twitter
    For Quick Alerts
    ALLOW NOTIFICATIONS  
    For Daily Alerts

    ರಂಗಮಂದಿರ ಬುಕಿಂಗ್ ಆರಂಭ: ಗರಿಗೆದರಿಲಿವೆ ರಂಗಚಟುವಟಿಕೆ

    |

    ಕೊರೊನಾ ಅಲ್‌ಲಾಕ್ ನಂತರ ಚಿತ್ರಮಂದಿರಗಳು ಅಕ್ಟೋಬರ್ 16 ರಿಂದ ಕಾರ್ಯನಿರ್ವಹಿಸುತ್ತಿವೆ, ಆದರೆ ರಾಜ್ಯದ ರಂಗಮಂದಿರಗಳಿಗೆ ಈ ಭಾಗ್ಯ ಇರಲಿಲ್ಲ. ಆದರೆ ಈಗ ರಾಜ್ಯಸರ್ಕಾರವು ರಂಗಮಂದಿರಗಳನ್ನು ತೆರೆಯಲು ನಿರ್ಧರಿಸಿದೆ.

    ಹೌದು, ಕನ್ನಡ ಸಂಸ್ಕೃತಿ ಇಲಾಖೆಯು ರಂಗಮಂದಿರಗಳ ಆನ್‌ಲೈನ್ ಬುಕಿಂಗ್ ಅನ್ನು ಆರಂಭಿಸಿದ್ದು, ಅಕ್ಟೋಬರ್ 28 ರಿಂದಲೇ ರಂಗಮಂದಿರಗಳನ್ನು ಬುಕ್ ಮಾಡಬಹುದಾದ ಸೌಲಭ್ಯವನ್ನು ಪ್ರಾರಂಭಿಸಿದೆ. ಆ ಮೂಲಕ ಕಳೆದ ಆರು ತಿಂಗಳಿನಿಂದ ಬಂದ್ ಆಗಿದ್ದ ರಂಗಚಟುವಟಿಕೆಗಳು ಪುನರರಾರಂಭಗೊಳ್ಳಲು ಉತ್ತೇಜನ ನೀಡಿದೆ.

    ರಾಷ್ಟ್ರೀಯ ನಾಟಕ ಶಾಲೆಯ ನೂತನ ಅಧ್ಯಕ್ಷರಾಗಿ ಪರೇಶ್ ರಾವಲ್ ಆಯ್ಕೆರಾಷ್ಟ್ರೀಯ ನಾಟಕ ಶಾಲೆಯ ನೂತನ ಅಧ್ಯಕ್ಷರಾಗಿ ಪರೇಶ್ ರಾವಲ್ ಆಯ್ಕೆ

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿರುವ ರವೀಂದ್ರ ಕಲಾಕ್ಷೇತ್ರ, ನಯನ ಸಭಾಂಗಣ ಸೇರಿದಂತೆ 16 ರಂಗಮಂದಿರಗಳು ಬುಕಿಂಗ್‌ಗೆ ಲಭ್ಯವಿವೆ. ತಂಡಗಳು ಸಭಾಂಗಣಗಳನ್ನು ಬುಕ್ ಮಾಡಿಕೊಂಡು ಸಾಂಸ್ಕೃತಿಕ ಚಟುವಟಿಕೆ ಪ್ರಾರಂಭಿಸಬಹುದಾಗಿದೆ.

    ಮಾರ್ಗಸೂಚಿ ರಚಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

    ಮಾರ್ಗಸೂಚಿ ರಚಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

    ರಂಗಚಟುವಟಿಕೆ ಪುನರಾರಂಭಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಿದ್ದು, ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿದೆ. ಅನುಮೋದನೆಯ ನಂತರ ಅದನ್ನು ಜಾರಿಗೆ ತರಲಾಗುತ್ತದೆ.

    50% ಪ್ರೇಕ್ಷಕರಿಗೆ ಮಾತ್ರವೇ ಅವಕಾಶ

    50% ಪ್ರೇಕ್ಷಕರಿಗೆ ಮಾತ್ರವೇ ಅವಕಾಶ

    ಮೂಲಗಳ ಪ್ರಕಾರ, ಚಿತ್ರಮಂದಿರಗಳಿಗೆ ವಿಧಿಸಿದಂತೆಯೇ ಒಟ್ಟು ಆಸನ ವ್ಯವಸ್ಥೆಯ 50% ಪ್ರೇಕ್ಷಕರಿಗೆ ಮಾತ್ರ ಅವಕಾಶ, ಕಲಾ ತಂಡಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ, ಸಭಾಂಗಣದಲ್ಲಿ ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಇನ್ನಿತರೆ ನಿಯಮಗಳನ್ನು ಮಾರ್ಗಸೂಚಿ ಒಳಗೊಂಡಿರಲಿದೆ.

    ಆಧುನಿಕ ರಂಗಭೂಮಿ ಹರಿಕಾರ ಇಬ್ರಾಹಿಂ ಅಲ್ಕಜಿ ನಿಧನ: ಮೋದಿ ಸಂತಾಪಆಧುನಿಕ ರಂಗಭೂಮಿ ಹರಿಕಾರ ಇಬ್ರಾಹಿಂ ಅಲ್ಕಜಿ ನಿಧನ: ಮೋದಿ ಸಂತಾಪ

    ಸೇವಾ ಸಧನ ಆಪ್ ಮೂಲಕ ಬುಕ್ ಮಾಡಬಹುದು

    ಸೇವಾ ಸಧನ ಆಪ್ ಮೂಲಕ ಬುಕ್ ಮಾಡಬಹುದು

    ಇನ್ನು ಮುಂದೆ ಸೇವಾ ಸಧನ ಆಪ್ ಮೂಲಕ ರಂಗಮಂದಿರಗಳು, ಸಭಾಂಗಣಗಳನ್ನು ಬುಕ್ ಮಾಡುವ ಸೌಲಭ್ಯ ಲಭ್ಯವಾಗಲಿದೆ. ಕೆಲವರು ಹಲವಾರು ದಿನಗಳಿಗೆ ರಂಗಮಂದಿರಗಳನ್ನು ಬುಕ್ ಮಾಡಿಕೊಳ್ಳುತ್ತಿದ್ದರು. ಆದರೆ ಆನ್‌ಲೈನ್ ಬುಕಿಂಗ್‌ನಿಂದ ಎಲ್ಲರಿಗೂ ಸಮಾನ ಅವಕಾಶ ದೊರೆಯುವ ನಿರೀಕ್ಷೆ ಇದೆ.

    Recommended Video

    ಪ್ರಪಂಚ ಬೇರೇನೆ ಇದೆ ಅಂತ ತೋರಿಸಿಕೊಟ್ಟಿದ್ದು ವಿಜಯ್ ದೇವರಕೊಂಡ | Filmibeat Kannada
    ಖಾಸಗಿ ಸಭಾಂಗಣಗಳು ಸದ್ಯಕ್ಕೆ ಆರಂಭವಿಲ್ಲ?

    ಖಾಸಗಿ ಸಭಾಂಗಣಗಳು ಸದ್ಯಕ್ಕೆ ಆರಂಭವಿಲ್ಲ?

    ಖಾಸಗಿ ಸಭಾಂಗಣಗಳು ಸದ್ಯಕ್ಕೆ ಆರಂಭಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಸರ್ಕಾರಿ ಅಧೀನದ ರಂಗಮಂದಿರಗಳಲ್ಲಿ ಸದ್ಯಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಆರಂಭವಾಗಲಿವೆ, ಕಾರ್ಯಕ್ರಮಗಳಿಗೆ ಜನ ಸ್ಪಂದನೆ ನೋಡಿಕೊಂಡು ಖಾಸಗಿ ರಂಗಮಂದಿರಗಳು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.

    ಚಿತ್ರಮಂದಿರಗಳು ಓಪನ್: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರಚಿತ್ರಮಂದಿರಗಳು ಓಪನ್: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

    English summary
    Kannada and Cultural department opened Drama theater's booking online. Drama activities will start soon.
    Saturday, October 31, 2020, 15:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X