ಕರುನಾಡಿನಲ್ಲಿ ಶಿವಣ್ಣ ಹುಟ್ಟಿದ್ದೇ ನಮ್ಮ ಭಾಗ್ಯ - ಭರ್ಜರಿ ಚೇತನ್ ಕುಮಾರ್ ..!

ಹ್ಯಾಟ್ರಿಕ್‌ ಹೀರೋ, ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ, ಸ್ಯಾಂಡಲ್‌ವುಡ್ ಕಿಂಗ್, ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಸ್ಟಾರ್ ಡಾ.ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ. ಕಳೆದ ಮೂರುವರೆ ದಶಕಗಳಿಂದ ಕಲಾ ಸೇವೆಯನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಾ ಬಂದವರು. ತಂದೆಯಂತೆಯೇ ಅಭಿಮಾನಿಗಳಲ್ಲಿ ದೇವರನ್ನು ಕಂಡವರು.ಕ್ಲಾಸ್- ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಎನ್ನುವಂಥಾ ಮನಸ್ಥಿತಿ ಇವರದ್ದು.

ಬಹುಶಃ ಡಾ.ರಾಜ್ ಕುಮಾರ್ ಅವರನ್ನು ಹೊರತು ಪಡಿಸಿದರೆ ವೆರೈಟಿ ಪಾತ್ರಗಳನ್ನು ಮಾಡಿದ, ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಹೊಸ ಪ್ರಯೋಗಗಳಿಗೆ ಒಗ್ಗಿಕೊಂಡ ಮತ್ತೋರ್ವ ಸ್ಟಾರ್ ಅಂದರೆ ಅದು ಕೇವಲ ಶಿವಣ್ಣ ಮಾತ್ರ.

Dr Shiva Rajkumar s Birthday Chethan Kumar Shares Personal Bond amp amp Memories Filmibeat Exclusive

ಇಂಥಾ ಡಾ.ಶಿವರಾಜ್ ಕುಮಾರ್ ಅವರಿಗೆ ಇಂದು { ಜುಲೈ 12 } ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮವನ್ನು ಇನ್ನೂ ಹೆಚ್ಚಾಗಿಸಿದ್ದು ಶಿವಣ್ಣ ಅವರ ಅಸಂಖ್ಯಾತ-ಅಗಣಿತ ಅಭಿಮಾನಿಗಳು ಮತ್ತು ಚಿತ್ರರಂಗದ ಹಲವಾರು ಸದಸ್ಯರು ಅಂದರೆ ಅದು ತಪ್ಪಾಗಲಿಕ್ಕಿಲ್ಲ.

ಶಿವಣ್ಣ ಹುಟ್ಟುಹಬ್ಬದ ಪ್ರಯುಕ್ತ ಇಂದು {ಜುಲೈ 12} ಹಲವಾರು ಸಿನಿಮಾಗಳ ಘೋಷಣೆಯಾಗಿವೆ. ಶಿವಸೈನ್ಯಕ್ಕೆ ಹಲವು ಸರ್‌ಪ್ರೈಸ್‌ಗಳು ಸಿಕ್ಕಿವೆ. ಇದರ ನಡುವೆ ಇಂದು {ಜುಲೈ 12} ಹಲವರು ಹಲವು ಕಡೆ ಶಿವಣ್ಣ ಕುರಿತು ಮಾತನಾಡಿದ್ದಾರೆ. ತಾವು ಕಂಡಂತೆ ಶಿವಣ್ಣ ಹೇಗೆ ಎನ್ನುವುದನ್ನು ಕೂಡ ಹೇಳಿದ್ದಾರೆ.

ಆ ಪೈಕಿ ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ, 'ಭರ್ಜರಿ'.. 'ಬಹದ್ದೂರ್'..'ಭರಾಟೆ'.. 'ಜೇಮ್ಸ್'.. ಹೀಗೆ ಒಂದಾದ ಮೇಲೊಂದು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ 'ಸಾಹಿತಿ-ನಿರ್ದೇಶಕ' ''ಚೇತನ್ ಕುಮಾರ್'' ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಶಿವಣ್ಣ ಅವರ ಜೊತೆಗಿನ ಒಡನಾಟ ನೆನೆದಿದ್ದಾರೆ. ಶಿವಣ್ಣ ಕನ್ನಡ ಚಿತ್ರರಂಗಕ್ಕೆ ಎಷ್ಟು ಮುಖ್ಯ.. ಅವರ ಸಾಧನೆಗಳೇನು .. ? ಎನ್ನುವುದರ ಕುರಿತು ಕೂಡ ಮಾತನಾಡಿದ್ದಾರೆ. ಹಾಗಿದ್ದರೆ ಶಿವಣ್ಣ ಬಗ್ಗೆ ''ಚೇತನ್ ಕುಮಾರ್'' ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.

More from Filmibeat

English summary
What's the bond between Chethan Kumar & Dr. Shivanna? Find out as the filmmaker reveals exclusive memories on the superstar's birthday!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X