾವತ್ತೂ ವ್ಯಾಯಾಮ ಮತ್ತು ಯೋಗಭ್ಯಾಸ ಮಾಡುವುದನ್ನು ಮರೆಯುತ್ತಿರಲಿಲ್ಲ. ಪ್ರತಿನಿತ್ಯವೂ ಬೆಳಗ್ಗೆ ಯೋಗ ಮತ್ತು ಸಂಜೆ ವ್ಯಾಯಾಮವನ್ನು ಡಾ ರಾಜ್ ತಪ್ಪಿಸುತ್ತಿರಲಿಲ್ಲ. ಹಾಗೇ ತನ್ನ ಊಟದ ನಂತರವೂ ಅವರಿಗೆ ಚಿಕ್ಕದಾಗಿ ವ್ಯಾಯಾಮ ಮಾಡುವ ಅಭ್ಯಾಸ ಕೂಡ ಇತ್ತು. ಆದರೆ ಯಾವತ್ತೂ ಜಿಮ್ ವರ್ಕ್‌ಔಟ್ ಮಾಡಿರದ ಡಾ ರಾಜ್‌ ಗೆ ಒಂದು ಸಂದರ್ಭದಲ್ಲಿ ಅದನ್ನು ಮಾಡುವ ಸಮಯ ಬಂದಿತ್ತು. ಜಿಮ್ ವರ್ಕ್‌ಔಟ್‌ಗಳನ್ನು ಡಾ ರಾಜ್‌ ಹೇಗೆ ಮಾಡುತ್ತಿದ್ದರು, ಯಾರು ಟ್ರೈನ್ ಮಾಡುತ್ತಿದ್ದರು ಎಂಬ ಇಂಟ್ರಸ್ಟಿಂಗ್ ವಿಚಾರವನ್ನು ಮುಂದೆ ಓದಿ.

ಕಾಲಿನ ಮಂಡಿ ಆಪರೇಷನ್ ಆಗಿದ್ದಾಗಲು ಬಿಡಲಿಲ್ಲ ವ್ಯಾಯಾಮ

ಕಾಲಿನ ಮಂಡಿ ಆಪರೇಷನ್ ಆಗಿದ್ದಾಗಲು ಬಿಡಲಿಲ್ಲ ವ್ಯಾಯಾಮ

ಡಾ ರಾಜ್‌ ಕುಮಾರ್ ಅವರಿಗೆ ಮಂಡಿ ಆಪರೇಷನ್ ಒಂದು ಆಗಿತ್ತು. ಚೆನೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಂಡಿ ಆಪರೇಷನ್ ಮಾಡಿಸಿಕೊಂಡು ಬಂದಿದ್ದ ಡಾ ರಾಜ್ ನಂತರ ಕೆಲವು ದಿನ ವಿಶ್ರಾಂತಿ ಪಡೆಯಲು, ಶೂಟಿಂಗ್ ನಲ್ಲಿ ಭಾಗಿ ಆಗದೇ ಇರಲು ವೈದ್ಯರು ತಿಳಿಸಿದ್ದರಂತೆ. ಅದರಂತೆ ತನ್ನ ನಿವಾಸಕ್ಕೆ ಬಂದು ದಿನಕಳೆಯುತ್ತಿದ್ದ ಡಾ ರಾಜ್ ವ್ಯಾಯಾಮ ಆದರೂ ಮಾಡುತ್ತೇನೆ ಎಂದು ಹೇಳುತ್ತಿದ್ದರಂತೆ. ಇದಕ್ಕೆ ಪಾರ್ವತಮ್ಮ ರಾಜ್‌ಕುಮಾರ್, ಈಗ ಬೇಡ ಸ್ವಲ್ಪ ಗುಣವಾಗಲಿ ಎಂದರೂ ಕೇಳುತ್ತಿರಲಿಲ್ಲವಂತೆ ಡಾ ರಾಜ್. ಆಗ ಪಾರ್ವತಮ್ಮ ಜಿಮ್ನಾಸ್ಟಿಕ್ ಮಾಸ್ಟರ್ ಅಪ್ಪು ವೆಂಕಟೇಶ್ ಅವರನ್ನು ಕರೆದು ಇವರಿಗೆ ಲಘು ವ್ಯಾಯಾಮವನ್ನು ಮಾಡಿಸು ಎಂದಾಗ ಸೈಕಲಿಂಗ್ ತರಹದ ವ್ಯಾಯಾಮವನ್ನು ಕೈನಲ್ಲೆ ಮಾಡಿಸುತ್ತಿದ್ದರು.

ತಾನು ಜಿಮ್ ಮಾಡುತ್ತೇನೆ ಎಂದು ಹಠ ಹಿಡಿದಿದ್ದರು ಡಾ ರಾಜ್

ತಾನು ಜಿಮ್ ಮಾಡುತ್ತೇನೆ ಎಂದು ಹಠ ಹಿಡಿದಿದ್ದರು ಡಾ ರಾಜ್

ಹೀಗೆ ಆಪರೇಷನ್ ಆದಂತಹ ದಿನಗಳಲ್ಲಿ ಡಾ ರಾಜ್ ಲಘು ವ್ಯಾಯಾಮವನ್ನು ಮಾಡುತ್ತಿದ್ದರು. ಆಗ ಪಾರ್ವತಮ್ಮ ತನ್ನ ಮಕ್ಕಳಿಗಾಗಿ ಮಲ್ಟಿ ಜಿಮ್ ಸ್ಟೇಷನ್ ಒಂದನ್ನು ಮನೆಗೆ ತರಿಸಿದ್ದರಂತೆ. ಇದನ್ನು ಗಮನಿಸಿದ ಡಾ ರಾಜ್ ಇದು ಏನು ಎಂದು ಅಪ್ಪು ವೆಂಕಟೇಶ್ ಬಳಿ ಕೇಳಿದ್ದರು. ಅದಕ್ಕೆ ಅವರು ಯುವಕರು ಜಿಮ್ ನಲ್ಲಿ ಬಳಸುವ ಉಪಕರಣ ಇದು. ಇದು ಒಂದರಲ್ಲೆ ನಾನಾ ತರಹ ಜಿಮ್ ವರ್ಕ್‌ಔಟ್ ಮಾಡಬಹುದು ಎಂದು ತಿಳಿಸಿದಾಗ , ಹಾಗಿದ್ದರೇ ನಾನು ಇದನ್ನು ಮಾಡುವೆ ಎಂದು ಡಾ ರಾಜ್ ಹಠ ಮಾಡಿದ್ದರಂತೆ. ಆಗ ವೆಂಕಟೇಶ್ "ಸರ್ ಇದು ಈಗಿನ ಯುವಕರು ಮಾಡೋದು ನಿಮಗೆ ಇದೆಲ್ಲ ಸರಿ ಆಗಲ್ಲ ಬೇಡ ಬಿಡಿ" ಎಂದಾಗ ಡಾ ರಾಜ್ ಯಾಕೆ ಆಗಲ್ಲ ಅಂತ ನಾನು ನೋಡ್ತಿನಿ, ನನಗೆ ಹೇಗೆ ಮಾಡೋದು ಹೇಳಿಕೊಡು ಸಾಕು ಎಂದು ಮಕ್ಕಳಿಗಾಗಿ ತಂದಿದ್ದ ಜಿಮ್ ಉಪಕರಣದಲ್ಲಿ ಡಾ ರಾಜ್ ವ್ಯಾಯಾಮ ಮಾಡಲು ಆರಂಭಿಸಿದ್ದರು.

ಪಂಚೆಯಲ್ಲೆ ಜಿಮ್ ಮಾಡಿ ಬೆರಗು ಮೂಡಿಸುತ್ತಿದ್ದ ರಾಜ್‌ಕುಮಾರ್

ಪಂಚೆಯಲ್ಲೆ ಜಿಮ್ ಮಾಡಿ ಬೆರಗು ಮೂಡಿಸುತ್ತಿದ್ದ ರಾಜ್‌ಕುಮಾರ್

ಹೀಗೆ ಹಠ ಮಾಡಿ ಜಿಮ್ ವರ್ಕೌಟ್ ಮಾಡಲು ಪ್ರಾರಂಬಿಸಿದ್ದ ಡಾ ರಾಜ್ ಅದಕ್ಕಾಗಿ ತನ್ನ ಬಟ್ಟೆ ಶೈಲಿಯನ್ನು ಬದಲಾಯಿಸಿಕೊಂಡಿರಲಿಲ್ಲ. ಪಂಚೆ ಟಿ ಶರ್ಟ್‌ನಲ್ಲಿ ಬಂದು ಬೆರಗು ಮೂಡಿಸುವಂತೆ ಜಿಮ್ ಮಾಡುತ್ತಿದ್ದರಂತೆ. ಅಪ್ಪು ವೆಂಕಟೇಶ್ ಅವರೊಂದಿಗೆ ಇದ್ದು ಅವರಿಗೆ ಸಹಾಯ ಮಾಡುತ್ತಿದ್ದರು. ಹಾಗೆ ಜಿಮ್ ಮಾಡುವಾಗ ಮುಂದಿನ ಸಿನಿಮಾದಲ್ಲಿ ನನ್ನ ದೇಹದಲ್ಲಿ ಬದಲಾವಣೆ ಆಗುತ್ತಾ? ಜನ ನನ್ನನ್ನು ಇಷ್ಟ ಪಡುತ್ತಾರ ಎಂದೆಲ್ಲಾ ಮಕ್ಕಳಂತೆ ಪ್ರಶ್ನೆ ಮಾಡುತ್ತಿದ್ದರಂತೆ. ಇದಿಷ್ಟೆ ಇಲ್ಲ ಈಗ ಯುವ ಜನತೆ ಜಿಮ್‌ನಲ್ಲಿ 30 ಕೆಜಿ ವೈಟ್ ಎತ್ತಲು ಕಷ್ಟ ಪಡುತ್ತಾರೆ. ಆದರೆ ಆಗಲೇ ಅಂದರೇ ಡಾ ರಾಜ್‌ ಅವರಿಗೆ 72ನೇ ವಯಸ್ಸಿಗೆ 80ಕೆಜಿ ತೂಕ ಎಳೆಯುತ್ತಿದ್ದರು. 80 ಕೆಜಿ ಯನ್ನು 80 ಸುತ್ತು ಎಳೆಯುತ್ತಿದ್ದರು, ಆದರೂ ಅವರು ಸುಸ್ತಾಗುತ್ತಿರಲಿಲ್ಲ. ಜಿಮ್ ಮಾಡುವಾಗಲೂ ನಗು ಮೊಗದಿಂದಲೇ ಮಾಡುತ್ತಿದ್ದರಂತೆ.

ಡಾ ರಾಜ್ ಗದೆ ಸುತ್ತುವ ಫೊಟೋ ತೆಗೆದಿದ್ದು ಪುನೀತ್‌ ರಾಜ್‌ ಕುಮಾರ್

ಡಾ ರಾಜ್ ಗದೆ ಸುತ್ತುವ ಫೊಟೋ ತೆಗೆದಿದ್ದು ಪುನೀತ್‌ ರಾಜ್‌ ಕುಮಾರ್

ಡಾ ರಾಜ್ ಗದೆಯನ್ನು ಇಟ್ಟುಕೊಂಡು ವ್ಯಾಯಾಮ ಮಾಡುತ್ತಿದ್ದರು. ಗದೆ ಸುತ್ತುವಲ್ಲಿ ಪರಿಣಿತರಾಗಿದ್ದ ಡಾ ರಾಜ್ ಅದರಲ್ಲಿ ಪಳಗಿ ಹೋಗಿದ್ದರು. ಗದೆ ಸುತ್ತವ ವ್ಯಾಯಾಮದ ಟ್ರಿಕ್‌ಗಳನ್ನು ಚೆನ್ನಾಗಿ ಅರಿತುಕೊಂಡಿದ್ದ ಡಾ ರಾಜ್ ಉಳಿದವರಿಗೂ ಅದನ್ನು ಹೇಳಿಕೊಡುತ್ತಿದ್ದರಂತೆ. ಇನ್ನು ವಿಶೇಷ ಅಂದರೇ ಈ ಫೋಟೋ ಕ್ಲಿಕ್ಕಿಸಿರೋದು ಸ್ವತಃ ಪುನೀತ್‌ ರಾಜ್‌ಕುಮಾರ್. ಆಗಷ್ಟೆ ತಂದಿದ್ದ ಹೊಸ ಕ್ಯಾಮರದಲ್ಲಿ ಪುನೀತ್ ಡಾ ರಾಜ್‌ ಅವರ ಚಿತ್ರವನ್ನು ತೆಗೆದಿದ್ದರು.

More from Filmibeat

English summary
Dr. Rajkumar was well-known not just because he was a movie star, but he was also popular for his fitness regimen and yoga practice. DR.Rajkumar Unseen rare photos of body workout photos goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X