ಕ್ಲಾಸ್-ಮಾಸ್, ಆನಂದ್ To ಕ್ಯಾಪ್ಟನ್ ಮಿಲ್ಲರ್.. ಚಿತ್ರರಂಗದಲ್ಲಿ 38 ವರ್ಷ ಪೂರೈಸಿದ ಶಿವಣ್ಣ ...!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ. ಕ್ಲಾಸ್, ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಅನ್ನುವಂಥಾ ಮನಸ್ಥಿತಿ ಇವರದ್ದು.ಬಹುಶಃ ಡಾ.ರಾಜ್‌ಕುಮಾರ್ ಅವರನ್ನು ಹೊರತು ಪಡಿಸಿದರೆ, ವೆರೈಟಿ ಪಾತ್ರಗಳನ್ನು ಮಾಡಿದ, ಹೊಸಾ ಪ್ರಯೋಗಗಳಿಗೂ ಒಗ್ಗಿಕೊಂಡ ಮತ್ತೋರ್ವ ನಟ ಅಂದರೆ ಅದು ಡಾ.ಶಿವರಾಜ್ ಕುಮಾರ್ ಮಾತ್ರ. ಇಂಥಹ ಶಿವಣ್ಣ ಚಿತ್ರರಂಗಕ್ಕೆ ಬಂದು ಇಂದಿಗೆ 38 ವರ್ಷಗಳಾಗಿವೆ.

1986ರಲ್ಲಿ ಇದೇ ದಿನ ಅಂದರೆ ಫೆಬ್ರವರಿ 19ರಂದು, ಶಿವಣ್ಣ ಮೊದಲ ಬಾರಿ ಬಣ್ಣ ಹಚ್ಚಿದ್ದರು. ಆನಂದ್ ರೂಪದಲ್ಲಿ ಅಖಾಡಕ್ಕಿಳಿದರು. ಫೆಬ್ರವರಿ 19-1986ರಲ್ಲಿ ಸೆಟ್ಟೇರಿದ್ದ ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನದ ಆನಂದ್ ಚಿತ್ರವನ್ನ ಮಗನಿಗಾಗಿ ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣ ಮಾಡಿದ್ದರು. ಆ ಕಾಲಕ್ಕೆ ಗಲ್ಲಾಪಟ್ಟಿಗೆಯಲ್ಲಿ ಸದ್ದು ಮಾಡಿದ್ದ ಆನಂದ್, ಕನ್ನಡಿಗರ ಆನಂದವನ್ನ ಇಮ್ಮಡಿಗೊಳಿಸಿತ್ತು. ಇನ್ನೂ ಶಂಕರ್ ಗಣೇಶ್ ಸಂಗೀತ ಹಾಗೂ ಚಿ ಉದಯ ಶಂಕರ್ ಸಾಹಿತ್ಯದಲ್ಲಿ ಬಂದ ಹಾಡುಗಳು ಇವತ್ತು ಕೂಡ ಜನಪ್ರಿಯ. ವಿಶೇಷವಾಗಿ ಟುವ್ವಿ.. ಟುವ್ವಿ..

Dr. Shiva Raj Kumar Completes 38 Years In Sandalwood

ಆನಂದ್ ಚಿತ್ರದ ನಂತರ ರಥಸಪ್ತಮಿ, ಮನ ಮೆಚ್ಚಿದ ಹುಡುಗಿ ಸಿನಿಮಾಗಳು ಶಿವಣ್ಣ ಅವರಿಗೆ ಹ್ಯಾಟ್ರಿಕ್ ಹೀರೋ ಪಟ್ಟವನ್ನ ತಂದು ಕೊಟ್ಟವು. ಜನುಮದ ಜೋಡಿ, ನಮ್ಮೂರ ಮಂದಾರ ಹೂವೇ, ಓಂ, ಜೋಗಿ, ಎಕೆ47, ಕಡ್ಡಿಪುಡಿ, ಟಗರು, ಹೀಗೆ ಒಂದಾ-ಎರಡಾ ಅನೇಕ ಸಿನಿಮಾಗಳು ಶಿವಣ್ಣ ಅವರ ವರ್ಚಸ್ಸನ್ನ ಹೆಚ್ಚಿಸಿದವು.

ವಯಸ್ಸು 60 + ಆದರೂ ವರ್ಷಕ್ಕೆ ಕನಿಷ್ಠ ಪಕ್ಷ 03 ಬಾರಿ, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸುವ ಶಪಥ ಮಾಡಿರುವ ಶಿವಣ್ಣ , ಸದ್ಯಕ್ಕೆ ಕರಟಕ ದಮನಕ ಚಿತ್ರದ ಬಿಡುಗಡೆಯನ್ನ ಎದುರು ನೋಡ್ತಿದ್ದಾರೆ. ಭೈರತಿ ರಣಗಲ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನೂ ಕನ್ನಡ ಚಿತ್ರರಂಗದಲ್ಲಿ 38 ವರ್ಷ ಪೂರೈಸಿರುವ ಶಿವಣ್ಣ ಅವರಿಗೆ ಇವತ್ತು ಅಕ್ಕ ಪಕ್ಕದ ರಾಜ್ಯದಲ್ಲಿಯೂ ಬೇಡಿಕೆ ಇದೆ. ಜೈಲರ್, ಕ್ಯಾಪ್ಟನ್ ಮಿಲ್ಲರ್ ಸಿನಿಮಾಗಳಲ್ಲಿನ ಶಿವಣ್ಣ ಅವರ ಅಭಿನಯಕ್ಕೆ ಅಲ್ಲಿನ ಸಿನಿಪ್ರೇಮಿಗಳು ಫಿದಾ ಆಗಿದ್ದಾರೆ. ತೆಲುಗಿನಲ್ಲಿ ರಾಮ್ ಚರಣ್ ತೇಜಾ ಜೊತೆ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಮಲಯಾಳಂ ಚಿತ್ರರಂಗ ಕೂಡ ಶಿವಣ್ಣ ಅವರಿಗೆ ರತ್ನಗಂಬಳಿಯನ್ನ ಹಾಕಿ ಸ್ವಾಗತವನ್ನ ಕೊರಿದೆ. ಕನ್ನಡದಲ್ಲಿ 45, ನೀ ಸಿಗೋವರೆಗೂ ಸೇರಿ ಅರ್ಧ ಡಜನ್ ಕ್ಕಿಂತ ಹೆಚ್ಚಿನ ಸಿನಿಮಾಗಳೂ ಶಿವಣ್ಣ ಅವರ ಕೈಯಲ್ಲಿವೆ.

Dr. Shiva Raj Kumar Completes 38 Years In Sandalwood

ಒಟ್ಟಿನಲ್ಲಿಇದೀಗ ತಾನೇ ಚಿತ್ರರಂಗಕ್ಕೆ ಬಂದ ಯುವ ನಟರೇ ಅಚ್ಚರಿಯಾಗುವಂತೆ ಆ್ಯಕ್ಟೀವ್ ಆಗಿರುವ, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಬಂದು 38 ವರ್ಷಗಳಾಗಿವೆ. ಆದರೂ ಇವತ್ತಿಗೂ ಅದೇ ಚಾರ್ಮ್ ಹಾಗೂ ಫಾರ್ಮ್ ನ ಕಾಪಾಡಿಕೊಂಡು ಶಿವಣ್ಣ ಬಂದಿದ್ದಾರೆ. ಅಭಿಮಾನಿಗಳ ಹೃದಯವನ್ನೂ ಗೆಲ್ಲುತ್ತಿದ್ದಾರೆ. ಲವರ್ ಬಾಯ್ ಆಗಿ, ಆ್ಯಕ್ಷನ್ ಹೀರೋ ಆಗಿ ಈ 38 ವರ್ಷಗಳಲ್ಲಿ ಭಿನ್ನ-ವಿಭಿನ್ನ ಪ್ರಯತ್ನಗಳಿಗೆ ಕೈ ಹಾಕ್ತಾನೇ ಬಂದಿರುವ ಸೆಂಚ್ಯೂರಿ ಸ್ಟಾರ್ ಡಾ.ಶಿವರಾಜ್ ಕುಮಾರ್, ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಪಾಲಿಗೆ ಅಕ್ಷರಶಃ ಎವರ್ ಗ್ರೀನ್ ಹೀರೋ. ಶುಭಾಶಯಗಳು ಶಿವಣ್ಣ

More from Filmibeat

English summary
Dr. Shivarajkumar, Kannada film industry’ s hat-trick hero, as he’s fondly come to be known by fans, has clocked 38 years in the industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X