»   » 'ದಿ ವಿಲನ್' ಸಿನಿಮಾದಲ್ಲಿ 'ಡ್ರಾಮಾ ಜೂನಿಯರ್ಸ್' ಅಚಿಂತ್ಯ

'ದಿ ವಿಲನ್' ಸಿನಿಮಾದಲ್ಲಿ 'ಡ್ರಾಮಾ ಜೂನಿಯರ್ಸ್' ಅಚಿಂತ್ಯ

Posted By:
Subscribe to Filmibeat Kannada

ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ನಟನೆಯ 'ದಿ ವಿಲನ್' ಸಿನಿಮಾ ಕನ್ನಡದ ಬಹುನಿರೀಕ್ಷಿತ ಸಿನಿಮಾವಾಗಿದೆ. ದೊಡ್ಡ ತಾರ ಬಳಗ ಹೊಂದಿರುವ 'ದಿ ವಿಲನ್' ಸಿನಿಮಾದಲ್ಲಿ ದೊಡ್ಡ ದೊಡ್ಡ ನಟ ನಟಿಯರು ಅಭಿನಯಿಸಿದ್ದಾರೆ. ಅವರ ಜೊತೆಗೆ ಈಗ ಮತ್ತೊಬ್ಬ ಪುಟ್ಟ ಕಲಾವಿದ ಸಿನಿಮಾದಲ್ಲಿ ನಟಿಸುತ್ತಿದ್ದಾನೆ.

ಜೀ ಕನ್ನಡ ವಾಹಿನಿಯ 'ಡ್ರಾಮಾ ಜೂನಿಯರ್ಸ್' ಸೀಸನ್ 1 ಕಾರ್ಯಕ್ರಮದ ಮೂಲಕ ಫೇಮಸ್ ಆಗಿದ್ದ ಅಚಿಂತ್ಯ ಈಗ ಸಿನಿಮಾದಲ್ಲಿ ನಟಿಸುತ್ತಿದ್ದಾನೆ. ಅದು ಕೂಡ ಶಿವಣ್ಣ ಮತ್ತು ಸುದೀಪ್ ಕಾಂಬಿನೇಶನ್ ನಲ್ಲಿ ಬರುತ್ತಿರುವ 'ದಿ ವಿಲನ್' ಸಿನಿಮಾದಲ್ಲಿ ಎನ್ನುವುದು ವಿಶೇಷ. ಈ ಸಿನಿಮಾದ ಒಂದು ಸಣ್ಣ ಪಾತ್ರದಲ್ಲಿ ಅಚಿಂತ್ಯ ನಟಿಸಿದ್ದಾನೆ. ನಟ ಶರತ್ ಲೋಹಿತಾಶ್ವ ಅವರ ಮಗನ ಪಾತ್ರವನ್ನು ಅಚಿಂತ್ಯ ಮಾಡಿದ್ದಾನೆ. ಶರತ್ ಲೋಹಿತಾಶ್ವ ಮತ್ತು ಅಚಿಂತ್ಯ ಅವರ ಭಾಗದ ಚಿತ್ರೀಕರಣ ಇಂದು ಕನಕಪುರದಲ್ಲಿ ನಡೆಯುತ್ತಿದೆ.

Drama Juniors fame Achintya played a small role in The Villain kannada movie

ಅಂದಹಾಗೆ, 'ದಿ ವಿಲನ್' ಪ್ರೇಮ್ ನಿರ್ದೇಶನದ ಸಿನಿಮಾವಾಗಿದೆ. ಚಿತ್ರದ ಕೊನೆಯ ಹಂತದ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಸಿ.ಆರ್.ಮನೋಹರ್ ಸಿನಿಮಾಗೆ ಭಂಡವಾಳ ಹಾಕಿದ್ದಾರೆ. ಮೊದಲ ಬಾರಿಗೆ ಶಿವರಾಜ್ ಕುಮಾರ್ ಮತ್ತು ಸುದೀಪ್ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಆಮಿ ಜಾಕ್ಸನ್ ಸಿನಿಮಾದ ನಾಯಕಿ ಆಗಿದ್ದಾರೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅಭಿಮಾನಿಗಳು ಈಗ 'ದಿ ವಿಲನ್' ಸಿನಿಮಾದ ಟೀಸರ್ ನೋಡಲು ಕಾಯುತ್ತಿದ್ದಾರೆ.

English summary
Zee Kannada channel Drama Juniors fame Achintya played a small role in Kannada Movie 'The Villain'. Sudeep and Shivarajkumar starrer 'The Villain' movie is directed by Prem.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X