twitter
    For Quick Alerts
    ALLOW NOTIFICATIONS  
    For Daily Alerts

    ಸಾಹಸಸಿಂಹ ಡಾ.ವಿಷ್ಣು ಅವರ ಹೆಸರಿನಲ್ಲಿ ಲಿಮ್ಕಾ ದಾಖಲೆ

    By ವೀರಕಪುತ್ರ ಶ್ರೀನಿವಾಸ
    |

    ಕನ್ನಡ ಚಿತ್ರರಂಗದ ಸಮಸ್ಯೆಗಳು ನೂರಾರು. ಚಿತ್ರಮಂದಿರ ಸಮಸ್ಯೆ, ನಾಯಕರ ಸಂಭಾವನೆ, ಪರಭಾಷಾ ಚಿತ್ರಗಳ ಪಾರುಪತ್ಯ ಹೀಗೆ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತೆ. ಇವುಗಳ ಮದ್ಯೆ ಒಂದು ಚಿತ್ರ ಬಿಡುಗಡೆಯಾಗಬೇಕಾದರೆ ಹತ್ತು, ಹದಿನೈದು ವರುಷಗಳ ಹಿಂದೆ ಇದ್ದ ಸಂಭ್ರಮ, ಕುತೂಹಲ ಯಾರಿಗೂ ಗೊತ್ತಿಲ್ಲದಂತೆ ಮಾಯವಾಗಿರುವುದು ಯಾರೂ ಗಮನಿಸುತ್ತಲೇ ಇಲ್ಲ.

    ಸಂಭ್ರಮ, ಕುತೂಹಲಗಳ ಜಾಗದಲ್ಲಿ ಕೇವಲ "ವ್ಯವಹಾರ" ಮಾತ್ರ ನೆಲೆಗೊಂಡು ಚಿತ್ರರಂಗದ ಬಾಂಧವ್ಯಗಳು ಅಷ್ಟಕಷ್ಟೆ ಎಂಬ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಇಲ್ಲೊಂದು ಸಂತಸದ ಸುದ್ದಿಯಿದೆ. [ವಿಷ್ಣು ಸ್ಮಾರಕದ ಬಗ್ಗೆ ಸುದೀಪ್ ಹೇಳಿದ್ದರಲ್ಲಿ ತಪ್ಪೇನಿದೆ?]

    ಈ ಸಂತಸದ ಸುದ್ದಿಗೆ ಕಾರಣವಾಗಿರುವವರು ಒನ್ಸ್ ಎಗೈನ್ ಚಿತ್ರರಂಗದ ಆಧಾರಸ್ತಂಭಗಳಲ್ಲೊಬ್ಬರಾದ ಡಾ.ವಿಷ್ಣು ಮತ್ತು ಅವರ ಅಭಿಮಾನಿಗಳು ಎಂಬುದು ಗಮನಿಸಬೇಕಾದ ಅಂಶ. ಡಾ.ವಿಷ್ಣು ಅವರು ನಮ್ಮನ್ನು ಅಕಾಲಿಕವಾಗಿ ಅಗಲಿ ಹೋದದ್ದು ಯಾವೊಬ್ಬ ಅಭಿಮಾನಿಯೂ ಜೀರ್ಣಿಸಿಕೊಳ್ಳುವಂತಹುದ್ದಾಗಿರಲಿಲ್ಲ. ಅವರಿಲ್ಲದ ಕೊರಗನ್ನು ನೀಗಲು ಅವರ ಉತ್ತರಾಧಿಕಾರಿಗಳು ಚಿತ್ರರಂಗದಲ್ಲಿ ಯಾರೂ ಇಲ್ಲವೆಂಬುದು ಕಟುಸತ್ಯ.

    ಇಂತಹ ಹೊತ್ತಿನಲ್ಲಿ ಮತ್ತೆ ಗತವೈಭವದ ದಿನಗಳನ್ನು ಗಾಂಧಿನಗರದಲ್ಲಿ ಕಾಣಿಸಬೇಕು ಎಂದು ನಿರ್ಧರಿಸಿದ ವಿಷ್ಣು ಅಭಿಮಾನಿಗಳಾದ ಆಟೋ ಗೋವಿಂದ್ ಮತ್ತು ಸತೀಶ್ ಅವರು 'ಖೈದಿ' ಚಿತ್ರವನ್ನು ಮರುಬಿಡುಗಡೆಗೊಳಿಸಿದರು.

    ಇದಕ್ಕೆ ಪೂರಕವಾಗಿ ಇಂಡಿಯನ್ ಡಾ.ವಿಷ್ಣು ಪ್ಯಾನ್ಸ್ ನ ಜಾನಕಿವರ್ಧನ್, ಸಿ.ಅನಿಲ್ ಕುಮಾರ್, ವಿಷ್ಣುಪ್ರತಾಪ್ ಮತ್ತು ಆನಂದ್ ರಾಚ್ ಮುಂತಾದವರಿದ್ದಂತಹ ಅಭಿಮಾನಿಗಳ ತಂಡ, ಈ ಚಿತ್ರ ಬಿಡುಗಡೆಯ ಸಂದರ್ಭವನ್ನು ಅವಿಸ್ಮರಣೀಯವಾಗಿಸಬೇಕೆಂದು ಪಣತೊಟ್ಟು ದಾಖಲೆಯ ಹೂವಿನ ಹಾರವನ್ನು ಹಾಕಿದರು (ಚಿತ್ರದಲ್ಲಿ ಕಾಣಬಹುದು).

    Dr Vishnuvardhan's Khaidi enters Limca Book of Records
    ಈ ದಾಖಲೆಯ ಹೂವಿನ ಹಾರಗಳನ್ನು ನೋಡಿದಂತಹ ಸಾಹಿತಿ ಜನಾರ್ಧನ್ ರಾವ್ ಸಾಳಂಕೆ ಅವರು ತಾವೇ ಸ್ವತಃ ಆಸಕ್ತಿವಹಿಸಿ ಡಾ.ವಿಷ್ಣು ಅವರ ಕಟೌಟ್ ಗೆ ಹಾರ ಹಾಕಿದ್ದಂತಹ ಚಿತ್ರಗಳನ್ನು ಲಿಮ್ಕಾ ಬುಕ್ ಆಪ್ ರೆಕಾರ್ಡ್ಸ್ ಗೆ ಕಳುಹಿಸಿಕೊಟ್ಟರು. 6 ತಿಂಗಳಿಂದ ಅವರು ಕೇಳಿದ ಎಲ್ಲಾ ದಾಖಲೆಗಳನ್ನು ಒದಗಿಸಿದಂತಹ ಸಾಳಂಕೆ ಅವರು ಕೊನೆಗೂ ಲಿಮ್ಕಾ ಪುಸ್ತಕದಲ್ಲಿ ಈ ದಾಖಲೆಯನ್ನು ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ದಾಖಲೆ ಕೇವಲ ವಿಷ್ಣು ಅಭಿಮಾನಿಗಳು ಗರ್ವಿಸಬೇಕಾದ ಅಂಶವಲ್ಲ ಸಮಸ್ತ ಕನ್ನಡ ಚಿತ್ರರಂಗ ಗೌರವಿಸಬೇಕಾದ ವಿಷಯ ಎಂಬುದನ್ನು ಅರಿಯಬೇಕು. ವಿಷ್ಣು ಅವರು ನಮ್ಮನ್ನಗಲಿ ಐದು ವರುಷಗಳಾದರೂ ಅವರ ಹೆಸರಿನಲ್ಲಿ ಗಮನಾರ್ಹವಾದಂತಹ ಯಾವುದೇ ಕೆಲಸಗಳಾಗುತ್ತಿಲ್ಲ ಎಂಬ ನೋವಿನ ನಡುವೆಯೇ ಸಿಕ್ಕಿರುವ ಈ ದಾಖಲೆಯ ಗೌರವ ಅಭಿಮಾನಿಗಳಿಗೆ ಕೊಂಚ ಖುಷಿಯನ್ನು ತಂದಿರುವುದು ಸತ್ಯ.

    'ಖೈದಿ' ಚಿತ್ರ ಬಿಡುಗಡೆಯಾದ 3 ತಿಂಗಳಿಗೆ ಬಿಡುಗಡೆಯಾದ 'ಕಸ್ತೂರಿನಿವಾಸ' ಚಿತ್ರಕ್ಕೂ ಕೂಡ ಅಭಿಮಾನಿಗಳು ಇದೇ ತರಹ ಹಾರಗಳನ್ನು ಹಾಕಿ ಸಂತಸ ಮೆರೆದದ್ದನ್ನು ಇಲ್ಲಿ ನೆನೆಯಬಹುದು. ಚಿತ್ರರಂಗದ ಗತವೈಭವದ ದಿನಗಳನ್ನು ನೆನಪಿಸಲು ರಾಜ್ ಮತ್ತು ವಿಷ್ಣುವಿನಿಂದ ಮಾತ್ರ ಸಾಧ್ಯ ಎಂಬುದು ಪದೇ ಪದೇ ಸಾಬೀತಾಗುತ್ತಿರುವುದು ಮಾತ್ರ ಕನ್ನಡಚಿತ್ರರಂಗದ ಭವಿಷ್ಯದ ದೃಷ್ಟಿಯಿಂದ ಒಳ್ಳೆ ಸುದ್ದಿಯಂತೂ ಅಲ್ಲ.

    ಜಾನಕಿವರ್ಧನ್ (ಇಂಡಿಯನ್ ಡಾ.ವಿಷ್ಣು ಪ್ಯಾನ್ಸ್)

    ಜಾನಕಿವರ್ಧನ್ (ಇಂಡಿಯನ್ ಡಾ.ವಿಷ್ಣು ಪ್ಯಾನ್ಸ್)

    ಅಭಿಮಾನದಿಂದ ಮಾಡಿದ ಕೆಲಸ, ದಾಖಲೆಯಾಗುತ್ತೆ ಅಂತ ಗೊತ್ತಿರಲಿಲ್ಲ. ನನ್ನೊಂದಿಗೆ ಕೈಜೋಡಿಸಿದ ಎಲ್ಲರಿಗೂ ಈ ದಾಖಲೆ ಅರ್ಪಣೆ.

    ಸಿ.ಅನಿಲ್ ಕುಮಾರ್ (ಇಂಡಿಯನ್ ಡಾ.ವಿಷ್ಣು ಪ್ಯಾನ್ಸ್)

    ಸಿ.ಅನಿಲ್ ಕುಮಾರ್ (ಇಂಡಿಯನ್ ಡಾ.ವಿಷ್ಣು ಪ್ಯಾನ್ಸ್)

    ಮಳೆಯಲ್ಲಿ, ಕತ್ತಲಲ್ಲಿ ಹಾರಹಾಕಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆಗ ಕಷ್ಟಪಟ್ಟಿದ್ದು ಈಗ ಸಾರ್ಥಕವೆನಿಸುತ್ತಿದೆ.

    ವಿಷ್ಣುಪ್ರತಾಪ್ (ಇಂಡಿಯನ್ ಡಾ.ವಿಷ್ಣು ಪ್ಯಾನ್ಸ್)

    ವಿಷ್ಣುಪ್ರತಾಪ್ (ಇಂಡಿಯನ್ ಡಾ.ವಿಷ್ಣು ಪ್ಯಾನ್ಸ್)

    ಗತವೈಭವವನ್ನು ಕಾಣಬೇಕೆಂಬ ಆಸೆಯಿತ್ತೇ ವಿನಃ ದಾಖಲೆ ಮಾಡಬೇಕೆಂದಿರಲಿಲ್ಲ. ನಿರೀಕ್ಷಿಸದೇ ಸಿಕ್ಕ ಈ ಗೌರವ ಸಂತಸ ತಂದಿದೆ. ನೂರಾರು ಅಭಿಮಾನಿಗಳು ನಮ್ಮೊಡನೆ ಸಹಕರಿಸಿದ್ದು ಮರೆಯೋಕೆ ಸಾಧ್ಯವೇ ಇಲ್ಲ.

    ಆನಂದ್ ರಾಚ್ (ಇಂಡಿಯನ್ ಡಾ.ವಿಷ್ಣು ಪ್ಯಾನ್ಸ್)

    ಆನಂದ್ ರಾಚ್ (ಇಂಡಿಯನ್ ಡಾ.ವಿಷ್ಣು ಪ್ಯಾನ್ಸ್)

    ಬಹಳ ಖುಷಿಕೊಟ್ಟಿದೆ. ನಿಸ್ವಾರ್ಥ ಅಭಿಮಾನಕ್ಕೆ ಸಿಕ್ಕ ಫಲವೆಂದು ಭಾವಿಸಿದ್ದೇನೆ. ಇನ್ನೂ ನೂರೆಂಟು ದಾಖಲೆಗಳು ವಿಷ್ಣು ಹೆಸರಲ್ಲಿ ಆಗಬೇಕಿದೆ. ನನ್ನೊಂದಿಗೆ ಕೈಜೋಡಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು.

    ಜನಾರ್ಧನ್ ರಾವ್ ಸಾಳಂಕೆ, ಸಾಹಿತಿಗಳು

    ಜನಾರ್ಧನ್ ರಾವ್ ಸಾಳಂಕೆ, ಸಾಹಿತಿಗಳು

    ಆಕಸ್ಮಿಕವಾಗಿ 'ಖೈದಿ' ಚಿತ್ರಮಂದಿರಕ್ಕೆ ಹೋದಾಗ ಅಭಿಮಾನಿಗಳ ಈ ಸಡಗರ ಕಂಡು ಖುಷಿಯಾಯಿತು. ಕಲಾವಿದ ಇಲ್ಲದ ಹೊತ್ತಿನಲ್ಲಿ ಅಭಿಮಾನಿಗಳ ಈ ಸಡಗರ ಮನಸಿಗೆ ಮುದನೀಡಿತು. ಈ ಸಂಭ್ರಮವನ್ನು ಚಿರಸ್ಥಾಯಿಗೊಳಿಸಬೇಕೆಂದು ಭಾವಿಸಿ, ಪೋಟೋ ತೆಗೆದು ಲಿಮ್ಕಾ ಬುಕ್ ಆಪ್ ರೆಕಾರ್ಡ್ಸ್ ಗೆ ಕಳುಹಿಸಿಕೊಟ್ಟೆ. ದಾಖಲೆಯಾಗಿದ್ದು ತುಂಬಾ ಸಂತಸತಂದಿದೆ. ಸಮಸ್ತ ಅಭಿಮಾನಿಗಳಿಗೆ ಇದು ಅರ್ಪಣೆ.

    ಗೋವಿಂದ್ ಮತ್ತು ಸತೀಶ್, ಖೈದಿ ಚಿತ್ರದ ವಿತರಕರು

    ಗೋವಿಂದ್ ಮತ್ತು ಸತೀಶ್, ಖೈದಿ ಚಿತ್ರದ ವಿತರಕರು

    ನಾವು ಚಿತ್ರ ಬಿಡುಗಡೆಮಾಡಿದ ಸಂದರ್ಭ ಅಂತಹುದ್ದಾಗಿತ್ತು. ಡಾ.ವಿಷ್ಣು ಅಗಲಿ ಐದು ವರುಷಗಳಾದರೂ ಅವರ ಯಾವ ಚಿತ್ರಗಳೂ ಬಿಡುಗಡೆಯಾಗಿರಲಿಲ್ಲ. ಈ ಕಾರಣದಿಂದ ಅಭಿಮಾನಿಗಳು ಅಂದು ಹಬ್ಬ ಮಾಡಿದ್ದರು. ಆ ಹಬ್ಬ ಇಂದು ದಾಖಲೆಯಾಗಿದ್ದು ಸಂತೋಷ ತಂದಿದೆ.

    English summary
    Sahasa Simha late Dr.Vishnuvardhan's 'Khaidi' (1984) movie has entered the Limca Book of Records. The reason behind the development is that record number of garlands, which was made to Dr Vishnuvardhan's cutout in front of Triveni theatre. The different types of garlands made to cutout including ring garlanding is a very popular and costly, which has made Vishnuvardhan, the first Indian actor to receive the honour.
    Monday, February 9, 2015, 12:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X