ಪವನ್ ಒಡೆಯರ್ ಮನೆಗೆ ಸಚಿವ ಸುಧಾಕರ್ ಭೇಟಿ; 'ಅದ್ಭುತ ವ್ಯಕ್ತಿತ್ವಕ್ಕೆ ಮೂಕನಾಗಿದ್ದೀನಿ' ಎಂದ ನಿರ್ದೇಶಕ

ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಇತ್ತೀಚಿಗಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮನೆಗೆ ಪುತ್ರ ಆಗಮಿಸಿದ ಸಂತೋಷದಲ್ಲಿರುವ ಒಡೆಯರ್ ಮನೆಗೆ ಆರೋಗ್ಯ ಸಚಿವಾ ಸುಧಾಕರ್ ಭೇಟಿ ಮಾಡಿದ್ದಾರೆ. ಸುಧಾಕರ್ ಭೇಟಿ ಇಡೀ ಪವನ್ ಒಡೆಯರ್ ಕುಟುಂಬಕ್ಕೆ ಸಂತೋಷ ತಂದಿದೆ.

ಪವನ್ ಒಡೆಯರ್-ಅಪೇಕ್ಷ ದಂಪತಿಯ ಚೊಚ್ಚಲ ಮುದ್ದಾದ ಮಗುವಿಗೆ ಸುಧಾಕರ್ ಶುಭ ಹಾರೈಸಿದ್ದಾರೆ. ಮಗುವಿಗಾಗಿ ಉಡುಗೊರೆಯನ್ನು ಹೊತ್ತು ತಂದಿದ್ದ ಸಚಿವರು ಮಗುವಿಗೆ ಗಿಫ್ಟ್ ನೀಡಿ, ಮುದ್ದಾಡಿದ್ದಾರೆ.

ಈ ಬಗ್ಗೆ ಪವನ್ ಒಡೆಯರ್ ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಧಾಕರ್ ಭೇಟಿಯ ಫೋಟೋಗಳನ್ನು ಶೇರ್ ಮಾಡುವ ಜೊತೆಗೆ ಅದ್ಭುತ ವ್ಯಕ್ತತ್ವಕ್ಕೆ ಮೂಕನಾಗಿದ್ದೀನಿ ಎಂದು ಬರೆದುಕೊಂಡಿದ್ದಾರೆ.

Dr. Sudhakar visits Director Pawan Wadeyar house

'ನಿಮ್ಮ ಈ ಅದ್ಭುತ ವ್ಯಕ್ತಿತ್ವಕ್ಕೆ ಮೂಕನಾಗಿದ್ದೀನಿ ಸರ್. ನಿಮ್ಮೆಲ್ಲ ಕೆಲಸದ ಒತ್ತಡಗಳ ನಡುವೆಯೂ ಮನೆಗೆ ಆಗಮಿಸಿ ನನ್ನ ಮಗುವನ್ನು ಆಶೀರ್ವದಿಸಿದ ನಿಮಗೆ ನಾನು ಚಿರಋಣಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅಂದಹಾಗೆ ಸುಧಾಕರ್ ಕೆಲವು ಸಮಯ ಪವನ್ ಒಡೆಯರ್ ಕುಟುಂಬದ ಜೊತೆ ಕಳೆದು, ಮಾತುಕತೆ ನಡೆಸಿ ಹೊರಟುಹೋಗಿದ್ದಾರೆ. ಒಡೆಯರ್ ಕುಟುಂಬದ ಜೊತೆ ಸುಧಾಕರ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡಿಸೆಂಬರ್ 10ರಂದು ಪವನ್ ಒಡೆಯರ್ ಪತ್ನಿ ಅಪೇಕ್ಷಾ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯಾದ ಸಂತಸವನ್ನು ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ವಿಶೇಷ ಎಂದರೆ ಪವನ್ ಒಡೆಯರ್ ಹುಟ್ಟುಹಬ್ಬದ ದಿನವೇ ಮಗ ಜನಿಸಿದ್ದಾನೆ.

ಗಂಡು ಮಗುವಾದ ಸಂತಸವನ್ನು ಪವನ್ ಮೊದಲು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, 'ನನ್ನ ಜನ್ಮ ದಿನಕ್ಕೆ ವಿಶ್ವದ ಅತ್ಯಂತ ಅದ್ಭುತ ಉಡುಗೊರೆ ದೊರೆತಿದೆ. ಗಂಡು ಮಗುವಿನ ತಂದೆಯಾಗಿದ್ದೇನೆ. ಜೈ ಚಾಮುಂಡೇಶ್ವರಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

More from Filmibeat

English summary
Dr. Sudhakar visits Director Pawan Wadeyar house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X