ಡಾ.ರಾಜ್‌ಕುಮಾರ್ ಕುಟುಂಬದಲ್ಲಿ ಯಾರಿಗೆಲ್ಲ ಕ್ಯಾನ್ಸರ್ ಇತ್ತು ? ಅನೇಕರಿಗೆ ಗೊತ್ತಿರದ ವಿಚಾರ ಹೇಳಿದ ಶಿವಣ್ಣ..!

ಹ್ಯಾಟ್ರಿಕ್‌ ಹೀರೋ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ, ಸ್ಯಾಂಡಲ್‌ವುಡ್ ಕಿಂಗ್, ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಸ್ಟಾರ್ ಡಾ.ಶಿವರಾಜ್ ಕುಮಾರ್ ಕಳೆದ ಮೂರುವರೆ ದಶಕಗಳಿಂದ ಕಲಾ ಸೇವೆಯನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಾ ಬಂದವರು. ತಂದೆಯಂತೆಯೇ ಅಭಿಮಾನಿಗಳಲ್ಲಿ ದೇವರನ್ನು ಕಂಡವರು.

ಇಂಥಾ ಡಾ.ಶಿವರಾಜ್ ಕುಮಾರ್ ಅವರಿಗೆ ಈಗ ವಯಸ್ಸು ಅರವತ್ತೇರಡು. ಆದರೆ ಹುಮ್ಮಸ್ಸು ಹದಿಹರೆಯದ ಯುವಕರದ್ದು. ಆದರೆ, ಅದ್ಯಾರ ಮಸಣಿ ಕಣ್ಣು ಬಿತ್ತೋ ಗೊತ್ತಿಲ್ಲ. ಶಿವಣ್ಣ ಕ್ಯಾನ್ಸರ್‌ಗೆ ತುತ್ತಾದರು. ಚಿಕಿತ್ಸೆಯನ್ನು ಪಡೆಯಲು ತೆರಳಿದರು. ಸಹಜವಾಗಿ ಇದರಿಂದ ಡಾ.ಶಿವರಾಜ್ ಕುಮಾರ್ ಅವರ ಅಭಿಮಾನಿಗಳಿಗಷ್ಟೇ ಅಲ್ಲ ಅನೇಕ ಕನ್ನಡಿಗರಲ್ಲಿ ಆತಂಕ ಮನೆ ಮಾಡಿತ್ತು.

Dr Shiva Raj Kumar shared information about his family members previously diagnosed with cancer

ಆದರೆ ಈಗ ಆ ಆತಂಕ ದೂರವಾಗಿದೆ. ಶಸ್ತ್ರ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವ ಶಿವಣ್ಣ ಚಿತ್ರೀಕರಣಕ್ಕೂ ಕೂಡ ಮರಳಿದ್ದಾರೆ. ಇದರ ನಡುವೆ ಮಾಧ್ಯಮದವರಿಗೆ ಕೂಡ ಸಂದರ್ಶನವನ್ನು ನೀಡುತ್ತಿದ್ದಾರೆ. ಹೀಗೆ ನೀಡಲಾದ ಸಂದರ್ಶನವೊಂದರಲ್ಲಿ ಶಿವಣ್ಣ ತಮ್ಮ ಮನೆಯಲ್ಲಿ ಯಾರಿಗೆಲ್ಲ ಕ್ಯಾನ್ಸರ್ ಇತ್ತು ಎನ್ನುವುದರ ಕುರಿತು ಮಾತನಾಡಿದ್ದಾರೆ.

ಹೌದು, ಟಿವಿ9 ಕನ್ನಡಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಿವಣ್ಣ ಯಾಕೆ ನಮಗೆ ಹೀಗೆ ಆಗ್ತಿದೆ ಅಂತ ನನಗೆ ಅನಿಸಿಲ್ಲ. ಯಾಕೆಂದರೆ ನಾವು ಎಲ್ಲರಂತೆಯೇ ಮನುಷ್ಯರು ಎಂದು ಹೇಳಿದ್ದಾರೆ. ಇನ್ನು ಕ್ಯಾನ್ಸರ್ ಎಂದಾಗ ಮೊದಲೆಲ್ಲ ಹೆದರಿದ್ದು ಇದೆ ಎಂದಿರುವ ಶಿವಣ್ಣ ನಮ್ಮ ಮನೆಯಲ್ಲಿ ಹಾಗೇ ನೋಡಿದರೆ ನನ್ನ ತಂಗಿ ಪೂರ್ಣಿಮಾಗೆ ಕೂಡ ಈ ಕಾಯಿಲೆ ಇತ್ತು ಎಂದು ಹೇಳಿದ್ದಾರೆ.

ಕೇವಲ ಪೂರ್ಣಿಮಾ ಮಾತ್ರವಲ್ಲ ನನ್ನ ಸಂಬಂಧಿಕರಲ್ಲಿ ಕೂಡ ಕೆಲವರಿಗೆ ಇತ್ತು ಎಂದಿರುವ ಶಿವಣ್ಣ ವರದಣ್ಣ ಅವರ ಮಗಳಿಗೆ ಕೂಡ ಕ್ಯಾನ್ಸರ್ ಇತ್ತು ಅವರಿಗೆ ಮಗಳಿಗೆ ಕೂಡ ಕ್ಯಾನ್ಸರ್ ಬಂದಿತ್ತು ಎಂದು ಹೇಳಿದ್ದಾರೆ. ನನ್ನ ತಾಯಿಗೂ ಕೂಡ ಇತ್ತು ಎಂದಿದ್ದಾರೆ. ಇದಕ್ಕೆ ಏನು ಅಂತ ಹೇಳಬೇಕು ಎನ್ನುವುದೇ ನನಗೆ ಗೊತ್ತಾಗಲ್ಲ, ಇನ್ನೇನು ಮಾಡೋಕೆ ಆಗಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ ಶಿವಣ್ಣ.

ಮುಂದುವರೆದು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಹೋದ ಸಮಯದಲ್ಲಿ ಮೊದಲ ಬಾರಿ ಅನುಮಾನ ಬಂತು ಎಂದಿರುವ ಶಿವಣ್ಣ, ರೆಸ್ಟ್ ರೂಮ್‌ಗೆ ಹೋದಾಗ ಕೆಂಪು ಬಣ್ಣದಲ್ಲಿ ಯೂರಿನ್ ಪಾಸ್ ಆಯ್ತು, ಮೊದಲಿಗೆ ನಾನು ಹೀಟ್ ಆಗಿರಬಹುದು ಎಂದುಕೊಂಡಿದ್ದೆ, ಆದರೂ ಬೆಂಗಳೂರಿಗೆ ಬಂದ ನಂತರ ಆಸ್ಪತ್ರೆಗೆ ಹೋದ್ವಿ ಆಗ ಕ್ಯಾನ್ಸರ್ ಇರುವುದು ಗೊತ್ತಾಯ್ತು ಎಂದು ಹೇಳಿದ್ದಾರೆ. ಆದರೆ ಈ ವಿಚಾರವನ್ನು ಗೀತಾ ನನಗೆ ಆಗ ಹೇಳಲಿಲ್ಲ ಹೀಗಾಗಿ ಏನೂ ಸಮಸ್ಯೆ ಇಲ್ಲ ಬಿಡು ಎಂದು ನಾನು ಸುಮ್ನಾದೆ ಆದರೆ ಭೈರತಿ ರಣಗಲ್ ಸಿನಿಮಾ ಮಾಡುವಾಗ ಅದು ಮಸಲ್ಸ್‌ಗೆ ಹರಡುತ್ತಿತ್ತು ಆಗ ಮತ್ತೊಂದು ಸ್ಕ್ಯಾನಿಂಗ್ ಮಾಡಿಸಿದ ಮೇಲೆ ಗೀತಾ ಕ್ಯಾನ್ಸರ್ ಇರುವ ವಿಚಾರ ಹೇಳಿದಳು ಎಂದು ಹೇಳಿದ್ದಾರೆ ಶಿವಣ್ಣ

ತಮ್ಮ ಆಪರೇಷನ್ ಕುರಿತು ಕೂಡ ಮಾಹಿತಿಯನ್ನು ನೀಡಿರುವ ಶಿವಣ್ಣ, ಕ್ಯಾನ್ಸರ್ ಆದ ಬ್ಲಾಡರ್ ತೆಗೆದು ಆಪರೇಶನ್ ಮಾಡಿದ್ದಾರೆ. ಮೊದಲಿನ ಬ್ಲಾಡರ್ ಜೊತೆ ಸೇರಿಕೊಳ್ಳಬೇಕು ಅಂದರೆ ಆರು ತಿಂಗಳು ಬೇಕು ಎಂದಿರುವ ಶಿವಣ್ಣ ಐದೂವರೆ ಗಂಟೆಗಳಲ್ಲಿ ಆರು ಸರ್ಜರಿಗಳಾಗಿವೆ ಎಂದು ಹೇಳಿದ್ದಾರೆ. ಜೀವನದಲ್ಲಿ ಎಲ್ಲವನ್ನು ಅನುಭವಿಸಿದಂತಾಯ್ತು ಎಂದು ಹೇಳಿದ್ದಾರೆ. ಸದ್ಯ ಶಿವಣ್ಣ ಚಿತ್ರೀಕರಣದ ಅಂಗಳಕ್ಕೆ ಮರಳಿದ್ದು ಇನ್ನು ಒಂದು ತಿಂಗಳು ಆಕ್ಷನ್ ಸೀನ್‌ಗಳನ್ನು ಮಾಡದಿರಲು ಶಿವಣ್ಣ ನಿರ್ಧಾರ ಮಾಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X