»   » ಸುಮ್‌ ಸುಮ್ನೆ ನಗ್ತಾಳೆ ಚಿಮ್‌ಚಿಮ್ನೆ ಮಿಂಚ್ತಾಳೆ

ಸುಮ್‌ ಸುಮ್ನೆ ನಗ್ತಾಳೆ ಚಿಮ್‌ಚಿಮ್ನೆ ಮಿಂಚ್ತಾಳೆ

Posted By: Super
Subscribe to Filmibeat Kannada

ಸುಮ್‌ ಸುಮ್ನೆ ನಗ್ತಾಳೆ ಚಿಮ್‌ಚಿಮ್ನೆ ಮಿಂಚ್ತಾಳೆ ಹಾಡಿನಲ್ಲಿ ಉಪೇಂದ್ರ ಜೊತೆ ಕುಣಿದಿದ್ದ ಹುಡುಗಿ ಚಾಂದಿನಿ ಯನ್ನು ಇನ್ನುಮೇಲೆ ನೀವು ಡಾ।ಚಾಂದಿನಿ ಎಂದು ಕರೆಯಬೇಕು.

ಆರು ವರ್ಷಗಳಿಂದ ಈಕೆ ಪಟ್ಟ ಶ್ರಮ ಫಲಿಸಿದೆ. ್ಙಫುಡ್‌ ಅಂಡ್‌ ಅಗ್ರಿಕಲ್ಚರ್‌ ಮಾರ್ಕೆಟಿಂಗ್ಙ್‌ ಕುರಿತು ಈಕೆ ಸಿದ್ಧಪಡಿಸಿರುವ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದ ಪಿ ಎಚ್‌.ಡಿ. ಪದವಿ ಸಿಕ್ಕಿದೆ.

ಈ ಮಹಾಪ್ರಬಂಧಕ್ಕೆ ವಿಷಯ ಸಂಗ್ರಹಿಸಲು ಕರ್ನಾಟಕದ ಹಲವಾರು ಹಳ್ಳಿಗಳನ್ನು ಸುತ್ತಿದ್ದಾಳೆ. ಕೆಲವು ದಿನಗಳ ಕಾಲ ಹಳ್ಳಿಗಳಲ್ಲೇ ಉಳಿದದ್ದೂ ಉಂಟು. ಯಾವುದೋ ಒಂದು ಸಿನಿಮಾದಲ್ಲಿ ಅಕ್ಕನ ಪಾತ್ರವನ್ನೋ, ಗೆಳತಿ ಪಾತ್ರವನ್ನೋ ಮಾಡುವ ನಟಿಯರೂ ಹೆಚ್ಚು ನಖರಾಗಳನ್ನೇ ಮಾಡುವ ಈ ಕಾಲದಲ್ಲಿ ಹಿರೋಯಿನ್‌ ಒಬ್ಬಳು ಬರೀ ಹಣ ಗಳಿಸುವ ಯೋಚನೆಯನ್ನು ಬಿಟ್ಟು ಹಳ್ಳಿಯಲ್ಲಿದ್ದು ಅಧ್ಯಯನ ನಡೆಸಿರುವುದು ಶ್ಲಾಘನೀಯ.

ಅಮೆರಿಕಾದಲ್ಲೂ ಎರಡು ವರ್ಷ ಇದ್ದು , ಅಲ್ಲಿನ ಆಹಾರ ಮತ್ತು ಕೃಷಿ ಮಾರುಕಟ್ಟೆ ವ್ಯವಸ್ಥೆಯಾಡನೆ ನಮ್ಮ ಭಾರತದ, ವಿಶೇಷವಾಗಿ ಕರ್ನಾಟಕದ ಸ್ಥಿತಿಯನ್ನು ಹೋಲಿಸಿ ಮಹಾಪ್ರಬಂಧ ಸಿದ್ಧಪಡಿಸಿದ್ದಾಳೆ. ಮಹಾಪ್ರಬಂಧವನ್ನು ಪರಿಶೀಲಿಸಿದವರು , ಆಹಾರ ಮತ್ತು ಕೃಷಿ ಮಾರುಕಟ್ಟೆ ಕುರಿತಂತೆ ಸರ್ಕಾರ ಸುಧಾರಣೆ ಗಳನ್ನು ತರಲು ಇದು ಉಪಯುಕ್ತವಾಗಿದೆ ಎಂದಿದ್ದಾರೆ.

ಆಹಾರೋತ್ಪನ್ನಕ್ಕೆ ಸಂಬಂ-ಸಿದ ಭಾರತದ ಸಣ್ಣ ಕೈಗಾರಿಕೆಗಳಿಗೆ ಬಹುರಾಷ್ಟ್ರೀಯ ಕಂಪೆನಿಗಳ ಹಾವಳಿಯಿಂದ ಉಪಯೋಗವೇ ಆಗಿದೆ ಎಂದು ಈಕೆಯ ಸಂಶೋಧನಾ ಪ್ರಬಂಧ ಹೇಳುತ್ತದೆ. ಆಹಾರೋತ್ಪಾದನೆಯಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳುವುದನ್ನು ಬಹುರಾಷ್ಟ್ರೀಯ ಕಂಪೆನಿಗಳಿಂದ ಸಣ್ಣ ಕೈಗಾರಿಕೆಗಳು ಕಲಿತಿವೆ. ಇದೊಂದು ಆರೋಗ್ಯಕರ ಬೆಳವಣಿಗೆ ಎಂಬುದು ಚಾಂದಿನಿಯ ಅಧ್ಯಯನದಿಂದ ತಿಳಿದುಬಂದಿದೆ.

ಸಿನಿಮಾರಂಗಕ್ಕೆ ಚಾಂದಿನಿ ಲಗ್ಗೆ ಇಟ್ಟದ್ದು ಆಕೆಗೆ ಒಲಿದು ಬಂದ ಅದೃಷ್ಟದಿಂದ. 1997ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ್ಙಮಿಸ್‌ ಇಂಡಿಯಾ ವರ್ಲ್ಡ್‌ವೈಡ್ಙ್‌ ಸ್ಪರ್ಧೆಯಲ್ಲಿ ಈಕೆಗೆ ಮಿಸ್‌ ಫೋಟೋಜೆನಿಕ್‌ ಪ್ರಶಸ್ತಿ ದಕ್ಕಿತು. ಅಲ್ಲಿಂದ ಭಾರತಕ್ಕೆ ಬಂದ ನಂತರ ಅನೇಕರಿಗೆ ಫೋಟೋಗಳನ್ನು ಕಳುಹಿಸಿದ್ದಳು. ಕೊನೆಗೊಂದು ದಿನ ಉಪೇಂದ್ರ ್ಙಎ್ಙ ಚಿತ್ರದಲ್ಲಿ ನಾಯಕಿಯಾಗಲು ಕರೆ ಇತ್ತರು.

ಚಾಂದಿನಿ ಎದುರಿಸಿದ ಮೊದಲ ಶಾಟ್‌-ಉಪೇಂದ್ರ ಈಕೆಯನ್ನು ತಳ್ಳುವುದು, ಮೇಲೆ ಬೀಳುವುದು. ಇದನ್ನು ಸಲೀಸಾಗಿ ನಿರ್ವಹಿಸಿದರು. ಆಗ ಕೈಮೈಯಲ್ಲೆಲ್ಲಾ ತರಚು ಗಾಯಗಳಾಗಿದ್ದವಂತೆ. ಆದರೆ ಉಪೇಂದ್ರ ತನ್ನ ನಟನೆಯ ಬಗ್ಗೆ ಸೂಚಿಸಿದ್ದ ಮೆಚ್ಚುಗೆ ಆ ನೋವನ್ನು ಮರೆಸಿತಂತೆ.

ಒಂದು ಚಿತ್ರದಲ್ಲಿ ಪಾತ್ರ ಸಿಕ್ಕರೆ ಸಾಕು, ಓದು-ಬರಹವನ್ನೆಲ್ಲಾ ಬದಿಗೊತ್ತುವ ನಟಿಯರೇ ಹೆಚ್ಚು. ಅಂಥಾದರಲ್ಲಿ ಎರಡು ಯಶಸ್ವಿ ಚಿತ್ರಗಳಲ್ಲಿ (ಎ ಮತ್ತು ಎಕೆ 47) ನಾಯಕಿಯಾಗಿ ನಟಿಸಿದರೂ, ಚಾಂದಿನಿ ತನ್ನ ಗುರಿಯನ್ನು ಮರೆಯಲಿಲ್ಲ. ಕೊನೆಗೂ ಆಕೆಯ ನೆಚ್ಚಿನ ದಿನ ಬಂದಿದೆ. ಹ್ಯಾಟ್ಸಾಫ್‌ ಚಾಂದಿನಿ!

English summary
Doctorate to Chandni

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada