ಸತ್ತ ಮೇಲೂ ನಾನು ವಿಷ್ಣು ಅಭಿಮಾನಿ ಎಂದು ಜಗತ್ತಿಗೆ ಸಾರಿದ ದಾದಾ ಸೇನಾನಿ

ಸಿನಿಮಾ ನಟರಿಗೆ ಎಂತೆಂತಾ ಅಭಿಮಾನಿಗಳು ಇರ್ತಾರೆ. ಸ್ಟಾರ್ ನಟರ ಹುಟ್ಟುಹಬ್ಬಕ್ಕೆ ಮನೆವರೆಗೂ ಹೋಗಿ ಕೇಕ್ ಕಟ್ ಮಾಡಿಸಿ, ಹೂವಿನ ಹಾರ ಹಾಕಿ, ಕೈ ಕುಲುಕಿ ಫೋಟೋ ತೆಗೆಸಿಕೊಂಡು ಹೋಗ್ತಾರೆ. ಎದೆ ಮೇಲೆ, ಮೈಮೇಲೆ ಆ ನಟನ ಹೆಸರು, ಫೋಟೋವನ್ನ ಟ್ಯಾಟು ಹಾಕಿಸಿಕೊಳ್ಳುತ್ತಾರೆ.

ಸ್ಟಾರ್ ಗಳ ಹೆಸರಲ್ಲಿ ಸಮಾಜ ಸೇವೆ ಮಾಡ್ತಾರೆ. ರಸ್ತೆ ಅಥವಾ ಮನೆಗೆ ಅವರ ಹೆಸರು ಇಡ್ತಾರೆ. ಅವರ ಮಕ್ಕಳಿಗೆ ನಟರ ಹೆಸರಿಡುತ್ತಾರೆ. ಅವರ ಹೆಸರಲ್ಲಿ ಬಡಮಕ್ಕಳಿಗೆ ನೆರವು ಕೊಡ್ತಾರೆ. ಹೀಗೆ ಅನೇಕ ರೀತಿಯ ಅಭಿಮಾನ ನೋಡಿರುತ್ತೇವೆ.

ಈಗ ನಾವು ಹೇಳಲು ಹೊರಟಿರುವ ಅಭಿಮಾನಿಯ ಕಥೆ ಬಹುಶಃ ಅಪರೂಪದಲ್ಲಿ ಅಪರೂಪ. ಇಂತಹ ಅಭಿಮಾನವನ್ನ ಇದುವರೆಗೂ ಯಾರೂ ನೋಡಿರಲು ಸಾಧ್ಯವಿಲ್ಲ. ಹೌದು, ಇಷ್ಟು ದಿನ ನೀವು ನೋಡಿದ್ದು ಬದುಕಿರುವವರೆಗೂ ಇರ್ತಿದ್ದ ಅಭಿಮಾನ. ಆದ್ರೆ, ಇದು ಸತ್ತ ಮೇಲೂ ಆ ಅಭಿಮಾನ ಹಾಗೆ ಉಳಿಸಿಕೊಂಡ ವಿಷ್ಣು ಅಭಿಮಾನಿ ರಮೇಶ್ ಕಥೆ. ಪೂರ್ತಿ ವಿವರ ತಿಳಿಯಲು ಮುಂದೆ ಓದಿ.....

ಸಮಾಧಿ ಕಲ್ಲಿನಲ್ಲಿ ಅಭಿಮಾನ ಮೆರೆದ ವಿಷ್ಣು ಅಭಿಮಾನಿ

ಸಮಾಧಿ ಕಲ್ಲಿನಲ್ಲಿ ಅಭಿಮಾನ ಮೆರೆದ ವಿಷ್ಣು ಅಭಿಮಾನಿ

ಯಮಲೂರು ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾಗಿದ್ದ ಎಸ್ ರಮೇಶ್ ಅವರು ಕಳೆದ ವರ್ಷ ನಿಧನರಾಗಿದ್ದರು. ಇವರ ಅಂತ್ಯ ಸಂಸ್ಕಾರವಾದ ಸ್ಥಳದಲ್ಲಿ ಸಮಾಧಿ ಕಟ್ಟಲಾಗಿದ್ದು, ಆ ಸಮಾಧಿ ಕಲ್ಲಿನಲ್ಲಿ ರಮೇಶ್ ಅವರ ಭಾವಚಿತ್ರದ ಜೊತೆ ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಭಾವಚಿತ್ರವೂ ಹಾಕಲಾಗಿದೆ.

ರಮೇಶ್ ಆಸೆ ನೆರವೇರಿಸಿದ ಕುಟುಂಬ

ರಮೇಶ್ ಆಸೆ ನೆರವೇರಿಸಿದ ಕುಟುಂಬ

ರಮೇಶ್ ಅವರು ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ತಾನೂ ಸಾಯುವುದಕ್ಕೂ ಮುಂಚೆ ಮನೆಯವರ ಬಳಿ, 'ನಾನು ಸತ್ತ ಬಳಿಕ ನನ್ನ ಸಮಾಧಿಗೆ ನೆಡುವ ಗುರುತು ಕಲ್ಲಿನಲ್ಲಿ ಯಜಮಾನ್ರ ಫೋಟೋ ಇರಬೇಕು' ಅಂತ ಹೇಳಿದ್ದರಂತೆ. ಅದರಂತೆ ಅವರ ಕುಟುಂಬದವರು ರಮೇಶ್ ಅವರ ಕೊನೆ ಆಸೆಯನ್ನು ಈಡೇರಿಸಿದ್ದಾರೆ.

ಇಂತಹ ಅಭಿಮಾನಕ್ಕೆ ಸಾವುಂಟೆ?

ಇಂತಹ ಅಭಿಮಾನಕ್ಕೆ ಸಾವುಂಟೆ?

ಆ ನಟ ಸಾಯುಬಹುದು, ಆ ಅಭಿಮಾನಿಯೂ ಸಾಯಬಹುದು. ಆದ್ರೆ, ಇಂತಹ ಅಭಿಮಾನ ಎಂದಿಗೂ ಸಾಯುವುದಿಲ್ಲ. ಇಂತಹ ಅಭಿಮಾನಕ್ಕೆ ನಿಜಕ್ಕೂ ಸಾವಿಲ್ಲ. ಮತ್ತು ಸಾಯಿಯೂ ಇಲ್ಲ ಬಿಡಿ. ವಿಷ್ಣುವರ್ಧನ್ ಅಂತಹ ನಟರನ್ನ ಪಡೆದ ನಾವು ಪುಣ್ಯವಂತರು ಎಂದು ವಿಷ್ಣು ಅಭಿಮಾನಿಗಳು ಹೇಳ್ತಾರೆ. ಆದ್ರೆ, ಈ ಅಭಿಮಾನ ನೋಡಿದ್ಮೇಲೆ ಇಂತಹ ಅಭಿಮಾನಿಗಳನ್ನ ಪಡೆದು ವಿಷ್ಣುವರ್ಧನ್ ಅವರು ಕೂಡ ಪುಣ್ಯವಂತರು.

ವಿಷ್ಣು ಸ್ಮಾರಕ ಆಗಿಲ್ಲ ಎನ್ನುವುದೇ ಬೇಸರ

ವಿಷ್ಣು ಸ್ಮಾರಕ ಆಗಿಲ್ಲ ಎನ್ನುವುದೇ ಬೇಸರ

ತಾನೂ ಸತ್ತ ಮೇಲೂ ವಿಷ್ಣು ಅಭಿಮಾನಿ ಎಂದು ಜಗತ್ತಿಗೆ ಸಾರಿದ ರಮೇಶ್ ಅವರನ್ನ ನೆನೆದರೇ ಮೈ ರೋಮಾಂಚನವಾಗುತ್ತೆ. ಆದ್ರೆ, ಇಂತಹ ಅಭಿಮಾನಿಗಳನ್ನ ಹೊಂದಿರುವ ನಟನಿಗೆ ಮಾತ್ರ ಇನ್ನೂ ಸ್ಮಾರಕ ನಿರ್ಮಾಣವಾಗಿಲ್ಲ ಎನ್ನುವುದು ಬೇಸರದ ಸಂಗತಿ. ಆದಷ್ಟೂ ಬೇಗ ಯಜಮಾನರ ಸ್ಮಾರಕ ಆಗಲಿ.

More from Filmibeat

English summary
Dr Vishnuvardhan fan Ramesh told his family members that, you should put Vishnuvardhan photo on my grave after my death. now family members fulfilled ramesh's last wish.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X