'ಅಜಾತಶತ್ರು' ಶಿವಣ್ಣನ ಮೇಲೆ ಅದ್ಯಾರ ಕೆಟ್ಟ ಕಣ್ಣು ಬಿತ್ತೋ.!

By Bharath Kumar

Recommended Video

ಯಾಕೆ ಪದೇ ಪದೇ ವಿವಾದಗಳು ಶಿವಣ್ಣನನ್ನು ಸುತ್ತುವರಿಯುತ್ತಿವೆ..!? | Filmibeat Kannada

ಡಾ ರಾಜ್ ಕುಮಾರ್ ನಂತರ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ ಅವರ ಮಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಪ್ರೀತಿಯಿಂದ ಎಲ್ಲರೂ ಇವರನ್ನ ಶಿವಣ್ಣ ಅಂತಾರೆ. ಅಂದಿಗೂ, ಇಂದಿಗೂ ಚಿತ್ರರಂಗದಲ್ಲಿ ಶಿವಣ್ಣ ಅಜಾತಶತ್ರು. ಯಾರು ಎಷ್ಟೇ ಮಾತನಾಡಿಕೊಂಡ್ರು, ಯಾರು ಎಷ್ಟೇ ಕಾಲೆಳೆದರು ಎಲ್ಲರನ್ನೂ ಒಂದಾಗಿ ಕಾಣುವ ಗುಣ ಶಿವರಾಜ್ ಕುಮಾರ್ ಅವರದ್ದು.

ಅದಕ್ಕೆ ಅವರನ್ನ ಹಿರಿಯ ನಟರು, ಕಿರಿಯ ಕಲಾವಿದರು ಎಲ್ಲರೂ ಇಷ್ಟ ಪಡ್ತಾರೆ. ಇದುವರೆಗೂ ಶಿವಣ್ಣ ಯಾವುದೇ ಕಾಂಟ್ರವರ್ಸಿ ಮಾಡಿಕೊಂಡವರಲ್ಲ. ಒಂದು ವೇಳೆ ಅವರ ಬಗ್ಗೆ ಏನಾದರೂ ಟೀಕೆಗಳು ಬಂದ್ರೆ ಅಲ್ಲಿಯೆ ನೇರವಾಗಿ ಮಾತನಾಡಿ ಎಲ್ಲವನ್ನ ಬಗೆಹರಿಸಿಕೊಳ್ಳುವ 'ಲೀಡರ್' ಅವರು.

ಆದ್ರೆ, ಇತ್ತೀಚಿನ ದಿನಗಳಲ್ಲಿ ಶಿವರಾಜ್ ಕುಮಾರ್ ಹೆಸರು ಪದೇ ಪದೇ ವಿವಾದಗಳಲ್ಲಿ ಸಿಲುಕುತ್ತಿದೆ. ಹಾಗ್ನೋಡಿದ್ರೆ, ಇಲ್ಲಿ ಶಿವಣ್ಣನ ಪಾತ್ರವೇ ಇರುವುದಿಲ್ಲ. ಆದ್ರೂ, ಶಿವರಾಜ್ ಕುಮಾರ್ ಎಂಬ ಹೆಸರು ಸದ್ದು ಮಾಡುತ್ತೆ. ಅಂತಹ ಕೆಲವು ಉದಾಹರಣೆಗಳು ಇಲ್ಲಿವೆ ನೋಡಿ.

ಹುಚ್ಚ ವೆಂಕಟ್ ಕಿಡಿ

ಹುಚ್ಚ ವೆಂಕಟ್ ಕಿಡಿ

ಶಿವರಾಜ್ ಕುಮಾರ್ ಅವರನ್ನ ನೋಡಲು ಹುಚ್ಚ ವೆಂಕಟ್ ಅವರ ಮನೆ ಬಳಿ ಹೋಗಿದ್ದರಂತೆ. ಆದ್ರೆ, ಆ ವೇಳೆ ಶಿವಣ್ಣನ ಮನೆಯೊಳಗೆ ಅವರ ಆಪ್ತರು ಬಿಟ್ಟಿಲ್ಲ ಎಂದು ವೆಂಕಟ್ ವಿಡಿಯೋ ಮಾಡಿ ಶಿವಣ್ಣ ಹಾಗೆ ಅವರು ಆಪ್ತರು ಹೀಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟಕ್ಕೂ, ಶಿವಣ್ಣ ಮನೆಯಲ್ಲಿ ಇದ್ರೋ ಇಲ್ವೋ ಗೊತ್ತಿಲ್ಲ. ಆದ್ರೆ, ಶಿವರಾಜ್ ಕುಮಾರ್ ಅವರು ಮಾಡದ ತಪ್ಪಿಗೆ ವೆಂಕಟ್ ಕಡೆಯಿಂದ ಬಹಿರಂಗವಾಗಿ ಆಪಾದನೆ ಎದುರಿಸಬೇಕಾಯಿತು.

'ಟಗರು' ರಿಲೀಸ್ ಆದಾಗ....

'ಟಗರು' ರಿಲೀಸ್ ಆದಾಗ....

'ಟಗರು' ಸಿನಿಮಾ ರಿಲೀಸ್ ಆದಾಗ ಶಿವರಾಜ್ ಕುಮಾರ್ ಅಭಿಮಾನಿಗಳು ಚಿತ್ರದ ವಿರುದ್ಧ ಕಿಡಿಕಾರಿದ್ರು. ಚಿತ್ರದಲ್ಲಿ ಶಿವಣ್ಣನ ಪಾತ್ರಕ್ಕೆ ವಿಲನ್ ಗಳಿಂದ ಅವಾಚ್ಯ ಶಬ್ದಗಳಿಂದ ನಿಂದಿಸುವ ದೃಶ್ಯಗಳಿದ್ದವು. ಇದನ್ನ ಚಿತ್ರದಿಂದ ತೆಗೆಯಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದರು. ಅಭಿಮಾನಿಗಳ ಮತ್ತು ಚಿತ್ರತಂಡದ ಗುದ್ದಾಟಕ್ಕೆ ಎಂಟ್ರಿ ಕೊಟ್ಟ ಶಿವಣ್ಣ, 'ಸಿನಿಮಾವನ್ನ ಕೇವಲ ಸಿನಿಮಾವನ್ನಾಗಿ ಮಾತ್ರ ನೋಡಿ' ಎಂದು ತಿಳುವಳಿಕೆ ಹೇಳಿದರು. ಶಿವಣ್ಣನ ಸಿನಿಮಾ, ಶಿವಣ್ಣ ಬಗ್ಗೆ ಕೆಟ್ಟದಾಗಿ ಬೈಯ್ದಿದ್ದಾರೆ ಎಂದೆಲ್ಲ ಚರ್ಚೆ ಮಾಡಿ ಸುಮ್ಮನೆ ದೊಡ್ಡದು ಮಾಡಿದರು. ಆದ್ರೆ, ಶಿವಣ್ಣನೇ ಕೂಲ್ ಆಗಿ ತಗೊಂಡು ಮುಂದೆ ಹೋದರು.

'ಬಾಸ್' ಟೈಟಲ್

'ಬಾಸ್' ಟೈಟಲ್

ಈ ಬಾಸ್ ಟೈಲ್ ವಿವಾದ ಮುಗಿಯದ ಕಥೆ. 'ಟಗರು' ಚಿತ್ರದ ಶತದಿನೋತ್ಸವದ ಸಂಭ್ರಮದಲ್ಲಿ ನಿರ್ದೇಶಕ ದುನಿಯಾ ಸೂರಿ ಶಿವಣ್ಣಗೆ 'ಬಾಸ್ ಆಫ್ ಸ್ಯಾಂಡಲ್ ವುಡ್' ಎಂದು ಬಿರುದು ನೀಡಿದ್ದಾರೆ ಎಂಬುದನ್ನ ಪ್ರಶ್ನಿಸಿ ದರ್ಶನ್ ಅಭಿಮಾನಿಗಳು ಸೂರಿ ವಿರುದ್ಧ ಕೆಂಡಕಾರಿದರು. 'ಬಾಸ್' ಅನ್ನೋದು ದರ್ಶನ್ ಗೆ ಮಾತ್ರ, ದಯವಿಟ್ಟು ಈ ಬಿರುದು ವಾಪಸ್ ತಗೊಳ್ಳಿ ಎಂದು ಪತ್ರ ಬರೆದರು. ಆದ್ರೆ, ನೋಡೋರಿಗೆ ಶಿವಣ್ಣ ಮತ್ತು ದರ್ಶನ್ ನಡುವೆ 'ಬಾಸ್' ಟೈಟಲ್ ಗೆ ಜಗಳ ಅನ್ನೋತರ ಆಯ್ತು. ಇಲ್ಲಿಯೂ ಶಿವಣ್ಣ ಆಗಲಿ, ದರ್ಶನ್ ಆಗಲಿ ಅವರ ಪಾತ್ರ ಇಲ್ಲವೇ ಇಲ್ಲ.

ಈಗ 'ವಿಲನ್' ಸರದಿ

ಈಗ 'ವಿಲನ್' ಸರದಿ

ಇತ್ತೀಚಿಗಷ್ಟೆ ನಿರ್ದೇಶಕ ಪ್ರೇಮ್ 'ದಿ ವಿಲನ್' ಚಿತ್ರದ ಹಾಡಿನ ಸಾಲೊಂದನ್ನ ಹಂಚಿಕೊಂಡಿದ್ದರು. ''ನಿನ್ನೆ ಮೊನ್ನೆ ಬಂದವ್ರೆಲ್ಲಾ ನಂಬರ್ 1 ಅಂತಾವ್ರೆ'' ಅಂತ ಲಿರಿಕ್ಸ್ ಇದೆ. ಈ ಸಾಲು ಬೇರೆ ನಟರಿಗೆ ಟಾಂಗ್ ಮಾಡಿದಂತಿದೆ ಎನ್ನಲಾಗಿದೆ. ಶಿವಣ್ಣ ಎಲ್ಲರಿಗೂ ಟಾಂಗ್ ಕೊಟ್ಟರು ಎಂದೇ ಬಿಂಬಿತವಾಗುತ್ತಿದೆ. ಆದ್ರೆ, ಇದು ಸಾಹಿತ್ಯ ಬರೆದ ಸಾಹಿತಿ ಮತ್ತು ಹಾಡು ಬರೆಸಿದ ನಿರ್ದೇಶಕನ ಕೆಲಸ. ಅವರ ಚಿತ್ರಕ್ಕೆ ಕಥೆಗೆ ಬೇಕಾದ ರೀತಿಯಲ್ಲಿ ಸಾಂಗ್ ಮಾಡಿದ್ದಾರೆ. ಇದನ್ನ ಸುಮ್ಮನೆ ಚರ್ಚೆ ಮಾಡಲಾಗುತ್ತಿದೆ.

ಬಾಸ್, ಸಾಂಗ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

ಬಾಸ್, ಸಾಂಗ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ

ಇನ್ನು ಈ ಬಗ್ಗೆ ಮಾತನಾಡಿ ಶಿವಣ್ಣ ''ನಂಬರ್ 1 ಸಾಂಗ್ ಕಾಂಟ್ರವರ್ಸಿ ನನಗೆ ಗೊತ್ತಿಲ್ಲ. ನಾವೆಲ್ಲರೂ ಒಂದೇ, ಎಲ್ಲಾ ನಟರೂ ಬಾಸ್. ದರ್ಶನ್ ಗೆ ಬಾಸ್ ಆಂದ್ರೂ ಖುಷೀನೇ ಯಶ್ ಗೆ ಬಾಸ್ ಅಂದ್ರೂ ಖುಷೀನೇ. ಅವರವರ ಮನೆಗೆ ಅವರವರೇ ಬಾಸ್, ಅದನ್ನೆಲ್ಲಾ ನಾವ್ಯಾರೂ ತಲೆ ಕೆಡಿಸಿಕೊಳ್ಳಲ್ಲ. ಎಲ್ಲರ ಸಿನಿಮಾನ ಎಲ್ಲರೂ ನೋಡಬೇಕು. ಕನ್ನಡ ಚಿತ್ರರಂಗ ಬೆಳೆಯಬೇಕು ಅನ್ನೋದಷ್ಟೇ ನಮ್ಮ ಆಸೆ'' ಎಂದು ಎಷ್ಟು ಕೂಲ್ ಮಾತನಾಡಿದ್ದಾರೆ. ಇದು ಕಲಾವಿದರಲ್ಲಿ ಇರುವ ಮನೋಭಾವನೆ.

ಅದ್ಯಾರ ಕೆಟ್ಟ ಕಣ್ಣು ಬಿತ್ತೋ....

ಅದ್ಯಾರ ಕೆಟ್ಟ ಕಣ್ಣು ಬಿತ್ತೋ....

ಈ ರೀತಿಯ ವಿಚಾರಗಳಿಗೆಲ್ಲ ತಲೆಕೆಡಿಸಿಕೊಳ್ಳದ ಶಿವರಾಜ್ ಕುಮಾರ್ ಸಿನಿಮಾ ಸಿನಿಮಾ ಅಂತ ಮುನ್ನಗ್ಗುತ್ತಿದ್ದಾರೆ. ಆದ್ರೆ, ಅದ್ಯಾವ ಕೆಟ್ಟ ಕಣ್ಣುಗಳು ಶಿವಣ್ಣನ ಮೇಲೆ ಬಿತ್ತೋ ಏನೋ ಸುಮ್ ಸುಮ್ಮನೆ ಎಲ್ಲದಕ್ಕೂ ಇವರ ಹೆಸರನ್ನ ಹಿಡಿದು ತರ್ತಾರೆ. ಬಟ್, ಒಂದಂತೂ ನಿಜ...ಇಂಡಸ್ಟ್ರಿಯಲ್ಲಿ ಶಿವರಾಜ್ ಕುಮಾರ್ ಯಾವತ್ತಿದ್ರೂ ಅಜಾತಶತ್ರುವೇ.

More from Filmibeat

English summary
Kannada actor dr shivarajkumar has clarified about 'boss' and 'the villain' Song Controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X