»   » ಡಾ.ವಿಷ್ಣು ಸೇನಾ ಸಮಿತಿಯಿಂದ ಫೇಸ್ ಬುಕ್ ಚಲನಚಿತ್ರೋತ್ಸವ

ಡಾ.ವಿಷ್ಣು ಸೇನಾ ಸಮಿತಿಯಿಂದ ಫೇಸ್ ಬುಕ್ ಚಲನಚಿತ್ರೋತ್ಸವ

Posted By:
Subscribe to Filmibeat Kannada

ರಾಷ್ಟ್ರ ರಾಜಧಾನಿ 'ದೆಹಲಿ'ಯಲ್ಲಿ ನಡೆಯಲಿರುವ 'ಡಾ.ವಿಷ್ಣುವರ್ಧನ ರಾಷ್ಟ್ರೀಯ ಉತ್ಸವ' ದಿನದಿಂದ ದಿನಕ್ಕೆ ಹೆಚ್ಚು ಸುದ್ದಿಯಾಗುತ್ತಿದೆ. ಅಭಿಮಾನಿಗಳಲ್ಲಿ ಪುಳಕ, ಕನ್ನಡಿಗರಲ್ಲಿ ತೀವ್ರ ಕುತೂಹಲ ಮನೆ ಮಾಡಿದೆ. ಈ ಮಧ್ಯೆ ಡಾ.ವಿಷ್ಣು ಸೇನಾ ಸಮಿತಿ 'ಡಾ.ವಿಷ್ಣು ಚಲನಚಿತ್ರೋತ್ಸವ'ವನ್ನು ಆಚರಿಸುತ್ತಿದೆ.

ಯಾವ ಊರಲ್ಲಿ, ಯಾವ ಥಿಯೇಟರ್ ನಲ್ಲಿ ಅಂತ ಗೊಂದಲ ಆಗ್ತಿದೆಯಾ? ಸ್ವಲ್ಪ ಉಸಿರು ತೆಗೆದುಕೊಂಡು ಆರಾಮಾಗಿ.... 'ಡಾ.ವಿಷ್ಣು ಚಲನಚಿತ್ರೋತ್ಸವ' ನಡೆಯುತ್ತಿರುವುದು ಸಿನಿಮಾ ಥಿಯೇಟರ್ ನಲ್ಲಿ ಅಲ್ಲ... ಬದಲಾಗಿ ನಿಮ್ಮ ಮೊಬೈಲಿನಲ್ಲೇ!!

'Dr Vishnu Sena Samiti' conducting Dr.Vishnu Film Festival in Facebook

ಹೌದು, ಇವತ್ತು ಸಾಮಾಜಿಕ ಜಾಲತಾಣಗಳು ಎಷ್ಟು ಪ್ರಭಾವಿ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇದನ್ನರಿತಿರುವ ಡಾ.ವಿಷ್ಣು ಸೇನಾ ಸಮಿತಿಯವರು ತಮ್ಮ ಫೇಸ್ ಬುಕ್ ಪುಟದಲ್ಲಿ ಪ್ರತಿ ಸಂಜೆ ಒಂದೊಂದು ಡಾ.ವಿಷ್ಣುವರ್ಧನ್ ಅವರ ಸಿನಿಮಾಗಳನ್ನು ಲೈವ್ ಮೂಲಕ ಪ್ರದರ್ಶಿಸ್ತಿದ್ದಾರೆ. ಆಶ್ಚರ್ಯ ಏನೆಂದರೆ ಅಭಿಮಾನಿಗಳು ಕಿಕ್ಕಿರಿದು ಆ ಸಿನಿಮಾಗಳನ್ನು ನೋಡುತ್ತಿದ್ದಾರೆ. ಒಂದೊಂದು ಸಿನಿಮಾವನ್ನೂ ಕನಿಷ್ಠ ನಾಲ್ಕೈದು ಲಕ್ಷ ಜನ ಲೈವ್ ನಲ್ಲಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಈ ಆನ್ ಲೈನ್ ಚಲನಚಿತ್ರೋತ್ಸವ ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಹಿನ್ನೆಲೆಯಾಗಿ ನಡೆಯುತ್ತಿರುವ ಕಾರಣಕ್ಕೆ ಮತ್ತಷ್ಟು ಪ್ರಾಧಾನ್ಯತೆ ಈ ಸಿನಿಮಾಗಳಿಗೆ ಸಿಕ್ಕಿದೆ.

ಇನ್ನು ಮೇಲೆ ಬಿಡುವು ಮಾಡ್ಕೊಂಡು dr.vishnu sena samiti FB ಪುಟಕ್ಕೆ ಸಂಜೆಗೊಂದು ಸಲ ಭೇಟಿ ಕೊಡಿ.

English summary
'Dr Vishnu Sena Samiti' is conducting Dr.Vishnuvardhan Film Festival in Facebook as part of 'Dr Vishnuvardhan Raashtriya Utsava' which is scheduled on August 27th in Delhi
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada