For Quick Alerts
  ALLOW NOTIFICATIONS  
  For Daily Alerts

  ನಾ ಕಂಡಂತೆ ವಿಷ್ಣುವರ್ಧನ್: 'ಕದಂಬ' ಚಿತ್ರ ಸೋತಾಗ ಜೀವನದ ದಾರಿದೀಪವಾದರು'

  |

  ''ಕದಂಬ ಚಿತ್ರದ ಸೋಲು, ನನ್ನ ಜೀವನದ ಸೋಲು ಎಂದು ಎದೆಗುಂದಿದಾಗ ಮನೆಗೆ ಕರೆಸಿ ನಾಜೂಕಾಗಿ ಬೈದು ಮುಂದಿನ ಜೀವನದ ದಾರಿದೀಪವಾದರು......'' ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಬಗ್ಗೆ ಖ್ಯಾತ ನಟ-ಸಂಭಾಷಣೆಕಾರ ನವೀನ್ ಕೃಷ್ಣ ತಮ್ಮ ಅಂತರಂಗದಿಂದ ಹಂಚಿಕೊಂಡಿರುವ ಮಾತಿದು.

  ಸೆಪ್ಟೆಂಬರ್ 18 ರಂದು ಡಾ ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬವಿದೆ. ಈ ಹಿನ್ನೆಲೆ ಡಾ ವಿಷ್ಣು ಸೇನೆ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ''ನಾ ಕಂಡಂತೆ ವಿಷ್ಣುವರ್ಧನ್'' ಎಂದು ಚಾಲೆಂಜ್ ಆರಂಭಿಸಿದರು. ಈ ಚಾಲೆಂಜ್‌ನಲ್ಲಿ ಭಾಗವಹಿಸಿದ ನಟ-ಸಂಭಾಷಣೆಕಾರ ನವೀನ್ ಕೃಷ್ಣ ವಿಷ್ಣುದಾದ ಜೊತೆಗಿನ ಸವಿ ನೆನಪು ಹಂಚಿಕೊಂಡಿದ್ದಾರೆ. ಮುಂದೆ ಓದಿ.....

  ಡಾ ವಿಷ್ಣು ಸ್ಮಾರಕ ವಿನ್ಯಾಸ: ವಾಹ್....ಎನ್ನುವಂತಿದೆ ಯೋಜನೆಗಳು, ಏನೆಲ್ಲ ಇರಲಿದೆ?ಡಾ ವಿಷ್ಣು ಸ್ಮಾರಕ ವಿನ್ಯಾಸ: ವಾಹ್....ಎನ್ನುವಂತಿದೆ ಯೋಜನೆಗಳು, ಏನೆಲ್ಲ ಇರಲಿದೆ?

  ಮುತ್ತಿನಹಾರ ದಿ ಬೆಸ್ಟ್

  ಮುತ್ತಿನಹಾರ ದಿ ಬೆಸ್ಟ್

  ''ದಿನ ಆರಂಭವಾಗುತ್ತಿದ್ದು ಅವರ ''ಸುಪ್ರಭಾತ''ದಿಂದ

  ದಿನ ಅಂತ್ಯವಾಗುತ್ತಿದ್ದು ಅವರ ''ಲಾಲಿ''ಯಿಂದ

  ಇಂದಿಗೂ 'ದಿ ಬೆಸ್ಟ್' ಎಂದರೆ

  ನೀರು ತೊಟ್ಟಿಕ್ಕುವ ಮುತ್ತಿನಹಾರ

  ಪಾರಿವಾಳಗಳ ನಡುವೆ ನಿಷ್ಕರ್ಷದ ಪ್ರಹಾರ''

  ಬಲಹೀನವಾದಾಗ ಬಲ ತುಂಬಿದರು

  ಬಲಹೀನವಾದಾಗ ಬಲ ತುಂಬಿದರು

  ''ನನ್ನ ತಂದೆಯೆ ನನ್ನ ಮೊದಲ ಹೀರೋ

  ''ಕದಂದ''ದಲ್ಲಿ ಯಂದೆಯಾದರೂ

  ಎವರ್‌ಗ್ರೀನ್ ಹೀರೋ ನಟನೆಯಲ್ಲಿ

  ಬಲಹೀನವಾದಾಗ ಬಲ ತುಂಬಿದರು

  ಒಮ್ಮೊಮ್ಮೆ ಮಾತಡಲು ಹೋದರೆ ಮೌನಿಯಾಗುತ್ತಿದ್ದರು

  'ನನ್ನ ಲವ್ ಸ್ಟೋರಿ'ಗೆ ಮದುವೆಯ ಶ್ರೀಕಾರ ಹಾಕಿದರು''

  ಜೀವನದ ದಾರಿದೀಪವಾದರು

  ಜೀವನದ ದಾರಿದೀಪವಾದರು

  ''ಕದಂಬ ಚಿತ್ರದ ಸೋಲು

  ನನ್ನ ಜೀವನದ ಸೋಲು

  ಎಂದು ಎದೆಗುಂದಿದಾಗ ಮನೆಗೆ ಕರೆಸಿ

  ನಾಜೂಕಾಗಿ ಬೈದು ಮುಂದಿನ ಜೀವನದ ದಾರಿದೀಪವಾದರು

  ಅವರ ನೆರಳೆ ನಮಗೆ ಶ್ರೀರಕ್ಷೆ ನಾವು ನಟಿಸುತ್ತಿರುವುದು ಅವ್ರು ಜೀವಿಸಿದ ಪಾತ್ರಗಳ ಭಿಕ್ಷೆ''

  Recommended Video

  ನಮಗೆ ತುಳಸಿಗಿಡ ಬರೀ ತುಳಸಿಗಿಡ ಮಾತ್ರ | Filmibeat Kannada
  ಕದಂಬ ಚಿತ್ರದಲ್ಲಿ ಮಗನ ಪಾತ್ರ

  ಕದಂಬ ಚಿತ್ರದಲ್ಲಿ ಮಗನ ಪಾತ್ರ

  2004ರಲ್ಲಿ ತೆರೆಕಂಡಿದ್ದ ಕದಂಬ ಚಿತ್ರದಲ್ಲಿ ವಿಷ್ಣುವರ್ಧನ್ ನಾಯಕನಾಗಿದ್ದು, ಅವರ ಮಗನ ಪಾತ್ರದಲ್ಲಿ ನವೀನ್ ಕೃಷ್ಣ ನಟಿಸಿದ್ದರು. ವಿಷ್ಣು ಪಾತ್ರಕ್ಕೆ ಸರಿಸಮಾನದ ಪಾತ್ರ ಇದಾಗಿತ್ತು. ತಂದೆ-ಮಗನ ನಡುವೆಯೇ ಕಥೆ ಚಿತ್ರದ ಪ್ರಮುಖ ಆಕರ್ಷಣೆಯೂ ಆಗಿತ್ತು. ಆದ್ರೆ, ಈ ಸಿನಿಮಾ ನಿರೀಕ್ಷೆಯ ಮಟ್ಟದ ಯಶಸ್ಸು ಸಾಧಿಸಿಲ್ಲ. ಸುರೇಶ್ ಕೃಷ್ಣ ಈ ಚಿತ್ರ ನಿರ್ದೇಶಿಸಿದ್ದರು. ಭಾನುಪ್ರಿಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

  English summary
  Dr Vishnuvardhan Birthday: Actor Naveen krishna participate in 'Naa kandanthe vishnuvardhan' challenge and he shared some bueatiful memeories abou Vishnuvardhan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X