ಸುದೀಪ್ ಬದಲು ವಿಷ್ಣುವರ್ಧನ್, ಶಿವಣ್ಣ ಬದಲು ರಾಜ್ ಕುಮಾರ್
Recommended Video

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಹುಟ್ಟುಹಾಕಿದೆ. ಇಬ್ಬರು ಸ್ಟಾರ್ ನಟರು ಒಂದೇ ಸಿನಿಮಾದಲ್ಲಿ ಅಭಿನಯಿಸಿರುವುದು ಅಭಿಮಾನಿ ಬಳಗಕ್ಕೆ ದೊಡ್ಡ ಹಬ್ಬವಾಗಿದೆ.
ಅಕ್ಟೋಬರ್ 18 ರಂದು ರಾಜ್ಯಾದ್ಯಂತ ವಿಲನ್ ಎಂಟ್ರಿಯಾಗ್ತಿದ್ದಾನೆ. ಈ ಮಧ್ಯೆ ಸುದೀಪ್ ಅವರನ್ನ ವಿಷ್ಣುವರ್ಧನ್ ಗೆ ಶಿವರಾಜ್ ಕುಮಾರ್ ಅವರನ್ನ ರಾಜ್ ಕುಮಾರ್ ಗೆ ಹೋಲಿಕೆ ಮಾಡಿರುವ 'ದಿ ವಿಲನ್' ಟೀಸರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋಗಳನ್ನ ನೋಡಿ ಸ್ವತಃ ಸುದೀಪ್ ಮತ್ತು ನಿರ್ದೇಶಕ ಪ್ರೇಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಷ್ಣುವರ್ಧನ್ ಮತ್ತು ರಾಜ್ ಕುಮಾರ್ ಇಬ್ಬರು ವಿಲನ್ ಗಳ ಪ್ರತಿರೂಪದಲ್ಲಿ ಮಿಂಚಿದ್ದಾರೆ.

ಪ್ರೇಮ್ ಈ ಹಿಂದೆ ಸುದೀಪ್ ವರ್ಷನ್ ನಲ್ಲೊಂದು ಟೀಸರ್ ಮತ್ತು ಶಿವಣ್ಣ ವರ್ಷನ್ ನಲ್ಲೊಂದು ಟೀಸರ್ ಬಿಡುಗಡೆ ಮಾಡಿದ್ದರು. ಇದೇ ಸೂತ್ರವನ್ನ ಅನುಕರಣೆ ಮಾಡಿರುವ ಅಭಿಮಾನಿ ಬಳಗ ಸುದೀಪ್ ಟೀಸರ್ ನಲ್ಲಿ ವಿಷ್ಣುವರ್ಧನ್ ಮತ್ತು ಶಿವಣ್ಣ ಟೀಸರ್ ನಲ್ಲಿ ರಾಜ್ ಕುಮಾರ್ ಅವರನ್ನ ಆನಿಮೇಷನ್ ಮೂಲಕ ಬದಲಿಸಿದ್ದಾರೆ.
ಇದು ತುಂಬಾ ವಿಶೇಷವಾಗಿ ಮೂಡಿಬಂದಿದ್ದು, ಎಲ್ಲರೂ ಖುಷಿ ವ್ಯಕ್ತಪಡಿಸಿದ್ದಾರೆ. ಈ ಎರಡು ಟೀಸರ್ ಗಳನ್ನ ರಾಜ್ ಮತ್ತು ವಿಷ್ಣುಗೆ ಡೆಡಿಕೇಟ್ ಮಾಡಿದ್ದು, ವಿ ಚಿತ್ರ ಯೂಟ್ಯೂಬ್ ಚಾನಲ್ ನಲ್ಲಿ ಈ ಆನಿಮೇಷನ್ ಟೀಸರ್ ಪೋಸ್ಟ್ ಆಗಿದೆ. ರುದ್ರೇಶ್ ಬಿವಿ ಎಂಬುವರು ಈ ಟೀಸರ್ ಮಾಡಿದ್ದಾರೆ.


Click it and Unblock the Notifications











