For Quick Alerts
  ALLOW NOTIFICATIONS  
  For Daily Alerts

  ಕಾವೇರಿ ಚಳವಳಿಗೆ ಧುಮುಕಿದ ವಿಷ್ಣು ಅಭಿಮಾನಿಗಳು

  By Rajendra
  |

  ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳು ಗುರುವಾರ (ಅ.4) ಕಾವೇರಿ ಚಳವಳಿಗೆ ಧುಮುಕಿ ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಪ್ರತಿಭಟಿಸಿದರು. ಬೆಂಗಳೂರು ರೇಸ್ ಕೋರ್ಸ್ ರಸ್ತೆಯ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

  ಡಾ.ವಿಷ್ಣುವರ್ಧನ್ ಸೇನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಈ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲೂ (ಫ್ರೀಡಂ ಪಾರ್ಕ್) ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಯಿತು.

  ರಕ್ತ ಕೊಟ್ಟೇವು ಹೊರತು ನೀರು ಬಿಡೆವು, ಕಾವೇರಿ ಕರ್ನಾಟಕಕ್ಕೆ ಮಾತ್ರ ಎಂಬ ಘೋಷಣೆಗಳು ವಿಷ್ಣು ಅಭಿಮಾನಿಗಳಿಂದ ಹೊರಹೊಮ್ಮಿದವು. ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಕಾವೇರಿ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ಘೋಷಣೆಗಳು ಮೊಳಗಿದವು.

  ಅಕ್ಟೋಬರ್ 6ರ ಕರ್ನಾಟಕ ಬಂದ್ ಗೂ ವಿಷ್ಣು ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 6ರಂದು ಚಿತ್ರ ಪ್ರದರ್ಶನ, ಚಿತ್ರೀಕರಣ ಸೇರಿದಂತೆ ಕನ್ನಡ ಚಿತ್ರೋದ್ಯಮದ ಸಂಪೂರ್ಣ ವ್ಯವಹಾರಗಳು ಬಂದ್ ಆಗಲಿವೆ. ಈ ಮೂಲಕ ಕನ್ನಡ ಚಿತ್ರೋದ್ಯಮ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲಿರುವುದು ಗೊತ್ತೇ ಇದೆ. (ಒನ್ಇಂಡಿಯಾ ಕನ್ನಡ)

  English summary
  Dr Visnuvardhan Sena Samithi strongly protested against releasing of Cauvery water to Tamil Nadu on 4th October in Bangalore. The protest rally starts at 10 am at Anand Rao Circle, Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X