»   » ಡ್ರಾಮಾ ಚಿತ್ರದಲ್ಲಿ ಧಾರ್ಮಿಕ ನಿಂದನೆ ಸರೀನಾ ಭಟ್ರೇ?

ಡ್ರಾಮಾ ಚಿತ್ರದಲ್ಲಿ ಧಾರ್ಮಿಕ ನಿಂದನೆ ಸರೀನಾ ಭಟ್ರೇ?

Posted By: * ರಾಜೇಶ್ ಕಾಮತ್
Subscribe to Filmibeat Kannada
Readers Question to Yogaraj Bhat Drama movie
ಡ್ರಾಮಾ ಚಿತ್ರವನ್ನು ಕುಟುಂಬ ಸಮೇತ ಚಾಮರಾಜಪೇಟೆಯಲ್ಲಿರುವ ಉಮಾ ಚಿತ್ರಮಂದಿರದಲ್ಲಿ ನೋಡಿದೆ. ಒಂದು ಒಳ್ಳೆಯ ಸದಭಿರುಚಿಯ ಚಿತ್ರವೆನ್ನಲಾಗದಿದ್ದರೂ ಕೊಟ್ಟ ದುಡ್ಡಿಗೆ ಮೋಸವಿಲ್ಲದ ಟೈಮ್ ಪಾಸ್ ಚಿತ್ರ ಅನ್ನೋದರಲ್ಲಿ ಎರಡು ಮಾತಿಲ್ಲ.

ಚಿತ್ರದಲ್ಲಿ ಬರುವ ಒಂದು ಸನ್ನಿವೇಶ. ಆತ ಫುಲ್ ಟೈಟ್ ಆಗಿರುತ್ತಾನೆ. ತನ್ನ ಕಾಲೇಜು ಪ್ರಿನ್ಸಿಪಾಲರ ತಲೆ ಬೋಳಿಸಲು ರೆಡಿಯಾಗಿ ಬಂದಿರುತ್ತಾನೆ. ಆಗ ಇನ್ನೇನು ತಲೆಗೆ ಮಿಷಿನ್ ಆಡಿಸಬೇಕು ಎನ್ನುವ ಹೊತ್ತಿಗೆ..
"ಇನ್ ಮುಂದೆ ತಿರುಪತಿಗೆ ಹೋಗೋ ಬದಲು ನನ್ ಹತ್ರಾನೇ ಬರ್ಬೇಕು. ಹಾಗ್ ಬೋಳಸ್ತೀನಿ ನೋಡು ಸತೀಸಾ.." ಹೀಗೊಂದು ಡೈಲಾಗ್ ಹೇಳುತ್ತಾನೆ ನಾಯಕ ಯಶ್.

ವಾಟ್ ನಾನ್ ಸೆನ್ಸ್ ದಿಸ್ ಈಸ್ ಭಟ್ರೇ. ದೇವರಲ್ಲಿ ನಮಗೂ ನಂಬಿಕೆಯಿದೆ ನಿಮಗೂ ನಂಬಿಕೆಯಿದೆ.

* ಚಿತ್ರದಲ್ಲಿ ಬರುವ ಈ ಡೈಲಾಗು ಎಷ್ಟರ ಮಟ್ಟಿಗೆ ಸರಿ?
* ಚಿತ್ರದಲ್ಲಿನ ಈ ಸನ್ನಿವೇಶಕ್ಕೆ ಇಂಥಹ ಸಂಭಾಷಣೆ ಬಳಸಿದ್ದು ಸರೀನಾ ಅಥವಾ ಅಂಥದೊಂದು ಡೈಲಾಗ್ ಬೇಕಿತ್ತಾ?
* ಇದನ್ನು ನಾವು ದೇವರ ಹಾಗೂ ಧಾರ್ಮಿಕ ನಿಂದನೆ ಎನ್ನಬಹುದಾ?
* ಸೆನ್ಸಾರ್ ಮಂಡಳಿ ಇದನ್ನು ಹೇಗೆ ಓಕೆ ಮಾಡಿತು?
* ಸಾಮಾಜಿಕ ಕಳಕಳಿ ಇರುವ ನೀವು ತಿರುಪತಿ ದೇವರಿಗೆ ಮುಡಿ ಕೊಡುವ ಶಾಸ್ತ್ರವನ್ನು ಅಲ್ಲಗಳೆದದ್ದಾದರೂ ಏಕೆ?

ತಮಾಷೆ ಮತ್ತು ವ್ಯಂಗ್ಯದ ಹೆಸರಲ್ಲಿ ದೇವರಿಗೆ ಸಂಬಂಧಿಸಿದ ತಮಾಷೆ ಮಾಡುವುದು ಎಷ್ಟೆಂದರೂ ಸರಿಯಲ್ಲ. ಭಟ್ಟರಿಗೆ ಈ ಮಾತು ಕೇಳುತ್ತಿದೆ ಎಂದುಕೊಳ್ಳುತ್ತೇವೆ.

ಡ್ರಾಮಾ ಚಿತ್ರ ವಿಮರ್ಶೆ.

English summary
Oneindia Kannada reader Rajesh Kamath question to Director Yogaraj Bhat on his latest movie 'Drama'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada