twitter
    For Quick Alerts
    ALLOW NOTIFICATIONS  
    For Daily Alerts

    ಡಾ ರಾಜ್ ಕುಮಾರ್ ಪುಣ್ಯಸ್ಮರಣೆಗೂ ನೀತಿ ಸಂಹಿತೆ ಅಡ್ಡಿ

    By Pavithra
    |

    Recommended Video

    ಸರಳವಾಗಿ ನಡೆಯಲಿದೆ ರಾಜಕುಮಾರ್ ಪುಣ್ಯಸ್ಮರಣೆ | Filmibeat Kannada

    ಕನ್ನಡ ಸಿನಿಮಾರಂಗದ ಆರಾಧ್ಯ ದೈವ, ನಟ ಸಾರ್ವಭೌಮ ಡಾ ರಾಜ್ ಕುಮಾರ್ ಅಪಾರ ಅಭಿಮಾನಿಗಳನ್ನ ಅಗಲಿ ಇಂದಿಗೆ 12 ವರ್ಷಗಳು ಕಳೆದಿವೆ. ಆದರೆ ಇಂದಿಗೂ ಕನ್ನಡಿಗರ ಹಾಗೂ ಅಭಿಮಾನಿಗಳ ಮನಸ್ಸಿನಲ್ಲಿ ಅಣ್ಣಾವ್ರು ಜೀವಂತವಾಗಿ ಉಳಿದಿದ್ದಾರೆ. 12 ನೇ ವರ್ಷದ ಪುಣ್ಯ ಸ್ಮರಣೆಯನ್ನು ಇಂದು (ಏರ್ಪಿಲ್ 12) ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಆಚರಣೆ ಮಾಡಲಾಗುತ್ತಿದ್ದು ಡಾ ರಾಜ್ ಕುಟುಂಬಸ್ಥರು ಹಾಗೂ ಸಾಕಷ್ಟು ಕಲಾವಿದರು ಪೂಜೆಯಲ್ಲಿ ಭಾಗಿ ಆಗಲಿದ್ದಾರೆ.

    ಪಾರ್ವತಮ್ಮ ರಾಜ್ ಕುಮಾರ್ ನಿಧನರಾಗಿ 11 ತಿಂಗಳುಗಳು ಕಳೆದಿವೆ ಆದ್ದರಿಂದ ಮನೆಯಲ್ಲಿಯೂ ಪ್ರತಿವರ್ಷದಂತೆ ಪುಣ್ಯತಿಥಿ ಆಚರಣೆ ಮಾಡದಿರಲು ರಾಜ್ ಕುಮಾರ್ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಬೆಳ್ಳಿಗ್ಗೆ 9-30 ಸುಮಾರಿಗೆ ಶಿವರಾಜ್ ಕುಮಾರ್ , ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಕುಟುಂಬದ ಪ್ರತಿಯೊಬ್ಬರು ಸ್ಮಾರಕದ ಬಳಿ ಆಗಮಿಸಿ ಪೂಜೆಯಲ್ಲಿ ಭಾಗಿ ಆಗಲಿದ್ದಾರೆ. ಪ್ರತಿ ವರ್ಷದಂತೆ ಪುಣ್ಯಸ್ಮರಣೆ ಮಾಡಲು ಈ ಬಾರಿ ನೀತಿ ಸಂಹಿತೆ ಅಡ್ಡಿ ಆಗಿದ್ದು ಸರಳವಾಗಿ ಪೂಜೆ ಮಾಡಲು ಕಂಠೀರವ ಸ್ಟುಡಿಯೋ ಅಧಿಕಾರಿಗಳು ನಿರ್ಧರಿಸಿದ್ದಾರೆ.

    Dr Rajkumars death anniversary Observed today today(April 12th)

    'ಡಾ.ರಾಜ್ ಕುಮಾರ್ ರಸ್ತೆ' ಯಲ್ಲೊಂದು ಸಿನಿಮಾ'ಡಾ.ರಾಜ್ ಕುಮಾರ್ ರಸ್ತೆ' ಯಲ್ಲೊಂದು ಸಿನಿಮಾ

    ಇದೇ ಕಾರಣದಿಂದ ಒಂದು ತಿಂಗಳ ಹಿಂದೆಯೇ ಸ್ಮಾರಕಕ್ಕೆ ಸುಣ್ಣ-ಬಣ್ಣ ಮಾಡಿಸಿದ್ದು ಅನ್ನದಾನವನ್ನು ಹೊರತು ಪಡಿಸಿದಂತೆ ಸಾಮಾನ್ಯವಾಗಿ ಹೂವಿನ ಅಲಂಕಾರ ಹಾಗೂ ಪೂಜೆಗಾಗಿ ಬರುವ ಅಭಿಮಾನಿಗಳಿಗೆ ಕೂರುವ ವ್ಯವಸ್ಥೆಯನ್ನ ಮಾಡಲಾಗಿದೆ.

    ಇನ್ನು ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಆಚರಣೆಯೂ ಸ್ಮಾರಕದ ಬಳಿ ಸರಳವಾಗಿ ನಡೆಸಲಾಗುತ್ತದೆ. ಮುಂದಿನ ತಿಂಗಳು ಪಾರ್ವತಮ್ಮನವರ ವರ್ಷದ ಪುಣ್ಯ ತಿಥಿ ಇರುವುದರಿಂದ ಅಣ್ಣಾವ್ರ ಮನೆಯಲ್ಲಿ ಯಾವುದೇ ಹಬ್ಬಗಳನ್ನು ಆಚರಣೆ ಮಾಡುತ್ತಿಲ್ಲ. ಒಟ್ಟಾರೆ ಕನ್ನಡ ಚಿತ್ರರಂಗದ ಮುತ್ತು ಕೋಟಿ ಕೋಟಿ ಅಭಿಮಾನಿಗಳ ಮನಸ್ಸಿನಲ್ಲಿ ಯಾವಾಗಲು ಜೀವಂತ ಎನ್ನುವುದು ಮಾತ್ರ ಸತ್ಯ.

    ಅಣ್ಣಾವ್ರು ಡಾಕ್ಟರೇಟ್ ಪಡೆದ ಆ ಕ್ಷಣಕ್ಕೆ 42 ವರ್ಷ: ಹೇಗಿತ್ತು ಆ ದಿನ?ಅಣ್ಣಾವ್ರು ಡಾಕ್ಟರೇಟ್ ಪಡೆದ ಆ ಕ್ಷಣಕ್ಕೆ 42 ವರ್ಷ: ಹೇಗಿತ್ತು ಆ ದಿನ?

    English summary
    Kannada matinee idol, Annavru Dr Rajkumar's death anniversary Observed today today(April 12th), His Sons Shivraj Kumar, Puneet Rajkumar and Raghavendra Rajkumar Will take part in ceremony at Kanteerava studio in Bengaluru.
    Thursday, April 12, 2018, 9:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X