ಡಾ.ರಾಜ್ ಕುಮಾರ್ ಅವರ ಅಪರೂಪದ ಫೋಟೊ ಹಂಚಿಕೊಂಡ ಮೊಮ್ಮಗ ; ವೈರಲ್ ಫೋಟೊ ವಿಶೇಷತೆ ಏನು ?

ಕನ್ನಡ ಚಿತ್ರರಂಗದ ಮಾಸದ ಮುತ್ತು, ಕರ್ನಾಟಕದ ಸಾಂಸ್ಕ್ರತಿಕ ರಾಯಭಾರಿ ವರನಟ ಡಾ.ರಾಜ್ ಕುಮಾರ್ ಅವರನ್ನ ಹೊರತು ಪಡಿಸಿದ ಕನ್ನಡ ಚಿತ್ರರಂಗದ ಇತಿಹಾಸ ಸಮಾಪ್ತಿಯಾಗದು. 52 ವರ್ಷದ ತಮ್ಮ ಸಿನಿ ಬದುಕಿನಲ್ಲಿ ಮುತ್ತುರಾಜ್ ಮಾಡದ ಪಾತ್ರಗಳಿಲ್ಲ. ಶಿವಭಕ್ತ ಬೇಡರ ಕಣ್ಣಪ್ಪ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಜ್, ಕೊನಯವರೆಗೆ ಅಭಿಮಾನಿ ದೇವರುಗಳ ಭಕ್ತರಾಗಿಯೇ ಉಳಿದು ಬಿಟ್ರು.

ಇಂಥಾ ಡಾ.ರಾಜ್ ಕುಮಾರ್ ಕನ್ನಡಿಗರನ್ನು ಅಗಲಿ 19 ವರ್ಷಗಳಾದರು ಕೂಡ ಅಭಿಮಾನಿಗಳ ಹೃದಯದಲ್ಲಿ ಇವತ್ತು ಕೂಡ ಡಾ.ರಾಜ್ ಕುಮಾರ್ ಜೀವಂತವಾಗಿದ್ದಾರೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಡಾ.ರಾಜ್ ಕುರಿತಾದ ಅನೇಕ ವಿಚಾರಗಳು ಇವತ್ತು ಕೂಡ ಚರ್ಚೆಯಾಗುತ್ತವೆ. ಕನ್ನಡ ನಾಡು ನುಡಿಯ ವಿಚಾರ ಬಂದಾಗ ಅಣ್ಣಾವ್ರ ಹೆಸರು ಪ್ರಸ್ತಾಪವಾಗುತ್ತೆ.

Dr Rajkumar s old photo shared by his grandson Dheeren has gone viral

ಏಪ್ರಿಲ್ ಬಂತು ಅಂದರೆ ಪ್ರತಿವರ್ಷ ಅಭಿಮಾನದ ಮೆರವಣಿಗೆ ನಡೆಯುತ್ತೆ. ಸಾಮಾಜಿಕ ಜಾಲತಾಣದಲ್ಲಿ ಡಾ.ರಾಜ್ ಕುಮಾರ್ ಹೆಸರು ಟ್ರೆಂಡ್ ಆಗುತ್ತೆ. ವರನಟನ ಅಪರೂಪದ ಫೋಟೊನ ಯಾರಾದರೂ ಹಂಚಿಕೊಂಡರೆ ಆ ಫೋಟೊ ಕ್ಷಣಾರ್ಧದಲ್ಲಿಯೇ ವೈರಲ್ ಕೂಡ ಆಗುತ್ತೆ. ಇದಕ್ಕೆ ಧೀರೆನ್ ಹಂಚಿಕೊಂಡ ಎರಡು ಫೋಟೊಗಳು ಸದ್ಯದ ಸಾಕ್ಷಿ.

ಹೌದು, ಅಣ್ಣಾವ್ರ ಮೊಮ್ಮಗ ಧೀರೇನ್ ರಾಮ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರ ಕಣ್ಮಣಿಯ ಎರಡು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಫೋಟೊ ಹಿಂದಿನ ಕಥೆಯನ್ನು ಕೂಡ ಹೇಳಿದ್ದಾರೆ. ಸದ್ಯ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 2006ರಲ್ಲಿ ಡಾ.ರಾಜ್‌ಕುಮಾರ್ ಅಗಲುವ ಕೆಲವು ದಿನಗಳ ಮುಂಚೆ ಸೆರೆ ಹಿಡಿಯಲಾದ ಈ ಫೋಟೊದಲ್ಲಿ ಡಾ.ರಾಜ್ ಅವರನ್ನು ಕೂಲಿಂಗ್ ಗ್ಲಾಸ್‌ ನಲ್ಲಿ ಸಖತ್ ಸ್ಟೈಲಿಶ್ ಆಗಿ ನೋಡಬಹುದು.

ಈ ಕುರಿತು ಬರೆದುಕೊಂಡಿರುವ ಧೀರೇನ್, ಚಿಕ್ಕಮಾಮಾನ ಅಜಯ್ ಚಿತ್ರದ ಕಾಸ್ಟೂಮ್‌ಗಳನ್ನು ಟ್ರಯಲ್ ಮಾಡುವ ಸಮಯದಲ್ಲಿ, ಅಜ್ಜಿಯ ನೋಕಿಯಾ ಫೋನ್‌ನಲ್ಲಿ ಸೆರೆಹಿಡಿಯಲಾದ ಅಪರೂಪದ ಫೋಟೊವನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಧೀರೇನ್ ಹಂಚಿಕೊಂಡಿರುವ ಅಣ್ಣಾವ್ರ ಈ ಅಪರೂಪರ ಫೋಟೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳ ಹೃದಯವನ್ನು ಕೂಡ ಗೆದ್ದಿದೆ. ಹಲವಾರು ಅಭಿಮಾನಿಗಳು ಈ ಫೋಟೊಗೆ ಮೆಚ್ಚುಗೆಯನ್ನು ಸೂಚಿಸಿ ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಎವರ್‌ ಗ್ರೀನ್ ಹೀರೋ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಅಣ್ಣಾವ್ರನ್ನು ಸ್ಟೈಲ್ ಕಿಂಗ್ ಎಂದು ಕರೆದಿದ್ದಾರೆ. ಬಾಂಡ್ ಜೇಮ್ಸ್ ಬಾಂಡ್, ಆ ನಗು, ನನ್ನ ದೇವರು, ರಾಜ್ ದಿ ಶೋ ಮ್ಯಾನ್, ಅತ್ಯಮೂಲ್ಯವಾದ ಫೋಟೊ ಎಂದೆಲ್ಲ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ನಾವು ಕದಂಬರು ಕನ್ನಡ ತಾಯಿಯ ಮಡಿಲಲ್ಲಿ ಬೆಳೆದ ಮಕ್ಕಳು. ಕನ್ನಡಿಗರ ನೀತಿ ಕನ್ನಡಿಗರ ಸಂಸ್ಕೃತಿ ನಮ್ಮ ರಕ್ತದ ನರ ನಾಡಿಗಳಲ್ಲೂ ಹರಿದಾಡುತ್ತ ಇರುತ್ತದೆ.. ಇದು ನನ್ನ ಅಚ್ಚು ಮೆಚ್ಚಿನ ಸಂಭಾಷಣೆ ಮಯೂರ ಚಿತ್ರದ್ದು ಅಂತ ಹೇಳಿದ್ದಾರೆ. ಈ ಮೂಲಕ ಡಾ.ರಾಜ್ ಕುಮಾರ್ ಅವರನ್ನು ಸ್ಮರಿಸಿದ್ದಾರೆ.

ಇನ್ನುಳಿದಂತೆ ಡಾ ರಾಜ್ ಕುಮಾರ್ ಬದುಕಿದ್ದರೆ ಈ ವರ್ಷ ಅವರು 96ನೇ ವರ್ಷಕ್ಕೆ ಕಾಲಿರಿಸುತ್ತಿದ್ದರು. ಆದರೆ ದುರಾದೃಷ್ಟವಶಾತ್ ಅವರಿಂದು ದೈಹಿಕವಾಗಿ ನಮ್ಮೊಡನಿಲ್ಲ. ಅಣ್ಣಾವ್ರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಪ್ರತಿ ವರ್ಷ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ವರ್ಷ ಕೂಡ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ಡಾ ರಾಜ್ ಕುಮಾರ್ ಅವರ ಅಭಿಮಾನಿಗಳು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ರಕ್ತದಾನ, ಅನ್ನದಾನ ಸೇರಿ ಹಲವಾರು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X