twitter
    For Quick Alerts
    ALLOW NOTIFICATIONS  
    For Daily Alerts

    'ಯಜಮಾನ' ಚಿತ್ರಕ್ಕೆ 20 ವರ್ಷ: ಸಿನಿಮಾ ನೋಡಿ ಭಾವುಕರಾಗಿದ್ದ ಅಣ್ಣಾವ್ರು

    |

    ಡಾ ವಿಷ್ಣುವರ್ಧನ್ ನಟಿಸಿದ್ದ 'ಯಜಮಾನ' ಸಿನಿಮಾ ಬಿಡುಗಡೆಯಾಗಿ ಇಂದಿಗೆ 20 ವರ್ಷ ಕಳೆದಿದೆ. ಕನ್ನಡ ಚಿತ್ರರಂಗದಲ್ಲಿ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸಿದ್ದ ಈ ಸಿನಿಮಾ ಇಂದಿಗೂ ಸಾರ್ವಕಾಲಿಕ ಹಿಟ್ ಚಿತ್ರ. ತಮಿಳಿನ ರೀಮೇಕ್ ಆಗಿದ್ದರೂ ಮೂಲ ಭಾಷೆಗಿಂತ ಕನ್ನಡದಲ್ಲಿಯೇ ದೊಡ್ಡ ಹಿಟ್ ಆಗಿತ್ತು.

    20 ವರ್ಷಗಳ ಹಿಂದೆ ಅಂದ್ರೆ 2000ನೇ ಇಸವಿಯಲ್ಲಿ ಡಿಸೆಂಬರ್ 1 ರಂದು ಯಜಮಾನ ಸಿನಿಮಾ ತೆರೆಕಂಡಿತ್ತು. ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಂಡಿದ್ದ ಈ ಚಿತ್ರ ಅಂದಿನ ಸಮಯಕ್ಕೆ ಹೆಚ್ಚು ಕಾಲ ಪ್ರದರ್ಶನ ಕಂಡ ವಿಷ್ಣುವರ್ಧನ್ ಸಿನಿಮಾ ಆಗಿತ್ತು. ವಿಶೇಷ ಅಂದ್ರೆ ಯಜಮಾನ ಸಿನಿಮಾ ನೋಡಿ ಸ್ವತಃ ಅಣ್ಣಾವ್ರು ಭಾವುಕರಾಗಿದ್ದರು ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಮುಂದೆ ಓದಿ....

    20 ವರ್ಷದ ಹಿಂದೆ ವಿಷ್ಣುವರ್ಧನ್ ಮನೆಗೆ ಅಣ್ಣಾವ್ರು ಹೊರಟಿದ್ದಾಗ, ನಡೆದಿದ್ದೇನು! 20 ವರ್ಷದ ಹಿಂದೆ ವಿಷ್ಣುವರ್ಧನ್ ಮನೆಗೆ ಅಣ್ಣಾವ್ರು ಹೊರಟಿದ್ದಾಗ, ನಡೆದಿದ್ದೇನು!

    ಕನ್ನಡಕ್ಕೆ ವಿಷ್ಣು 'ಯಜಮಾನ'

    ಕನ್ನಡಕ್ಕೆ ವಿಷ್ಣು 'ಯಜಮಾನ'

    ತಮಿಳಿನಲ್ಲಿ ವಿಜಯ್‌ಕಾಂತ್ ನಟಿಸಿದ್ದ ವಾನತೈಪೊಲೆ ಸಿನಿಮಾ ರೀಮೇಕ್ ಇದು. ಕನ್ನಡದಲ್ಲಿ ಡಾ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದರು. ಶಶಿಕುಮಾರ್, ಅಭಿಜಿತ್ ವಿಷ್ಣು ತಮ್ಮಂದಿರಾಗಿ ಅಭಿನಯಿಸಿದರು. ಪ್ರೇಮಾ ನಾಯಕಿಯಾಗಿದ್ದರು. ರಾಧಾ ಭಾರತಿ ಮತ್ತು ಆರ್ ಶೇಷಾದ್ರಿ ಈ ಚಿತ್ರ ನಿರ್ದೇಶಿಸಿದ್ದರು. ಕೆ.ಮುಸ್ತಫಾ ಮತ್ತು ಮೆಹರುನ್ನೀಸಾ, ರೆಹಮಾನ್ ನಿರ್ಮಿಸಿದ್ದರು. ಡಿಸೆಂಬರ್ 1, 2000ರಲ್ಲಿ ಚಿತ್ರಮಂದಿರದಲ್ಲಿ ಸಿಂಹ ಘರ್ಜನೆ ಆರಂಭವಾಗಿತ್ತು.

    ಖಾಲಿ ಚೆಕ್ ನೀಡಿ ರೀಮೇಕ್ ಹಕ್ಕಿಗೆ ಪ್ರಯತ್ನಿಸಿದ್ದ ಎಚ್‌ಡಿಕೆ

    ಖಾಲಿ ಚೆಕ್ ನೀಡಿ ರೀಮೇಕ್ ಹಕ್ಕಿಗೆ ಪ್ರಯತ್ನಿಸಿದ್ದ ಎಚ್‌ಡಿಕೆ

    ಬೇರೆ ಸಿನಿಮಾದ ಕಾರಣಕ್ಕಾಗಿ ಚೆನ್ನೈಗೆ ಹೋಗಿದ್ದ ನಿರ್ಮಾಪಕ ರೆಹಮಾನ್ ಮತ್ತು ರವಿ ಶ್ರೀವತ್ಸ ವಿಜಯ್ ಕಾಂತ್ ಸಿನಿಮಾ ನೋಡಿ ಕನ್ನಡಕ್ಕೆ ಇದು ಸೂಟ್ ಆಗುತ್ತೆ ಎಂದು ನಿರ್ಧರಿಸಿ ರೀಮೇಕ್ ಹಕ್ಕು ಖರೀದಿಸಲು ಮುಂದಾದರು. ಖಾಲಿ ಚೆಕ್ ನೀಡಿದ ರೀಮೇಕ್ ಹಕ್ಕು ಕೊಡಿ ಎಂದು ರೆಹಮಾನ್ ಕೇಳಿದ್ದರು. ಎರಡು ವಾರಗಳ ಬಳಿಕ ರೈಟ್ಸ್ ಕೊಟ್ಟರು. ಅಷ್ಟೋತ್ತಿಗಾಲೇ ಹಲವು ನಿರ್ಮಾಪಕರು ಈ ಚಿತ್ರ ರೀಮೇಕ್‌ ಹಕ್ಕಿಗಾಗಿ ಚೆನ್ನೈಗೆ ಬಂದಿದ್ದರು. ಎಚ್ ಡಿ ಕುಮಾರಸ್ವಾಮಿ ಖಾಲಿ ಚೆಕ್ ನೀಡಿ ಹಕ್ಕು ಖರೀದಿಸಲು ಪ್ರಯತ್ನಿಸಿದ್ದರಂತೆ.

    ಅಣ್ಣಾವ್ರು ಕಿಡ್ನಾಪ್ ಆಗಿತ್ತು

    ಅಣ್ಣಾವ್ರು ಕಿಡ್ನಾಪ್ ಆಗಿತ್ತು

    ಯಜಮಾನ ಸಿನಿಮಾದ ಚಿತ್ರೀಕರಣ ನಡೆಯುವ ವೇಳೆ ಡಾ ರಾಜ್ ಕುಮಾರ್ ಕಿಡ್ನಾಪ್ ಆಯಿತು. ಆಗ ನೇಪಾಳದಲ್ಲಿ ಹಾಡಿನ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡ ಸುದ್ದಿ ಕೇಳಿ ವಾಪಸ್ ಬಂದಿದೆ. ನಂತರ ಕೆಲವು ತಿಂಗಳ ಬಳಿಕ ಚಿತ್ರದ ಕ್ಲೈಮ್ಯಾಕ್ಸ್‌ಗಾಗಿ ಚೆನ್ನೈಗೆ ತೆರಳಿದ್ದರಂತೆ. ಆಗ ರಾಜ್ ಬಿಡುಗಡೆಯ ಸುದ್ದಿ ಬಂದಿತ್ತಂತೆ.

    ಸಿನಿಮಾ ನೋಡಿ ಭಾವುಕರಾಗಿದ್ದ ರಾಜ್

    ಸಿನಿಮಾ ನೋಡಿ ಭಾವುಕರಾಗಿದ್ದ ರಾಜ್

    ಯಜಮಾನ ಸಿನಿಮಾ ಬಿಡುಗಡೆಯಾದಾಗ ಅಣ್ಣಾವ್ರಿಗೆ ಸಿನಿಮಾ ತೋರಿಸಲಾಗಿದೆ. ಬಾದಾಮಿ ಹೌಸ್‌ನಲ್ಲಿ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ರಾಜ್ ಕುಟುಂಬ ಭಾಗಿಯಾಗಿತ್ತಂತೆ. ಸಿನಿಮಾ ನೋಡಿ ಮೆಚ್ಚಿಕೊಂಡ ಅಣ್ಣಾವ್ರು ಅಣ್ಣ ತಮ್ಮಂದಿರ ಕಥೆ ನೋಡಿ ಭಾವುಕರಾದಂತೆ. ಬಳಿಕ, ವಿಷ್ಣುವರ್ಧನ್ ಮನೆಗೆ ಹೋಗೋಣ, ಎಷ್ಟು ಚೆನ್ನಾಗಿ ನಟಿಸಿದ್ದಾರೆ, ಅವರಿಗೆ ಶುಭಾಶಯ ತಿಳಿಸಬೇಕು ಎಂದರಂತೆ. ಆದರೆ, ಆ ಸಮಯದಲ್ಲಿ ವಿಷ್ಣುವರ್ಧನ್ ಶ್ರೀರಂಗಪಟ್ಟಣದಲ್ಲಿದ್ದ ಕಾರಣ ಫೋನ್‌ನಲ್ಲಿ ಮಾತನಾಡಿದರು ಎಂದು ನಿರ್ಮಾಪಕ ಹೇಳಿದ್ದಾರೆ.

    English summary
    Kannada legend actor dr Vishnuvardhan starrer Yajamana movie completed 20 years. the movie has released on 2000 december 1.
    Tuesday, December 1, 2020, 15:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X