For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಮೂರು ತಾರೆಗಳಿಗಿಂದು ಜನುಮದಿನದ ಸಂಭ್ರಮ

  By Bharath Kumar
  |
  These 3 Sandalwood stars are celebrating their Birthday today | Filmibeat Kannada

  ಸ್ಯಾಂಡಲ್ ವುಡ್ ಪಾಲಿಗೆ 'ಸೆಪ್ಟಂಬರ್ 18' ಶುಭ ದಿನ. ಇನ್ನು ಅಭಿಮಾನಿಗಳ ಪಾಲಿಗಂತೂ ಇದು ಮರೆಯಲಾಗದ ದಿನ. ಯಾಕಂದ್ರೆ, ಇಂದು ಚಂದನವನದ ಮೂವರು ತಾರೆಯರಿಗೆ ಹುಟ್ಟುಹಬ್ಬ ಸಂಭ್ರಮ. ಹೀಗಾಗಿ, ಇಡೀ ದಿನ ಪೂರ್ತಿ ಕನ್ನಡ ಚಿತ್ರರಂಗ ಒಂದು ರೀತಿಯಲ್ಲಿ ಹಬ್ಬದ ವಾತವರಣದಿಂದ ಕೂಡಿರುತ್ತೆ.

  ಅಭಿಮಾನಿಗಳಂತೂ ತಮ್ಮ ನೆಚ್ಚಿನ ತಾರೆಗಳ ಮನೆ ಬಳಿ ಹೋಗಿ, ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಶುಭ ಕೋರುವ ಮೂಲಕ ಆಚರಿಸುತ್ತಾರೆ. ಮತ್ತೊಂದೆಡೆ ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನ ಕೂಡ ಅಯೋಜಿಸಿ ಅಭಿಮಾನ ಮೆರೆಯುತ್ತಾರೆ.

  ಹಾಗಿದ್ರೆ, 'ಸೆಪ್ಟಂಬರ್ 18' ರಂದು ಯಾವ ತಾರೆಯ ಹುಟ್ಟುಹಬ್ಬ, ಈ ದಿನದ ವಿಶೇಷವೇನು ಎಂದು ತಿಳಿದುಕೊಳ್ಳಲು ಮುಂದೆ ಓದಿ....

  ಉಪೇಂದ್ರಗೆ ಹಾಫ್ ಸೆಂಚುರಿ

  ಉಪೇಂದ್ರಗೆ ಹಾಫ್ ಸೆಂಚುರಿ

  ರಿಯಲ್ ಸ್ಟಾರ್ ಉಪೇಂದ್ರ ಅವರು 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಉಪ್ಪಿಗೆ ಈ ಬರ್ತ್ ಡೇ ತುಂಬ ವಿಶೇಷ. ಯಾಕಂದ್ರೆ, 50ನೇ ವರ್ಷದ ಹುಟ್ಟುಹಬ್ಬ ಒಂದು ಕಡೆಯಾದ್ರೆ, ಇಷ್ಟು ದಿನ ಸಿನಿಮಾದಲ್ಲಿ ಮಾತ್ರ ತೊಡಗಿಕೊಂಡಿದ್ದ ಉಪ್ಪಿ, ರಾಜಕೀಯದಲ್ಲಿ ಕಾರ್ಯನಿರತರಾಗಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.

  ಪ್ರೀತಿಯ ಪತಿ ಉಪೇಂದ್ರಗೆ ಪ್ರಿಯಾಂಕಾ ಉಪೇಂದ್ರ ವಿಶ್ ಮಾಡಿದ್ದು ಹೀಗೆಪ್ರೀತಿಯ ಪತಿ ಉಪೇಂದ್ರಗೆ ಪ್ರಿಯಾಂಕಾ ಉಪೇಂದ್ರ ವಿಶ್ ಮಾಡಿದ್ದು ಹೀಗೆ

  ಉಪ್ಪಿ ಹೆಸರಿನಲ್ಲಿ ಪುಸ್ತಕ

  ಉಪ್ಪಿ ಹೆಸರಿನಲ್ಲಿ ಪುಸ್ತಕ

  ಉಪ್ಪಿ ಬರ್ತ್ ಡೇ ವಿಶೇಷವಾಗಿ 'ನಮ್ಮ ಉಪ್ಪಿ, ಹತ್ತಿರದವರು ಕಂಡಂತೆ' ಎಂಬ ಪುಸ್ತಕ ಸಿದ್ದವಾಗಿದೆ. ಈ ಪುಸ್ತಕವನ್ನು ಉಪೇಂದ್ರ ಅವರ ಆಪ್ತರೇ ಬರೆದಿದ್ದಾರೆ. ಉಪೇಂದ್ರ ತಂದೆ, ತಾಯಿ, ಅಣ್ಣನಿಂದ ಹಿಡಿದು ಅವರ ಆಪ್ತ ವಲಯ ಅವರು ಕಂಡಂತೆ ಉಪೇಂದ್ರ ಹೇಗಿದ್ದರು ಎಂದು ಪುಸ್ತಕದಲ್ಲಿ ಬರೆದಿದ್ದಾರೆ. ಉಪೇಂದ್ರ ಅವರ ಬಾಲ್ಯ ಮತ್ತು ಅವರ ವೈಯಕ್ತಿಕ ಜೀವನದ ಅನೇಕ ಪ್ರಮುಖ ವಿಷಯಗಳು ಈ ಪುಸ್ತಕದಲ್ಲಿ ಇದೆ ಅಂತೆ.

  ರಿಯಲ್ ಸ್ಟಾರ್ ಉಪೇಂದ್ರ ಈ ವರ್ಷದ ಹುಟ್ಟುಹಬ್ಬಕ್ಕೆ ಬರಲಿದೆ ಒಂದು ವಿಶೇಷ ಪುಸ್ತಕ ರಿಯಲ್ ಸ್ಟಾರ್ ಉಪೇಂದ್ರ ಈ ವರ್ಷದ ಹುಟ್ಟುಹಬ್ಬಕ್ಕೆ ಬರಲಿದೆ ಒಂದು ವಿಶೇಷ ಪುಸ್ತಕ

  'ಸಾಹಸ ಸಿಂಹ'ನ ಸಂಭ್ರಮ

  'ಸಾಹಸ ಸಿಂಹ'ನ ಸಂಭ್ರಮ

  ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರಿಗಿಂದು 67ನೆ ಹುಟ್ಟುಹಬ್ಬ. ಭೌತಿಕವಾಗಿ 'ದಾದ' ಇಲ್ಲವಾದರೂ, ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಇಂದಿಗೂ ಯಜಮಾನನಾಗಿ ನೆಲೆಸಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸಮಾಧಿಗೆ ಪೂಜೆ ನಡೆಯುತ್ತೆ. ದಾದಾ ಹೆಸರಿನಲ್ಲಿ ಅನ್ನದಾನ, ರಕ್ತದಾನ, ಉಚಿತ ಆರೋಗ್ಯ ತಪಾಸಣೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ನಡೆಸಲಾಗುತ್ತೆ.

  'ರಾಜಸಿಂಹ' ಟೀಸರ್ ಬಿಡುಗಡೆ

  'ರಾಜಸಿಂಹ' ಟೀಸರ್ ಬಿಡುಗಡೆ

  ಇನ್ನು ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ವಿಶೇಷವಾಗಿ ನಟ ಅನಿರುದ್ಧ್ ಅಭಿನಯದ 'ರಾಜಸಿಂಹ' ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ನಿಖಿತಾ ತುಕ್ರಾಲ್, ಸಂಜನಾ, ಮತ್ತು ಭಾರತಿ ವಿಷ್ಣುವರ್ಧನ್ ಕೂಡ ಅಭಿನಯಿಸಿದ್ದಾರೆ.

  ಶ್ರುತಿ ಸಂಭ್ರಮ

  ಶ್ರುತಿ ಸಂಭ್ರಮ

  ಈ ಇಬ್ಬರು ಸ್ಟಾರ್ ನಟರ ಜೊತೆ ಕನ್ನಡದ ಖ್ಯಾತ ನಟಿ ಶ್ರುತಿ ಅವರಿಗೂ ಜನುಮದಿನದ ಸಂಭ್ರಮ. 42ನೇ ವರ್ಷಕ್ಕೆ ಕಾಲಿಡುತ್ತಿರುವ ಶ್ರುತಿ ಅವರು ಇಂದು ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ, ಶೂಟಿಂಗ್ ಸೆಟ್ ನಲ್ಲೇ ಶ್ರುತಿ ತಮ್ಮ ಬರ್ತ್ ಡೇ ಆಚರಣೆ ಮಾಡಿಕೊಳ್ಳಲಿದ್ದಾರೆ.

  English summary
  Upendra and Actress shruthi celebrating their birthdays today (September 18th), And same day legend Actor dr vishnuvardhan fans are celebrating 'Vishnu Dada's 67th birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X