For Quick Alerts
  ALLOW NOTIFICATIONS  
  For Daily Alerts

  ಹೊಸ ರೂಪದಲ್ಲಿ 'ನಾಗರಹಾವು': ಟೀಸರ್ ರಿಲೀಸ್ ಮಾಡಲಿದ್ದಾರೆ 'ಸ್ಟಾರ್'.!

  By Bharath Kumar
  |
  ಮತ್ತೆ ಸಿಲ್ವರ್ ಸ್ಕ್ರೀನ್ ಮೇಲೆ ವಿಷ್ಣು ದಾದಾರನ್ನು ಕಣ್ತುಂಬಿಕೊಳ್ಳಬಹುದು..!! | Filmibeat Kannada

  ಎವರ್ ಗ್ರೀನ್ ಸಿನಿಮಾಗಳು ಹೊಸ ರೂಪ ಪಡೆದು ಬಿಡುಗಡೆಯಾಗುವುದು ಸಾಮಾನ್ಯ. ಈಗ ಸಾಹಸಸಿಂಹ ಡಾ ವಿಷ್ಣುವರ್ಧನ್ ನಾಯಕನಾಗಿ ಅಭಿನಯಿಸಿದ್ದ ಮೊದಲ ಸಿನಿಮಾ 'ನಾಗರಹಾವು' ಮತ್ತೆ ತೆರೆಕಾಣುತ್ತಿದೆ.

  1973ರಲ್ಲಿ ರಿಲೀಸ್ ಆಗಿದ್ದ ಈ ಸೂಪರ್ ಹಿಟ್ ಸಿನಿಮಾ ಡಿಜಿಟಲ್ ವರ್ಷನ್ ನಲ್ಲಿ ರೀ-ರಿಲೀಸ್ ಆಗುತ್ತಿದೆ. 30 ಎಂಎಂ ನಲ್ಲಿದ್ದ ಚಿತ್ರವೀಗ ಸಿನಿಮಾ ಸ್ಕೋಪ್ ಮತ್ತು 7.1 ಡಿಟಿಎಸ್ ಸೌಂಡ್‌ ಎಫೆಕ್ಟ್ನಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗುತ್ತಿದೆ.

  ದಶಕಗಳ ಹಿಂದೆ ವಿಜಯನಾರಸಿಂಹ ನಡೆಸಿದ ಡಾ.ವಿಷ್ಣುರ ಅಪರೂಪದ ಸಂದರ್ಶನ ಇಲ್ಲಿದೆದಶಕಗಳ ಹಿಂದೆ ವಿಜಯನಾರಸಿಂಹ ನಡೆಸಿದ ಡಾ.ವಿಷ್ಣುರ ಅಪರೂಪದ ಸಂದರ್ಶನ ಇಲ್ಲಿದೆ

  22ನೇ ತಾರೀಖು ಶುಕ್ರವಾರ ಹೊಸ ನಾಗರಹಾವು ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು, ಕನ್ನಡದ ದೊಡ್ಡ ನಟರೊಬ್ಬರು ಬಿಡುಗಡೆಮಾಡಲಿದ್ದಾರೆ. ಆದ್ರೆ, ಅವರು ಯಾರು ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ.

  ಕ್ರೇಜಿಸ್ಟಾರ್ ರವಿಚಂದ್ರನ್‌ ಅವರ ಸಹೋದರ ಬಾಲಾಜಿ ಈ ಚಿತ್ರಕ್ಕೆ ಹೊಸದಾಗಿ ಕಲರಿಂಗ್ ಮಾಡಿಸಿದ್ದು, ಇಡೀ ಚಿತ್ರಕ್ಕೆ ಇಂದಿನ ತಂತ್ರಜ್ಞಾನವನ್ನೇ ಬಳಸಿಕೊಂಡು ಹೊಸದಾಗಿ ರೀ ರೆಕಾರ್ಡಿಂಗ್‌ ಮಾಡಲಾಗಿದೆ. ಮುಂಬೈ, ಚೆನ್ನೈ, ಬೆಂಗಳೂರಿನ ಅತ್ಯುತ್ತಮ ತಂತ್ರಜ್ಞರು ಕೆಲಸ ಮಾಡಿದ್ದಾರೆ ಸುಮಾರು 2 ವರ್ಷ ಸಮಯ ತೆಗೆದುಕೊಂಡಿದ್ದಾರಂತೆ.

  'ಅಭಿಮಾನ'ದಿಂದ ಬರುತ್ತಿದ್ದ ಪತ್ರಗಳಿಗೆ ವಿಷ್ಣುದಾದಾ ಕೊಡುತ್ತಿದ್ದ ಗೌರವ ನೋಡಿ'ಅಭಿಮಾನ'ದಿಂದ ಬರುತ್ತಿದ್ದ ಪತ್ರಗಳಿಗೆ ವಿಷ್ಣುದಾದಾ ಕೊಡುತ್ತಿದ್ದ ಗೌರವ ನೋಡಿ

  ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದ ಈ ಚಿತ್ರವನ್ನ ರವಿಚಂದ್ರನ್ ಅವರ ತಂದೆ ವೀರಸ್ವಾಮಿ ಅವರು ನಿರ್ಮಾಣ ಮಾಡಿದ್ದರು. ಹೀಗಾಗಿ, ಪುಟ್ಟಣ್ಣ ಕಣಗಲ್, ವೀರಸ್ವಾಮಿ, ವಿಷ್ಣುವರ್ಧನ್, ಅಶ್ವತ್ಥ್ ಅವರಿಗೆ ನಮನ ಸಲ್ಲಿಸಲು ಇದನ್ನ ಮಾಡಿದ್ದಾರೆ. 1973ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ವಿಷ್ಣುವರ್ಧನ್, ಆರತಿ, ಲೀಲಾವತಿ, ಅಂಬರೀಶ್‌, ಶಿವರಾಂ ಸೇರಿದಂತೆ ಹವಲರು ಅಭಿನಯಿಸಿದ್ದರು. ಕನ್ನಡ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿತ್ತು.

  English summary
  Dr Vishnuvardhan's first movie nagarahaavu is all set to be re-released. the movie directed by puttanna kanagal and produced by veeraswamy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X