ಡಾ.ರಾಜ್​ಕುಮಾರ್ ಅವರ ಹೆಸರನ್ನು ಕೇವಲ ಚಪ್ಪಾಳೆಗಾಗಿ ಮಾತ್ರ ಬಳಸಲಾಗುತ್ತಿದೆ- ಕಿಶೋರ್..!

ಸಿನಿಮಾ ಮಂದಿ ಅದರಲ್ಲಿಯೂ ನಟಿಯರು ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಅಂತಿರೋದೇ ಹೆಚ್ಚು. ಇಲ್ಲಿ ಹೆಚ್ಚಿನವರಿಗೆ ಸಿನಿಮಾ ಕೂಡಾ ಅನ್ನಿಸಿದ್ದನ್ನು ಹೇಳುವ, ಆ ಮೂಲಕ ಜಾಗೃತಿ ಮೂಡಿಸುವ ಮಾಧ್ಯಮ ಅಂತಲೂ ಅನ್ನಿಸೋದಿಲ್ಲ.

ಆದರೆ ಕನ್ನಡ ಚಿತ್ರರಂಗದ 'ಹುಲಿ' ಕಿಶೋರ್ ಇದಕ್ಕೆ ತದ್ವಿರುದ್ಧ. ಸಮಾಜದ ಆಗು-ಹೋಗುಗಳ ಬಗ್ಗೆ ಮೊದಲಿಂದ ಧ್ವನಿ ಎತ್ತುತ್ತಾ, ಕಳೆದ ಹತ್ತು ವರ್ಷಗಳಿಂದ ಬಲಪಂಥೀಯವರ ಕೆಂಗಣ್ಣಿಗೆ ಗುರಿಯಾಗ್ತಾನೇ ಬಂದ ಕಿಶೋರ್, ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಇತಿಹಾಸದ ಬಗ್ಗೆ ಮಾತನಾಡಿದ್ದಾರೆ. ಇತಿಹಾಸ ಪುರುಷರನ್ನು ನೆನಪಿಸಿಕೊಂಡಿದ್ದಾರೆ.

Dr Rajkumar s name is being used by many just to gain applause actor Kishore remarks at BIFFes

ಇವತ್ತು ಕುವೆಂಪು ಅವರು ಪ್ರಸ್ತುತ ಎಂದು ಹೇಳಿ ಇವತ್ತು ಕೂಡ ನಾವು ಬದಲಾಗಿಲ್ಲ ಎಂದು ತಮ್ಮ ಬೇಸರ ಹೊರ ಹಾಕಿದ್ದಾರೆ. ಇದೇ ವೇಳೆ ಡಾ.ರಾಜ್ ಕುಮಾರ್ ಅವರನ್ನು ಕಿಶೋರ್ ಸ್ಮರಿಸಿದ್ದಾರೆ. ಜಾತಿ ಪದ್ದತಿಯ ವಿರುದ್ದ ಧ್ವನಿ ಎತ್ತಿ ಸಮಾನತೆಯನ್ನು ಸಾಧಿಸಿದ ಉದಾಹರಣೆಯನ್ನು ನೀಡುವ ಸಮಯದಲ್ಲಿ ಸಾಂಸ್ಕ್ರತಿಕ ರಾಯಭಾರಿ ಡಾ,ರಾಜ್ ಕುಮಾರ್ ಅವರ ಚಿತ್ರಗಳನ್ನು ಪ್ರಸ್ತಾಪಿಸಿದ್ದಾರೆ.

ಇದೇ ಸಮಯದಲ್ಲಿ ಡಾ.ರಾಜ್ ಕುಮಾರ್ ಅವರ ಹೆಸರು ಕೇಳಿ ಅಲ್ಲಿದ್ದವರೆಲ್ಲ ಚಪ್ಪಾಳೆ ಹೊಡೆದಾಗ ಮಾತನಾಡಿರುವ ಕಿಶೋರ್ ತಮಾಷೆ ಏನೆಂದರೆ ಡಾ.ರಾಜ್ ಕುಮಾರ್ ಅವರ ಹೆಸರನ್ನು ನಾವು ಚಪ್ಪಾಳೆಗಾಗಿ ಮಾತ್ರ ಬಳಸುತ್ತಿದ್ದೇವೆ ಎಂದು ತಮ್ಮ ಬೇಸರ ಹೊರ ಹಾಕಿದ್ದಾರೆ. ಅದಕ್ಕಿಂತ ಆಚೆ ನೋಡೋಣ ಎಂದು ಡಾ.ರಾಜ್ ಕುಮಾರ್ ಚಿತ್ರಗಳನ್ನು ಉದಾಹರಣೆಯನ್ನಾಗಿ ನೀಡಿದ್ದಾರೆ. ಮೊದಲ ಉದಾಹರಣೆಯಾಗಿ ಬೇಡರ ಕಣ್ಣಪ್ಪ ಚಿತ್ರದ ಕುರಿತು ಮಾತನಾಡಿದ್ದಾರೆ.

ದೇವಸ್ಥಾನದಲ್ಲಿ ಮಾಂಸಾನಾ ? ಎಂದು ಇವತ್ತು ಕೂಡ ನಾವು ಹುಬ್ಬೇರಿಸುತ್ತಿದ್ದೇವೆ ಆದರೆ ಆ ಕಾಲದಲ್ಲಿಯೇ ದೇವರಿಗೆ ಮಾಂಸವನ್ನು ಅರ್ಪಿಸಿದವನು ಕಣ್ಣಪ್ಪ ಎಂದು ಹೇಳಿರುವ ಕಿಶೋರ್ ಈ ಕಣ್ಣಪ್ಪ ಭಕ್ತಿಯನ್ನು ಹೇಳುತ್ತಾನೇ ಧರ್ಮದ ಸರಿ ತಪ್ಪುಗಳನ್ನು ಒರೆಗಲ್ಲಿಗೆ ಹಚ್ಚಿ, ಕಟ್ಟಾ ಸಂಪ್ರದಾಯಸ್ಥರು ಸ್ವ ಇಚ್ಛೆಯಿಂದ ಹೌದು ಇವನು ಸರಿ ಅನ್ನೋ ತರ ಸಮಾನತೆಗೆ ಮುಖ ಮಾಡುವಂತೆ ದೂಡಿದ ನಾಯಕ ಕಣ್ಣಪ್ಪ ಎಂದು ಹೇಳಿದ್ದಾರೆ.

ಇನ್ನು ಸನಾದಿ ಅಪ್ಪಣ್ಣ ಚಿತ್ರದ ಸನ್ನಿವೇಶವೊಂದನ್ನು ಕೂಡ ಉದಾಹರಣೆಯನ್ನಾಗಿ ನೀಡಿರುವ ಕಿಶೋರ್, ಜಯಪ್ರಧಾ ಅವರು ದೇವಸ್ಥಾನದಲ್ಲಿ ಡ್ಯಾನ್ಸ್ ಮಾಡುತ್ತಿರುತ್ತಾರೆ, ರಾಜ್ ಕುಮಾರ್ ಅವರು ಅಂದರೆ ಅಪ್ಪಣ್ಣ ಸನಾಧಿ ನುಡಿಸುತ್ತಿರುತ್ತಾರೆ, ಹೀಗೆ ನುಡಿಸುತ್ತಾ ನುಡಿಸುತ್ತಾ ಡ್ಯಾನ್ಸ್ ಮುಗಿದು ಹೋಗುತ್ತೆ, ಆದರೆ ಇವರು ತಲ್ಲೀನರಾಗಿ ಹಾಗೇ ನುಡಿಸುತ್ತಿರುತ್ತಾರೆ ಸ್ವಲ್ಪ ಸಮಯದ ನಂತರ ಮುಗಿಸುತ್ತಾರೆ, ಅಷ್ಟರೊಳಗೆ ಮಂಗಳಾರತಿ ಮುಗಿಯುತ್ತೆ, ಮಂಗಳಾರತಿ ಮುಗಿದ ನಂತರ ಪೂಜಾರಿ ಬಂದು ಕರ್ಪೂರವನ್ನು ಇವರ ಎದುರು ನೆಲದ ಮೇಲೆ ತಳ್ಳಿ ಹೋಗುತ್ತಾನೆ, ನಾವೆಲ್ಲ ಈಗಿನ ಕಾಲದ ಬಂಡಾಯದವರು ಶೋಷಣೆಯ ವಿರುದ್ದ, ಜಾತಿ ಪದ್ದತಿಯ ವಿರುದ್ದ ಧ್ವನಿ ಎತ್ತಬೇಕು ಅಂದರೆ ಅಲ್ಲೇ ಎತ್ತಿ ಬಿಡುತ್ತಿದ್ವಿ ಆದರೆ ರಾಜ್ ಕುಮಾರ್ ಅವರು ಏನು ಮಾಡೋದಿಲ್ಲ, ಸನಾದಿ ಅಪ್ಪಣ್ಣ ಅಲ್ಲೇನು ಮಾಡುವುದಿಲ್ಲ, ಭಕ್ತಿಯಿಂದ ಆ ಕರ್ಪೂರಕ್ಕೆ ನಮಸ್ಕಾರ ಮಾಡಿ ಕಣ್ಣಿಗೊತ್ತಿಕೊಂಡು ಎದ್ದು ಹೋಗುತ್ತಾರೆ, ಆದರೆ ನೋಡುಗರಿಗೆ ಮೈಯೆಲ್ಲ ಉರಿಯುತ್ತೆ, ಅದು ಡಾ.ರಾಜ್ ಕುಮಾರ್ ಅವರ ಸಿನಿಮಾದ ಅರಿವು ಅಂತ ನನಗೆ ಅನ್ಸುತ್ತೆ ಎಂದು ಕಿಶೋರ್ ಹೇಳಿದ್ದಾರೆ. ಬರೀ ರಾಜ್ ಕುಮಾರ್ ಅವರನ್ನು ಮೆಚ್ಚುವವರು ಅಥವಾ ಶೋಷಣೆಗೆ ಒಳಗಾದವರಿಗೆ ಮಾತ್ರ ಮೂ ಉರಿಯಲ್ಲ ಬದಲಿಗೆ ಸವರ್ಣಿಯರಿಗೂ ಕೂಡ ಅದೇ ಭಾವನೆ ಹುಟ್ಟಿಸುವ ಒಂದು ದೃಶ್ಯಾ ಅದು ಎಂದು ಕಿಶೋರ್ ಹೇಳಿದ್ದಾರೆ.

ಮುಂದುವರೆದು ಸತ್ಯ ಹರಿಶ್ಚಂದ್ರ ಚಿತ್ರದ ಕುಲದಲ್ಲಿ ಕೀಳ್ಯಾವುದೋ ಹಾಡಿನ ಉದಾಹರಣೆಯನ್ನು ಕೂಡ ನೀಡಿರುವ ಕಿಶೋರ್ ಆ ಹಾಡು ಸಮಾನತೆಯ ರಾಷ್ಟ್ರಗೀತೆ ಎಂದೇ ನಾವು ಹೇಳಬಹುದು ಎಂದು ಕೂಡ ಕಿಶೋರ್ ಹೇಳಿದ್ಧಾರೆ.

More from Filmibeat

Read more about: kishore biffes filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X