»   » ಸುದೀಪ್ ಮತ್ತು ದರ್ಶನ್ ಒಟ್ಟಿಗೆ ಇಂತಹ ನಿರ್ಧಾರ ಮಾಡಿದ್ಯಾಕೆ?

ಸುದೀಪ್ ಮತ್ತು ದರ್ಶನ್ ಒಟ್ಟಿಗೆ ಇಂತಹ ನಿರ್ಧಾರ ಮಾಡಿದ್ಯಾಕೆ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸುದೀಪ್ ಇಬ್ಬರು ಗೆಳೆಯರಾದರು, ತಮ್ಮ ಸಿನಿಮಾಗಳ ವಿಚಾರಕ್ಕೆ ಬಂದ್ರೆ, ಈ ಇಬ್ಬರು ಕೂಡ ಒಬ್ಬರಿಗಿಂತ ಮತ್ತೊಬ್ಬರು ಡಿಫ್ರೆಂಟ್. ತಮ್ಮದೇ ಆದ ಅಭಿಮಾನಿ ಬಳಗವನ್ನ ಮೆಚ್ಚಿಸುವಂತಹ ಚಿತ್ರಗಳನ್ನ ಇವರಿಬ್ಬರು ಮಾಡ್ತಿರುತ್ತಾರೆ.

ಆದ್ರೀಗ, ಇಬ್ಬರು ಕೂಡ ಒಂದೇ ನಿರ್ಧಾರಕ್ಕೆ ಬಂದಿದ್ದಾರೆ. ಇದು ಕಾಕತಾಳಿಯವೋ ಅಥವಾ ಉದ್ದೇಶಪೂರ್ವಕವೋ ಗೊತ್ತಿಲ್ಲ. ಬಟ್, ಮುಂದಿನ ವರ್ಷ ಇವರಿಬ್ಬರು ಫ್ಯಾನ್ಸ್ ಗಳಿಗೆ ಪಕ್ಕಾ ಕಾಂಪಿಟೇಶನ್ ಎನ್ನುವುದು ಮಾತ್ರ ಖಾತ್ರಿಯಾಗಿದೆ.

ಹೌದು, ಇದಕ್ಕೆ ಕಾರಣ ದರ್ಶನ್ ಮತ್ತು ಸುದೀಪ್ ಅಭಿನಯಿಸಲಿರುವ ಮುಂದಿನ ಚಿತ್ರಗಳು? ಅದು ಯಾಕೆ ಎಂಬ ಕುತೂಹಲಕ್ಕೆ ಉತ್ತರ ಮುಂದೆ ಇದೆ ನೋಡಿ....

ಒಂದೇ ಪಾತ್ರ ಆಯ್ಕೆ ಮಾಡಿಕೊಂಡ ಸ್ಟಾರ್ಸ್

ನಟ ದರ್ಶನ್ ಮತ್ತು ಸುದೀಪ್ ಇಬ್ಬರು ತಮ್ಮ ತಮ್ಮ ಮುಂದಿನ ಚಿತ್ರದಲ್ಲಿ ಬಾಕ್ಸರ್ ಪಾತ್ರಗಳನ್ನ ನಿರ್ವಹಿಸುತ್ತಿದ್ದಾರೆ.

'ಒಡೆಯರ್' ಚಿತ್ರದಲ್ಲಿ ದರ್ಶನ್

ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವ ಒಡೆಯರ್ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದೊಂದು ರೊಮ್ಯಾಂಟಿಕ್ ಕಮ್ ಲವ್ ಸ್ಟೋರಿಯಾಗಿದ್ದು, ಈ ಚಿತ್ರದಲ್ಲಿ ನಾಯಕ ಬಾಕ್ಸರ್ ಅಂತೆ.

ಹಿಂದೆಂದೂ ಮಾಡದ ಪಾತ್ರದಲ್ಲಿ 'ಒಡೆಯರ್' ದರ್ಶನ್ ದರ್ಶನ

'ಪೈಲ್ವಾನ್' ಚಿತ್ರದಲ್ಲಿ ಸುದೀಪ್

ಹೆಬ್ಬುಲಿ ಕೃಷ್ಣ ನಿರ್ದೇಶನ ಮಾಡುತ್ತಿರುವ ಮುಂದಿನ ಚಿತ್ರದಲ್ಲಿ ಸುದೀಪ್ ಬಾಕ್ಸರ್ ಆಗಲಿದ್ದಾರಂತೆ. ಇದೊಂದು ಸ್ಪೋರ್ಟ್ಸ್ ಆಧರಿತ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ಪೈಲ್ವಾನ್ ಎಂದು ಹೆಸರಿಡಲಾಗಿದೆಯಂತೆ.

'ವಿಲನ್' ನಂತರ 'ಪೈಲ್ವಾನ್' ಆದ ಕಿಚ್ಚ ಸುದೀಪ್

ಬಾಕ್ಸರ್ ವರ್ಸಸ್ ಬಾಕ್ಸರ್

ಇವರೆಡು ಚಿತ್ರಗಳು ಮುಂದಿನ ವರ್ಷ ಬಿಡುಗಡೆಯಾಗಲಿವೆ. ಈ ಮೂಲಕ ಮುಂದಿನ ಸ್ಯಾಂಡಲ್ ವುಡ್ ನಲ್ಲಿ ಬಾಕ್ಸಿಂಗ್ ಕಾಳಗದ ಸೂಚನೆ ಸಿಕ್ಕಿದೆ.

ಇದು ಪ್ಲಸ್ ಅಥವಾ ಮೈನಸ್!

ಇಬ್ಬರು ಬಾಕ್ಸರ್ ಪಾತ್ರ ಮಾಡುತ್ತಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಆದ್ರೆ, ಇಬ್ಬರು ಒಂದೇ ಸಮಯದಲ್ಲಿ, ಒಂದೇ ಪಾತ್ರವನ್ನ ಆಯ್ಕೆ ಮಾಡಿಕೊಂಡಿರುವುದು ಈಗ ಅಭಿಮಾನಿಗಳಿಗೆ ಪೈಪೋಟಿ ಮನೋಭಾವಕ್ಕೆ ಕಾರಣವಾಗಿದೆ. ಆದ್ರೆ, ಇದು ಪ್ಲಸ್ ಅಥವಾ ಮೈನಸ್ ಆಗುತ್ತಾ ಎಂಬುದು ಕುತೂಹಲ.

English summary
Darshan's next film after Kurukshetra, which has been named Wodeyar, he is playing the role of a boxer. and also Actor Sudeep is all set to play a boxer in his next film to be directed by cinematographer turned director S Krishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada