4.5 ಲಕ್ಷದ ಬಾಡಿಗೆ ಫ್ಲ್ಯಾಟ್, ಕೆಜಿ ಕೆಜಿ ಚಿನ್ನ, ಹೀಗಿತ್ತು ರನ್ಯಾ ಚಿನ್ನದ ಬೇಟೆ?

ಚಿನ್ನ ಕಳ್ಳಸಾಗಣೆ ಆರೋಪ ಪ್ರಕರಣದಲ್ಲಿ ಸಿನಿಮಾ ನಟಿ ರನ್ಯಾ ರಾವ್ ಬಂಧನವಾಗಿದೆ. ಮೊನ್ನೆ ರಾತ್ರಿ(ಮಾರ್ಚ್ 3) ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿರ್ಲಾಣದಲ್ಲಿ DRI ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಸದ್ಯ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಪ್ರಕರಣದ ತನಿಖೆ ಮುಂದುವರೆದಿದ್ದು ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೆಜಿ ಕೆಜಿ ಚಿನ್ನ ಹಾಗೂ ಕೋಟಿ ಕೋಟಿ ನಗದು ಹಣ ಪತ್ತೆ ಆಗಿದೆ. ಲ್ಯಾವೆಲ್ಲಿ ರಸ್ತೆಯ ನಂದವಾಣಿ ಮ್ಯಾನ್ಶನ್‌ನ ಫ್ಲ್ಯಾಟ್‌ನಲ್ಲಿ ರನ್ಯಾ ವಾಸಿಸುತ್ತಿದ್ದರು. ಐದಕ್ಕೂ ಹೆಚ್ಚು ಅಧಿಕಾರಿಗಳಿಂದ ಫ್ಲ್ಯಾಟ್‌ನಲ್ಲಿ ಪರಿಶೀಲನೆ ನಡೆಸಲಾಗಿತ್ತು. ಮೊನ್ನೆ ರಾತ್ರಿ ಕೂಡ ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆ ನಡೆಸಿದ್ದರು.

DRI officials raided the flat of jailed actress Ranya Rao seizing cash and gold

ಪರಿಶೀಲನೆ ಬಳಿಕ 3 ಪೆಟ್ಟಿಗೆಗಳನ್ನು DRI ಅಧಿಕಾರಿಗಳು ರನ್ಯಾ ರಾವ್ ಮನೆಯಿಂದ ಕೊಂಡೊಯ್ದಿದ್ದಾರೆ. ಆಕೆಯ ಮನೆಯಲ್ಲಿ 2.06 ಕೆಜಿ ಚಿನ್ನ ಹಾಗೂ 2.67 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ವರದಿಯಾಗಿದೆ. ಒಟ್ಟಾರೆ ತನಿಖೆ ವೇಳೆ , ಚಿನ್ನ ನಗದು ಸೇರಿ 17.29 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಳೆದೊಂದು ವರ್ಷದ ಅವಧಿಯಲ್ಲಿ ರನ್ಯಾ 30 ಕ್ಕೂ ಹೆಚ್ಚು ಬಾರಿ ದುಬೈಗೆ ಹೋಗಿ ಬಂದಿದ್ದಾರೆ ಎನ್ನಲಾಗ್ತಿದೆ. ಪದೇ ಪದೆ ಆಕೆ ದುಬೈಗೆ ಹೋಗುತ್ತಿದ್ದದ್ದು ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ರನ್ಯಾ ಚಿನ್ನದ ಬೇಟೆಯೇ ಬಹಳ ರೋಚಕವಾಗಿದೆ. ಥೇಟ್ ಸಿನಿಮಾಗಳಲ್ಲಿ ತೋರಿಸುವಂತೆ ಕದ್ದುಮುಚ್ಚಿ ಚಿನ್ನವನ್ನು ಬೆಂಗಳೂರಿಗೆ ತರುತ್ತಿದ್ದರು ಎಂದು ತನಿಖೆ ವೇಳೆ ಗೊತ್ತಾಗಿದೆ.

ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ 14.8 ಕೆಜಿ ಚಿನ್ನವನ್ನು ನಟಿ ರನ್ಯಾ ರಾವ್ ಸಾಗಾಟ ಮಾಡಿದ್ದರು. ದುಬೈನಲ್ಲಿ 1 ಕೆಜಿ ಚಿನ್ನದ ದರ 81 ಲಕ್ಷ ರೂಪಾಯಿ ಇದೆ. ಇತ್ತ ಬೆಂಗಳೂರಿನಲ್ಲಿ 1 ಕೆಜಿ 89 ಲಕ್ಷ ರೂಪಾಯಿ ಆಗಿದೆ. ಈ ಮೂಲಕ ಆಕೆಗೆ 1.20 ಕೋಟಿ ರೂಪಾಯಿ ಲಾಭ ಸಿಕ್ಕಂತಾಗಿತ್ತು. ಈ ಬಾರಿ ಚಿನ್ನ ಸಾಗಾಟ ಮಾಡುವ ವೇಳೆಯೇ ರನ್ಯಾ ಸಿಕ್ಕಿಬಿದ್ದಿದ್ದಾರೆ. ಇದಕ್ಕೂ ಮುನ್ನ ಹೀಗೆ ಎಷ್ಟು ಬಾರಿ ಚಿನ್ನ ಕದ್ದು ತಂದಿದ್ದರು ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಚಿನ್ನ ಸಾಗಾಟದ ವೇಳೆ ತೆರಿಗೆ ವಂಚನೆ ಮಾಡಿರುವುದು ಗಮನಕ್ಕೆ ಬಂದಿದೆ. ದುಬೈನಲ್ಲಿ ಬರೋಬ್ಬರಿ 14 ಕೆಜಿ ಚಿತ್ರವನ್ನು ರನ್ಯಾ ಖರೀದಿಸಿದ್ದಾರೆ. ಒಮ್ಮೆಲೆ ಇಷ್ಟು ಚಿನ್ನ ಖರೀದಿಸಲು ಆಕೆಗೆ ಹಣ ಹೇಗೆ ಬಂತು, ಅದರ ಮೂಲ ಏನು ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅಕ್ರಮ ಹಣ ವರ್ಗಾವಣೆ ಅನುಮಾನ ವ್ಯಕ್ತವಾಗುತ್ತಿದ್ದು ED ಕೂಡ ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆರ್ಕಿಟೆಕ್ ಆಗಿರುವ ಪತಿ ಜಿತಿನ್ ಹುಕ್ಕೇರಿ ಜೊತೆ ಸೇರಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಡಿಜಿಪಿ ಪುತ್ರಿ ಎಂದು ಹೇಳಿ ರನ್ಯಾ ರಾವ್ ಪ್ರತಿಬಾರಿ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಚೆಕ್ ತಪ್ಪಿಸಿಕೊಳ್ಳುತ್ತಿದ್ದರು. ಪ್ರತಿ ಬಾರಿ ಒಂದೇ ತರಹದ ಉಡುಪು ಧರಿಸಿ ಆಕೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಬೆಲ್ಟ್‌ನಲ್ಲಿ ಚಿನ್ನದ ಗಟ್ಟಿಗಳನ್ನು ಇಟ್ಟುಕೊಂಡು ಬೆಲ್ಟ್ ಕಾಣಿಸಿದಂತೆ ಬಟ್ಟೆ ಧರಿಸಿ ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದರು. ಉದ್ಯಮಿಗಳು, ರಾಜಕೀಯ ಮುಖಂಡರ ಮಕ್ಕಳು ಕೂಡ ಈ ಅಕ್ರಮ ಚಿಕ್ಕ ಸಾಗಾಟ ಜಾಲದಲ್ಲಿ ಇರುವ ಸಾಧ್ಯತೆ ದಟ್ಟವಾಗಿದೆ.

More from Filmibeat

English summary
Kannada Actress Ranya Rao, who is currently in jail, had her flat raided, leading to the seizure of cash and gold worth crores;
Read more about: actress sandalwood sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X