ಡಾ. ವಿಷ್ಣುವರ್ಧನ್ ಹೆಸರಿನಲ್ಲಿ ಗ್ರಂಥಾಲಯ ಸ್ಥಾಪನೆ
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಗ್ರಂಥಾಲಯವೊಂದು ಬೆಂಗಳೂರಿನ ಎಂಸಿ ಲೇಔಟ್ ನಲ್ಲಿ ಬಾಗಿಲು ತೆರೆಯಲಿದೆ. ಐಎಎಸ್, ಕೆಎಎಸ್ ನಂತಹ ಸ್ಪರ್ಧಾತ್ಮಕ ಹಾಗೂ ನಾಗರೀಕ ಸೇವಾ ಪರೀಕ್ಷೆಗಳಿಗೆ ಹಾಜರಾಗುವ ಆಕಾಂಕ್ಷಿಗಳಿಗೆ ಈ ಗ್ರಂಥಾಲಯದ ದೇಗುಲವಿದ್ದಂತೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಈ ಗ್ರಂಥಾಲಯದ ನಾಮಫಲಕವನ್ನು ಶಾಸಕ ಪ್ರಿಯ ಕೃಷ್ಣ ಅವರು ಉದ್ಘಾಟಿಸಿದರು. ಕಾರ್ಪೊರೇಟರ್ ರೂಪಾ ದೇವಿ, ಡಾ.ಭಾರತಿ ವಿಷ್ಣುವರ್ಧನ್ ಹಾಗೂ ನಟ ಅನಿರುದ್ಧ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹಾಗೂ ವಿಷ್ಣುವರ್ಧನ್ ಅವರಿಗೆ ಆತ್ಮೀಯರಾಗಿದ್ದ ಆರ್.ಜಿ.ಪಾರ್ಥಸಾರಥಿ ಅವರನ್ನು ಸನ್ಮಾನಿಸಲಾಯಿತು. ಭಾರತಿ ಅವರು ಮಾತನಾಡುತ್ತಾ, ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಮಾಡುತ್ತಿರುವ ವಿಳಂಬದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದರು. ಇನ್ನದರೂ ಸರ್ಕಾರ ಎಚ್ಚೆತ್ತುಕೊಂಡು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿ ಎಂದರು.
ವಿಷ್ಣುವರ್ಧನ್ ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆ ಅಪಾರ. ಅವರಿಗೆ ಸೂಕ್ತ ಗೌರವ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸ್ಮಾರಕ ನಿರ್ಮಾಣಕ್ಕೆ ಹಲವು ಬಾರಿ ಬೇಡಿಕೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಕಿಡಿಕಿಡಿಯಾದರು. (ಏಜೆನ್ಸೀಸ್)
More from Filmibeat
English summary
Kannada films legendary acrtor Dr. Vishnuvardhan's memory for his ardent fans around the state was further cemented through the inauguration of a library for IAS, KAS and other career aspirants at M.C.Lay out in the Govindaraja Nagara Assembly constituency.


Click it and Unblock the Notifications












