twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ಬಗ್ಗೆ ನಿಂದಿಸಿದವನ ವಿರುದ್ದ ಸಿಡಿದೆದ್ದ ವಿಷ್ಣು ಸೇನೆ: ಸರಣಿ ದೂರು ದಾಖಲಿಸಲು ಕರೆ

    |

    ಕನ್ನಡದ ದಿಗ್ಗಜ ನಟ ವಿಷ್ಣುವರ್ಧನ್ ಅವರನ್ನು ನಿಂದಿಸಿರುವ ತೆಲುಗು ನಟನ ವಿರುದ್ಧ ವಿಷ್ಣು ಸೇನಾ ಸಮತಿ ಸಿಡಿದೆದ್ದಿದೆ. ವಿಷ್ಣುದಾದ ಗೌರವಕ್ಕೆ ಧಕ್ಕೆ ಬರುವಂತೆ ಸಂದರ್ಶನದಲ್ಲಿ ಹೇಳಿಕೆ ನೀಡಿರುವ ನಟನ ವಿರುದ್ಧ ಕನ್ನಡಿಗರು ಭಾರಿ ಆಕ್ರೋಶ ಹೊರಹಾಕಿದ್ದಾರೆ.

    ಕನ್ನಡದ ಹಿರಿಯ ನಟ ಜಗ್ಗೇಶ್, ಅನಿರುದ್ಧ್, ಪ್ರಥಮ್ ಸೇರಿದಂತೆ ಕನ್ನಡ ಪರ ಹೋರಾಟಗಾರರು ಸಹ ವಿಜಯ್ ರಂಗರಾಜು ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿರುವ ವಿಷ್ಣು ಸೇನಾ ಸಮಿತಿ ಈಗ ಕಾನೂನು ಹೋರಾಟಕ್ಕೆ ಮುಂದಾಗಿದೆ. ಸರಣಿ ದೂರುಗಳನ್ನು ದಾಖಲಿಸುವ ಮೂಲಕ ಆ ನಟನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದೆ. ಮುಂದೆ ಓದಿ....

    ಡಾ.ವಿಷ್ಣು ಬಗ್ಗೆ ಕೆಟ್ಟದಾಗಿ ಮಾತಾಡಿದ್ದ ವಿಜಯ್ ರಂಗರಾಜು ವಿರುದ್ಧ ದೂರು ದಾಖಲುಡಾ.ವಿಷ್ಣು ಬಗ್ಗೆ ಕೆಟ್ಟದಾಗಿ ಮಾತಾಡಿದ್ದ ವಿಜಯ್ ರಂಗರಾಜು ವಿರುದ್ಧ ದೂರು ದಾಖಲು

    ವಿಷ್ಣು ಸೇನೆಯಿಂದ ಕಾನೂನು ಹೋರಾಟ

    ವಿಷ್ಣು ಸೇನೆಯಿಂದ ಕಾನೂನು ಹೋರಾಟ

    ಕನ್ನಡದ ಯಜಮಾನನ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿರುವ ನಟನ ವಿರುದ್ಧ ವಿಷ್ಣು ಸೇನೆ ಸಮತಿ ಕಾನೂನು ಹೋರಾಟಕ್ಕೆ ತೀರ್ಮಾನಿಸಿದ್ದು, ಸರಣಿ ದೂರುಗಳನ್ನು ದಾಖಲಿಸಲು ಕರೆ ನೀಡಿದೆ. ನಿಮ್ಮ ನಿಮ್ಮ ಏರಿಯಾದ ಪೊಲೀಸ್ ಠಾಣೆಯಲ್ಲಿ ತೆಲುಗು ನಟನ ವಿರುದ್ಧ ದಾಖಲಿಸಿ ಎಂದು ವಿಷ್ಣು ಸೇನೆ ಮನವಿ ಮಾಡಿದೆ. ಈ ಕುರಿತು ವಿಷ್ಣು ಸೇನೆ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಫೇಸ್‌ಬುಕ್‌ನಲ್ಲಿ ವಿವರವಾಗಿ ತಿಳಿಸಿ ಕೇಳಿಕೊಂಡಿದ್ದಾರೆ.

    ಆ ವ್ಯಕ್ತಿಯ ನೆಮ್ಮದಿ ಹಾಳು ಮಾಡುವುದರಲ್ಲಿ ತಪ್ಪೇನಿಲ್ಲ

    ಆ ವ್ಯಕ್ತಿಯ ನೆಮ್ಮದಿ ಹಾಳು ಮಾಡುವುದರಲ್ಲಿ ತಪ್ಪೇನಿಲ್ಲ

    ''ದೇವರಂತಹ ಯಜಮಾನ್ರ ಮೇಲೆ ಆರೋಪ ಮಾಡಿದ ವ್ಯಕ್ತಿಯ ನೆಮ್ಮದಿ ಹಾಳು ಮಾಡುವುದು ತಪ್ಪೇನಲ್ಲ. ಆದ್ದರಿಂದ ನಿಮ್ಮ ನಿಮ್ಮ ಏರಿಯಾದ ಪೊಲೀಸ್ ಸ್ಟೇಶನ್ಗಳಿಗೆ ಹೋಗಿ ಆತನ ವಿರುದ್ಧ ಒಂದು ದೂರು ಕೊಡಿ. ನಿಮ್ಮದು ಯಾವುದೇ ಸಂಘವಾಗಿದ್ದರೂ ಅಥವಾ ಸಂಘ ಇಲ್ಲದಿದ್ದರೂ ದೂರು ಕೊಡಲು ಅಡ್ಡಿಯೇನಿಲ್ಲ. ನಾನು ಮತ್ತು ವಕೀಲರು ಅದಕ್ಕೆ ಬೇಕಾದ ಡ್ರಾಫ್ಟ್ ರೆಡಿ ಮಾಡುತ್ತಿದ್ದೇವೆ. ಅದನ್ನು ನಿಮ್ಮೊಂದಿಗೆ ಮಧ್ಯಾಹ್ನದೊಳಗೆ ಹಂಚಿಕೊಳ್ಳುವೆ'' ಎಂದು ಮಾಹಿತಿ ನೀಡಿದ್ದಾರೆ.

    ನೀವಿಲ್ಲಿ ದಯವಿಟ್ಟು ಬರ್ಬೇಡಿ, ಅಭಿಮಾನಿಗಳು ಏನ್ ಮಾಡ್ತಾರೋ ಗೊತ್ತಿಲ್ಲ; ನಟ ಅನಿರುದ್ಧ ಆಕ್ರೋಶನೀವಿಲ್ಲಿ ದಯವಿಟ್ಟು ಬರ್ಬೇಡಿ, ಅಭಿಮಾನಿಗಳು ಏನ್ ಮಾಡ್ತಾರೋ ಗೊತ್ತಿಲ್ಲ; ನಟ ಅನಿರುದ್ಧ ಆಕ್ರೋಶ

    ದೂರಿನ ಪ್ರತಿಯನ್ನು ಫಿಲಂ ಚೇಂಬರ್‌ಗೆ ಕಳುಹಿಸಿ

    ದೂರಿನ ಪ್ರತಿಯನ್ನು ಫಿಲಂ ಚೇಂಬರ್‌ಗೆ ಕಳುಹಿಸಿ

    ''ಆ ಡ್ರಾಫ್ಟ್ ನೋಡಿದ ಮೇಲೆ ದೂರು ಯಾವತರ ದಾಖಲಿಸಬೇಕು ಎಂಬುದೊಂದು ಐಡಿಯಾ ನಿಮಗೆ ಬರಬಹುದು. ಅಥವಾ ಡ್ರಾಫ್ಟ್ ಇಲ್ಲದೆಯೂ ದೂರು ದಾಖಲಿಸುವ ಕ್ರಮ ನಿಮಗೇ ಗೊತ್ತಿರಬಹುದು. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ದೂರು ದಾಖಲಿಸೋಣ. ದೂರು ದಾಖಲಾದ ಮೇಲೆ ಅದರ ಒಂದೊಂದು ಪ್ರತಿಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕಳಿಸುವುದು ಮರೆಯಬೇಡಿ. ಇಷ್ಟು ಮಾತ್ರ ಮಾಡಬಹುದಲ್ವಾ?'' ಎಂದು ವಿಶೇಷ ರೀತಿಯಲ್ಲಿ ಹೋರಾಟಕ್ಕೆ ವಿಷ್ಣು ಸೇನೆ ಹೆಜ್ಜೆ ಇಟ್ಟಿದೆ.

    Recommended Video

    ಸಮಂತಾ ಜೊತೆ ತನ್ನ ಆಸೆ ಹೇಳಿಕೊಂಡ ತಮನ್ನಾ | Filmibeat Kannada
    ರೂಪೇಶ್ ರಾಜಣ್ಣರಿಂದ ದೂರು ದಾಖಲು

    ರೂಪೇಶ್ ರಾಜಣ್ಣರಿಂದ ದೂರು ದಾಖಲು

    ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ನಟ ವಿಜಯ್ ರಂಗರಾಜು ವಿರುದ್ಧ ಹಲಸೂರು ಠಾಣೆಯಲ್ಲಿ ಇಂದು ದೂರು ದಾಖಲು ಮಾಡಿದ್ದಾರೆ. ಇದೀಗ, ವಿಷ್ಣು ಸೇನೆ ಕರೆ ನೀಡಿದ ಬಳಿಕ ಮತ್ತಷ್ಟು ದೂರುಗಳು ದಾಖಲಾಗುವ ಸಾಧ್ಯತೆ ಹೆಚ್ಚಿದೆ.

    English summary
    Dr vishnu sena samithi decide to Filed series of complaints against Telugu actor Vijay Rangaraju, who abused legend actor Dr vishnuvardhan.
    Saturday, December 12, 2020, 10:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X