For Quick Alerts
  ALLOW NOTIFICATIONS  
  For Daily Alerts

  'ಕೃಷ್ಣಾರ್ಜುನ'ರಾಗಬೇಕಿದ್ದ ವಿಷ್ಣುವರ್ಧನ್-ಶಿವಣ್ಣಗೆ ಅಡ್ಡಿಯಾಗಿದ್ಯಾರು?

  |

  ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಂದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಅಪಾರವಾದ ಗೌರವ ಮತ್ತು ಅಭಿಮಾನ. ಈ ಬಗ್ಗೆ ಶಿವಣ್ಣ ಹಲವು ಬಾರಿ ಹೇಳಿಕೊಂಡಿದ್ದಾರೆ. ವಿಷ್ಣುವರ್ಧನ್ ಅವರಿಗೂ ಶಿವಣ್ಣ ಮೇಲೆ ಅಷ್ಟೆ ಪ್ರೀತಿ. ಅಂದು ವಿಷ್ಣುವರ್ಧನ್ ಮತ್ತು ಹ್ಯಾಟ್ರಿಕ್ ಹೀರೋ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಉತ್ತುಂಗದಲ್ಲಿದ್ದ ಸಮಯ.

  ದೊಡ್ಡ ವ್ಯಕ್ತಿ ಕೊಟ್ಟಿದ್ದ ಉಡುಗೊರೆಯನ್ನ ವಿಷ್ಣು, ಶಿವಣ್ಣಗೆ ನೀಡಿದ್ದರಂತೆ.! ಏನದು.?ದೊಡ್ಡ ವ್ಯಕ್ತಿ ಕೊಟ್ಟಿದ್ದ ಉಡುಗೊರೆಯನ್ನ ವಿಷ್ಣು, ಶಿವಣ್ಣಗೆ ನೀಡಿದ್ದರಂತೆ.! ಏನದು.?

  ಅಭಿಮಾನಿಗಳು ಇಬ್ಬರ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದರು. ಆ ಸಮಯದಲ್ಲಿ ವಿಷ್ಣುವರ್ಧನ್ ಮತ್ತು ಶಿವಣ್ಣ ಕಾಂಬಿನೇಷನ್ ನ ಸಿನಿಮಾ ಸೆಟ್ಟೇರುತ್ತು. ಅಂದು ಈ ಸಿನಿಮಾ ಅಭಿಮಾನಿಗಳಲ್ಲಿ ಬಾರಿ ನಿರೀಕ್ಷೆ ಹುಟ್ಟುಹಾಕಿತ್ತು. ಆದ್ರೆ ಸಿನಿಮಾ ಪ್ರಾರಂಭದಲ್ಲೆ ನಿಂತು ಹೋಗಿಯ್ತು. ಆದ್ರೀಗ ಈ ಸಿನಿಮಾ ಬಗ್ಗೆ ಚರ್ಚೆಯಾಗುತ್ತಿದೆ. ದಶಕಗಳ ಹಿಂದೆ ಸೆಟ್ಟೇರಿದ್ದ ಸಿನಿಮಾದ ಬಗ್ಗೆ ಈಗ್ಯಾಕೆ ಚರ್ಚೆಯಂತಿರಾ? ಮುಂದೆ ಓದಿ..

  'ಕೃಷ್ಣಾರ್ಜುನ' ಸಿನಿಮಾ

  'ಕೃಷ್ಣಾರ್ಜುನ' ಸಿನಿಮಾ

  ಶಿವರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಕಾಂಬಿನೇಷನ್ ನಲ್ಲಿ ಕೃಷ್ಣಾರ್ಜುನ ಸಿನಿಮಾ ಸೆಟ್ಟೇರಿತ್ತು. ಮೊದಲ ಬಾರಿಗೆ ವಿಷ್ಣುವರ್ಧನ್ ಜೊತೆ ಶಿವಣ್ಣ ತೆರೆಹಂಚಿಕೊಳ್ಳುತ್ತಿರುವ ಕಾರಣ, ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಟೈಟಲ್ ಪ್ರಕಾರ ಇಲ್ಲಿ ಕೃಷ್ಣ ಆಗಿ ವಿಷ್ಣುವರ್ಧನ್, ಅರ್ಜುನ ಆಗಿ ಶಿವಣ್ಣ ಕಾಣಿಸಿಕೊಳ್ಳುವ ಸಾಧ್ಯತೆ ಇತ್ತು. ಆದ್ರೆ ಆ ಸಿನಿಮಾ ಪ್ರಾರಂಭದಲ್ಲೆ ನಿಂತು ಹೋಗಿದೆ. ಆದ್ರೆ ಸಿನಿಮಾ ನಿಂತೂ ಹೋಗಲು ಅಸಲಿ ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ.

  ವಿಷ್ಣು ಸ್ಮಾರಕ ವಿಚಾರಕ್ಕೆ ನಾವೇ ಮುಂದೆ ನಿಲ್ಲುತ್ತೇವೆ ಎಂದ ಶಿವಣ್ಣವಿಷ್ಣು ಸ್ಮಾರಕ ವಿಚಾರಕ್ಕೆ ನಾವೇ ಮುಂದೆ ನಿಲ್ಲುತ್ತೇವೆ ಎಂದ ಶಿವಣ್ಣ

  ವೈರಲ್ ಆಗಿದೆ ಚಿತ್ರದ ಪೋಸ್ಟರ್

  ವೈರಲ್ ಆಗಿದೆ ಚಿತ್ರದ ಪೋಸ್ಟರ್

  ದಶಕಗಳ ಹಿಂದೆ ಸೆಟ್ಟೇರಿದ್ದ ವಿಷ್ಣುವರ್ಧನ್ ಮತ್ತು ಶಿವಣ್ಣ ಅಭಿನಯಿಸಬೇಕಿದ್ದ ಕೃಷ್ಣಾರ್ಜುನ ಸಿನಿಮಾ ಅಂದೆ ನಿಂತೋಗಿದೆ. ಆದ್ರೀಗ ಈ ಸಿನಿಮಾ ಸದ್ದು ಮಾಡುತ್ತಿದೆ. ಕಾರಣ ಅಂದು ಪತ್ರಿಕೆಯಲ್ಲಿ ಪ್ರಕಟವಾದ ಈ ಸಿನಿಮಾದ ಒಂದು ಪೋಸ್ಟರ್ ಈಗ ವೈರಲ್ ಆಗಿದೆ. ಈ ಪೋಸ್ಟರ್ ನಲ್ಲಿ ಶಿವಣ್ಣ ಮತ್ತು ವಿಷ್ಣುವರ್ಧನ್ ಇಬ್ಬರು ಇದ್ದಾರೆ. ವಿಶೇಷ ಅಂದ್ರೆ ಸಿನಿಮಾ ಚಿ.ಗುರುದತ್ ನಿರ್ದೇಶನ ಮಾಡಬೇಕಿತ್ತು. ಟಿ.ಎನ್.ವೆಂಕಟೇಶ್ ನಿರ್ಮಾಣ ಚಿತ್ರಕ್ಕಿತ್ತು. ಆದ್ರೆ ಈ ಸಿನಿಮಾ ಪ್ರಾರಂಭವಾಗಲೇ ಇಲ್ಲ.

  ಪುನೀತ್ ರಾಜ್ ಕುಮಾರ್ ಗೆ ಸಿಗಲಿದೆ ಬಿಗ್ Birthday Gift..! | puneeth rajkumar
  ವಿಷ್ಣುವರ್ಧನ್-ಶಿವಣ್ಣ ಉತ್ತುಂಗದಲ್ಲಿದ್ದ ಕಾಲವದು

  ವಿಷ್ಣುವರ್ಧನ್-ಶಿವಣ್ಣ ಉತ್ತುಂಗದಲ್ಲಿದ್ದ ಕಾಲವದು

  ವಿಷ್ಣುವರ್ಧನ್ ಮತ್ತು ಶಿವಣ್ಣ ಉತ್ತುಂಗದಲ್ಲಿದ್ದ ಕಾಲವದು. ಇಬ್ಬರ ಸಿನಿಮಾವನ್ನು ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದರು. ಅಂಥಹ ಕಾಲದಲ್ಲಿ ಸೆಟ್ಟೇರಿದ ಸಿನಿಮಾ ಯಾಕೆ ನಿಂತು ಹೋಗಿದೆ ಎನ್ನುವುದು ಈಗ ಎದ್ದಿರುವ ಪ್ರಶ್ನೆ. ಅಪರೂಪದ ಜೋಡಿ ಒಂದೆ ಸಿನಿಮಾದಲ್ಲಿ ಮೋಡಿ ಮಾಡಲು ಬರ್ತಿದ್ದಾರೆ ಅಂದ್ರೆ ನಿರೀಕ್ಷೆ ಹೆಚ್ಚಾಗಿಯೆ ಇರುತ್ತೆ. ಅಂಥಹ ಸಮಯದಲ್ಲಿ ಸಿನಿಮಾ ನಿಂತಿರುವುದು ಅಚ್ಚರಿ ಮೂಡಿಸಿದೆ.

  'ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ' ಎಂದ ದರ್ಶನ್'ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ' ಎಂದ ದರ್ಶನ್

  ಅವರ ಜೊತೆ ಸಿನಿಮಾ ಮಾಡಿಲ್ಲ ಎನ್ನುವ ದುಃಖ ಇದೆ

  ಅವರ ಜೊತೆ ಸಿನಿಮಾ ಮಾಡಿಲ್ಲ ಎನ್ನುವ ದುಃಖ ಇದೆ

  ಇತ್ತೀಚಿಗೆ ಶಿವಣ್ಣ, ಡಾ.ವಿಷ್ಣುವರ್ಧನ್ ಅವರ ಜೊತೆ ಸಿನಿಮಾ ಮಾಡಲು ಸಾಧ್ಯವಾಗಿಲ್ಲ ಎನ್ನುವ ಬೇಸರ ವ್ಯಕ್ತಪಡಿಸಿದ್ದರು. 'ನನ್ನ ಪ್ರೀತಿಯಿಂದ ಶಿವು ಅಂತಿದ್ರು. ನನಗೆ ಒಂದೇ ಒಂದು ದುಃಖ ಏನಪ್ಪಾ ಅಂದ್ರೆ, ಅವರ ಜೊತೆಯಲ್ಲಿ ಒಂದು ಸಿನಿಮಾ ಮಾಡಿಲ್ಲ ಅನ್ನೋದು. ಅವರೊಬ್ಬ ಅದ್ಭುತ ನಟ, ಅದಕ್ಕೂ ಮಿಗಿಲಾಗಿ ಅವರೊಬ್ಬ ಗ್ರೇಟ್ ವ್ಯಕ್ತಿ. ಕೊನೆಯ ಸಮಯದಲ್ಲಿ ಸಾಕಷ್ಟು ವಿಷಯಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದರು. ಅದು ನಮ್ಮಲ್ಲಿ ಇರಲಿ ಬಿಡಿ' ಎಂದಿದ್ದರು.

  English summary
  Dr.Vishnuvardhan and Shivaraj Kumar's Krishnarjuna movie poster viral now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X