twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣುವರ್ಧನ್ 'ನಾಗರಹಾವು' ರೋಷಕ್ಕೆ ನಲವತ್ತು ವರ್ಷ

    By Rajendra
    |

    ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರು "ಹಾವಿನ ದ್ವೇಷ ಹನ್ನೆರಡು ವರ್ಷ ನನ್ನ ರೋಷ ನೂರು ವರುಷ... ಈ ರಾಮಾಚಾರಿನ ಕೆಣಕೋ ಗಂಡು ಇನ್ನು ಹುಟ್ಟಿಲ್ಲ ಆ ಗಂಡೇ ಹುಟ್ಟಿಲ್ಲ" ಎಂದು ಅಬ್ಬರಿಸಿ ಇದೇ ಡಿಸೆಂಬರ್ 29ಕ್ಕೆ ನಲವತ್ತು ವರ್ಷಗಳಾಗುತ್ತಿದೆ. ವಿಷ್ಣು ನಾಯಕ ನಟನಾಗಿ ಅಭಿನಯಿಸಿದ ಚೊಚ್ಚಲ ಚಿತ್ರ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರ 'ನಾಗರಹಾವು'.

    ಈ ಶುಭ ಸಂದರ್ಭದಲ್ಲಿ 'ನಾಗರಹಾವು' ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತಿದೆ. ಒಟ್ಟು 220 ಪುಟಗಳ ಈ ಪುಸ್ತಕದ ಬೆಲೆ ರು.130. ಕೆ.ಆರ್. ಜನಾರ್ಧನ ರಾವ್ ಸಾಳಂಕೆ ಬರೆದಿರುವ ಈ ಪುಸ್ತಕವನ್ನು ಅನ್ನಪೂರ್ಣ ಪಬ್ಲಿಷರ್ಸ್ ಅಂಡ್ ಡಿಸ್ಟ್ರಿಬ್ಯೂಟರ್ಸ್ ಪ್ರಕಾಶನ ಹೊರತಂದಿದೆ.

    Naagarahaavu book
    ವಿಶೇಷ ಎಂದರೆ 'ನಾಗರಹಾವು' ಚಿತ್ರ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಮೊದಲ ಚಿತ್ರವೂ ಹೌದು. ಜಲೀಲನ ಪಾತ್ರಕ್ಕೆ ಮೊದಲು ರಜನಿಕಾಂತ್ ಆಯ್ಕೆಯಾಗಿದ್ದರು. ಒಂದಷ್ಟು ಸನ್ನಿವೇಶಗಳ ಚಿತ್ರೀಕರಣವೂ ನಡೆದಿತ್ತು. ಆದರೆ ಕಾರಣಾಂತರಗಳಿಂದ ರಜನಿಕಾಂತ್ ಬದಲು ಅಂಬರೀಶ್ ನಟಿಸುವಂತಾಯಿತು.

    "ಬಾರೆ ಬಾರೆ ಚೆಂದದ ಚೆಲುವಿನ ತಾರೆ..." ಎಂಬ ಹಾಡನ್ನು ಸ್ಲೋ ಮೋಷನ್ ನಲ್ಲಿ ತೋರಿಸಿದ ಮೊಟ್ಟ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೂ 'ನಾಗರಹಾವು' ಚಿತ್ರ ಪಾತ್ರವಾಗಿದೆ. ಖ್ಯಾತ ಸಾಹಿತಿ, ಕಾದಂಬರಿಕಾರ ತ.ರಾ.ಸುಬ್ಬರಾವ್ ಅವರ 'ನಾಗರಹಾವು' ಕಾದಂಬರಿ ಆಧಾರಿತ ಚಿತ್ರ ಇದು. ಬೆಂಗಳೂರಿನ ಮೂರು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡ ಮೊದಲ ಕನ್ನಡ ಚಿತ್ರ.

    ರಾಮಾಚಾರಿಯಾಗಿ ವಿಷ್ಣುವರ್ಧನ್, ಅಲಮೇಲು ಪಾತ್ರದಲ್ಲಿ ಆರತಿ, ಚಾಮಯ್ಯ ಮೇಷ್ಟ್ರು ಪಾತ್ರದಲ್ಲಿ ಕೆ.ಎಸ್.ಅಶ್ವತ್ಥ್ ಹಾಗೂ ಜಲೀಲನಾಗಿ ಅಂಬರೀಶ್ ಪಾತ್ರ ಇಂದಿಗೂ ಪ್ರೇಕ್ಷಕರ ಮೇಲೆ ಅಚ್ಚಳಿಯದ ಮುದ್ರೆ ಒತ್ತಿದೆ. ನಾಗರಹಾವು ಪುಸ್ತಕದ ಪತ್ರಿಗಳಿಗಾಗಿ ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ ಸುರೇಶ್: 98808 02551. (ಒನ್ಇಂಡಿಯಾ ಕನ್ನಡ)

    English summary
    Sahasa Simha Dr. Vishnuvardhan's first Kannada film Naagarahavu (1972) celebrating 40 years of release on 29th December 2012. For this occasion Janardhana Rao Salanke, who has earlier published a book 'Mareyada Manikya - Yajamanru Dr Vishnuvardhan', is now all set to release book title as Naagarahavu.
    Monday, December 17, 2012, 14:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X