Sci -Fi ಸಿನಿಮಾದ ಹಿಂದೆ ಹೇಮಂತ್ ರಾವ್ ; ನಾಯಕನ ಪಾತ್ರಕ್ಕೆ ಬಣ್ಣ ಹಚ್ತಾರಾ ಶಿವಣ್ಣ..?

ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಹಾಗೂ ಸೈಡ್ ಬಿ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಪುಳಕಿತಗೊಂಡಿರುವ ಹೇಮಂತ್ ರಾವ್ ಮೊನ್ನೆಯಷ್ಟೇ ಹೊಸ ಸಿನಿಮಾದ ಸುಳಿವನ್ನ ಕೊಟ್ಟಿದ್ದರು. ಕಥೆ ಕಾಮಗಾರಿ ಪ್ರಗತಿಯಲ್ಲಿದೆ ಎಂದಿದ್ದರು. ಆದರೆ ಕಥೆಯ ಬಗ್ಗೆ ಯಾವುದೇ ಸುಳಿವನ್ನ ಬಿಟ್ಟು ಕೊಟ್ಟಿರಲಿಲ್ಲ. ಆದರೆ ಒಂದು ತಿಂಗಳ ಹಿಂದೆಯೇ ಜಸ್ಟ್ ಮಾತ್ ಮಾತಲ್ಲಿ ಹೇಮಂತ್ ರಾವ್ ಕಥೆಯ ಬಗ್ಗೆ ಕ್ಲೂ ಬಿಟ್ಟು ಕೊಟ್ಟಿದ್ದರು ಎಂಬ ವಿಚಾರ ಈಗ ಜಗಜ್ಜಾಹೀರಾಗಿದೆ.

ಹೌದು. ಗಲಾಟಾ ಪ್ಲಸ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಹೇಮಂತ್ ರಾವ್, ಸದ್ಯಕ್ಕೆ ಲವ್ ಸ್ಟೋರಿಯನ್ನ ಮಾಡಲಾರೆ ಎಂದಿದ್ದಾರೆ. ಇನ್ನೂ, ತಮ್ಮ ಮುಂದಿನ ಚಿತ್ರದ ಕುರಿತು ಮಾತನಾಡಿರುವ ಹೇಮಂತ್ ರಾವ್ Sci-fi ಸಿನಿಮಾ ಮಾಡುವ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡ್ತಿರುವುದಾಗಿಯೂ ಹೇಳಿದ್ದಾರೆ.

Dr. Shivaraj kumar And Hemanth Rao to collaborate for SCI- FI Film..?

Sci-fi ಸಿನಿಮಾ ಮಾಡುವ ಆಸೆಯನ್ನ ಹೇಮಂತ್ ರಾವ್ ವ್ಯಕ್ತಪಡಿಸಿದ ಬೆನ್ನಲ್ಲಿಯೇ, ಡಾ.ಶಿವರಾಜ್ ಕುಮಾರ್ ಈ ಚಿತ್ರದ ನಾಯಕನಾಗಲಿದ್ದಾರಾ ಎಂಬ ಪ್ರಶ್ನೆ ಅನೇಕರನ್ನ ಕಾಡ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೂ ನಡೆಯುತ್ತಿದೆ.

ಒಂದು ವೇಳೆ ಇದು ನಿಜವೇ ಆದಲ್ಲಿ ಅಭಿಮಾನಿಗಳಿಗೆ ಅದು ಹಬ್ಬದೂಟವೇ ಸರಿ.ಸದ್ಯಕ್ಕೆ ಹೇಮಂತ್ ರಾವ್ ತಮ್ಮ ಮುಂದಿನ ಚಿತ್ರದ ಕುರಿತು ಮಾತನಾಡಿರುವ ತುಣುಕು ಒಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಕನ್ನಡ ಕಲಾಭಿಮಾನಿಗಳ ಮನದಲ್ಲಿ ಕುತೂಹಲದ ಬೀಜವನ್ನೂ ಬಿತ್ತಿದೆ.

ಸದ್ದು ಮಾಡುತ್ತಿದೆ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ

ಸಪ್ತಸಾಗರದಾಚೆ ಇತ್ತೀಚಿಗಷ್ಟೇ ಒಟಿಟಿಗೆ ಲಗ್ಗೆ ಇಟ್ಟಿದೆ. ವಿಶೇಷ ಅಂದರೆ ಭಾಷೆಯ ಭೇದ ಭಾವ ಇಲ್ಲದೇ ಮನು, ಪ್ರಿಯಾ ಹಾಗೂ ಸುರಭಿಯ ಕಥೆ-ವ್ಯಥೆ ಎಲ್ಲರ ಹೃದಯವನ್ನ ಗೆಲ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅಮೆಜಾನ್ ಪ್ರೈಮ್ ನಲ್ಲಿ ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ ನಾಲ್ಕನೇ ಸ್ಥಾನದಲ್ಲಿ ಟ್ರೆಂಡಿಂಗ್ ನಲ್ಲಿದೆ.

More from Filmibeat

English summary
Is Hemanth Rao Who is known for his work in sandalwood collaborating with Dr.Shivarajkumar for Sci-fi film..?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X