For Quick Alerts
  ALLOW NOTIFICATIONS  
  For Daily Alerts

  ಮುಂದುವರೆಯಲಿದೆ ರಾಜೇಂದ್ರ ಪೊನ್ನಪ್ಪ ಕುತೂಹಲಕಾರಿ ಕತೆ: 'ದೃಶ್ಯ 2'ಗೆ ರವಿಚಂದ್ರನ್ ರೆಡಿ

  |

  ಏಳು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಕನ್ನಡ ಸಿನಿಮಾ 'ದೃಶ್ಯ'ದ ಮುಂದುವರೆದ ಭಾಗ ನಿರ್ಮಾಣವಾಗುವುದು ಖಾತ್ರಿಯಾಗಿದೆ.

  Drishyam 2 ಸಿನಿಮಾಗೆ ರೆಡಿ ಅಂದ್ರು ಕ್ರೇಜಿಸ್ಟಾರ್ ರವಿಚಂದ್ರನ್ | Filmibeat Kannada

  ರವಿಚಂದ್ರನ್, ನವ್ಯಾ ನಾಯರ್, ಅಚ್ಯುತ್ ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ 'ದೃಶ್ಯ' ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಮಲಯಾಳಂನ 'ದೃಶ್ಯಂ' ಸಿನಿಮಾದ ರೀಮೇಕ್ ಆಗಿದ್ದ ಈ ಸಿನಿಮಾದ ಮುಂದುವರೆದ ಭಾಗ 'ದೃಶ್ಯ 2' ಕನ್ನಡದಲ್ಲಿ ನಿರ್ಮಾಣವಾಗಲಿದೆ. ರವಿಚಂದ್ರನ್ ಅವರು ಮತ್ತೆ 'ರಾಜೇಂದ್ರ ಪೊನ್ನಪ್ಪ'ನ ಪಾತ್ರದಲ್ಲಿ ಮಿಂಚಲಿದ್ದಾರೆ.

  ಮಲಯಾಳಂನಲ್ಲಿ 'ದೃಶ್ಯಂ' ಸಿನಿಮಾ ಮಾಡಿದ್ದ ತಂಡವೇ 'ದೃಶ್ಯಂ2' ಸಿನಿಮಾ ನಿರ್ಮಾಣ ಮಾಡಿ ಇತ್ತೀಚೆಗಷ್ಟೆ ಒಟಿಟಿಯಲ್ಲಿ ಬಿಡುಗಡೆ ಮಾಡಿತ್ತು. ಸಿನಿಮಾ ಮತ್ತೆ ಹಿಟ್ ಆಗಿದೆ. ಹಾಗಾಗಿ ಅದೇ ಸಿನಿಮಾವನ್ನು ಕನ್ನಡದಲ್ಲಿ ಮತ್ತೆ ರೀಮೇಕ್‌ ಮಾಡಲಾಗುತ್ತಿದೆ.

  2014 ರಲ್ಲಿ ಕನ್ನಡದ 'ದೃಶ್ಯ' ನಿರ್ದೇಶಿಸಿದ್ದ ಪಿ.ವಾಸು ಅವರೇ 'ದೃಶ್ಯ 2' ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. 'ದೃಶ್ಯ' ಸಿನಿಮಾದಲ್ಲಿದ್ದ ಬಹುತೇಕ ಪಾತ್ರಗಳು, ನಟರು 'ದೃಶ್ಯ 2' ಸಿನಿಮಾದಲ್ಲಿಯೂ ಮುಂದುವರೆಯಲಿದ್ದಾರೆ. ಹೆಚ್ಚುವರಿ ಪಾತ್ರಗಳು ಸಹ ಸೇರಿಕೊಳ್ಳಲಿವೆ. ಸಿನಿಮಾವನ್ನು ಈ4 ಎಂಟರ್ಟೈನ್‌ಮೆಂಟ್ ಸಂಸ್ಥೆ ನಿರ್ಮಾಣ ಮಾಡಲಿದೆ.

  ಮಲಯಾಳಂನಲ್ಲಿ ಇತ್ತೀಚೆಗಷ್ಟೆ ಬಿಡುಗಡೆ ಆಗಿರುವ 'ದೃಶ್ಯ 2' ಸಿನಿಮಾವು ಈಗಾಗಲೇ ತೆಲುಗಿನಲ್ಲಿ ರೀಮೇಕ್ ಆಗುತ್ತಿದೆ. ಮೂಲ ಸಿನಿಮಾ ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ತೆಲುಗಿನಲ್ಲಿಯೂ ನಿರ್ದೇಶನ ಮಾಡುತ್ತಿದ್ದಾರೆ. ತಮಿಳು ಹಾಗೂ ಹಿಂದಿಯಲ್ಲಿಯೂ ಈ ಸಿನಿಮಾ ರೀಮೇಕ್ ಆಗುವ ಸಾಧ್ಯತೆ ಇದೆ.

  ಜೀತು ಜೋಸೆಫ್ ನಿರ್ದೇಶಿಸಿದ್ದ ಮಲಯಾಳಂನ ಮೊದಲ 'ದೃಶ್ಯಂ' ಸಿನಿಮಾವು ಕನ್ನಡ, ತೆಲುಗು, ತಮಿಳು, ಹಿಂದಿ, ಸಿಂಹಳಿ, ಚೈನೀಸ್ ಭಾಷೆಗಳಿಗೆ ರೀಮೇಕ್ ಆಗಿ ದಾಖಲೆ ಬರೆದಿತ್ತು.

  'ದೃಶ್ಯ' ಸಿನಿಮಾದಲ್ಲಿ ಆಗಿದ್ದ ಕೊಲೆಯ ತನಿಖೆಯೇ 'ದೃಶ್ಯ 2' ನಲ್ಲಿಯೂ ಮುಂದುವರೆಯಲಿದೆ. ರಾಜೇಂದ್ರ ಪೊನ್ನಪ್ಪ ತನ್ನ ಬುದ್ಧಿವಂತಿಕೆಯಿಂದ ಕೊಲೆ ಪ್ರಕರಣದಿಂದ ತನ್ನ ಕುಟುಂಬವನ್ನು ಕಾಪಾಡಿಕೊಂಡಿದ್ದ ಆದರೆ 'ದೃಶ್ಯ 2' ನಲ್ಲಿ ಅದೇ ಪ್ರಕರಣವನ್ನು ಮತ್ತೆ ಹೇಗೆ ನಿಭಾಯಿಸುತ್ತಾನೆ ಮತ್ತೆ ಹೇಗೆ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುತ್ತಾನೆ ಎಂಬುದು ಸಿನಿಮಾದ ಕತೆಯಾಗಿರಲಿದೆ.

  English summary
  Malayalam's Drishyam 2 movie's Kannada remake announced on Ugadi festival day. Ravichandran will play lead role as Rajendra Ponnappa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X