ಅಮೇಜಾನ್ ಪ್ರೈಮ್‌ನಲ್ಲಿ ಮೋಹನ್ ಲಾಲ್ ದೃಶ್ಯಂ 2 ಬಿಡುಗಡೆ

ದಕ್ಷಿಣ ಭಾರತದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ದೃಶ್ಯಂ 2 ಸಿನಿಮಾದ ಕುರಿತು ಅಪ್‌ಡೇಟ್ ಹೊರಬಿದ್ದಿದೆ. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ದೃಶ್ಯಂ ಸೀಕ್ವೆಲ್ ಚಿತ್ರದ ಒಟಿಟಿಯಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ.

ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಆಸೆಯಿಂದ ಕಾಯುತ್ತಿದ್ದವರಿಗೆ ಇದು ನಿರಾಸೆ ಸುದ್ದಿಯಾಗಿದ್ದರೂ ಆದಷ್ಟೂ ಬೇಗ ದೃಶ್ಯಂ ನೋಡಬಹುದು ಎಂಬ ಖುಷಿ ಸಿಕ್ಕಿದೆ.

ಈ ಕುರಿತು ಮೋಹನ್ ಲಾಲ್ ತಮ್ಮ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ''ಫೆಬ್ರವರಿ 8 ರಂದು ದೃಶ್ಯಂ 2 ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ'' ಎಂದು ಪ್ರಕಟಿಸಿದ್ದಾರೆ. ಅತಿ ಶೀಘ್ರದಲ್ಲಿ ಸಿನಿಮಾನೂ ತೆರೆಗೆ ಬರಲಿದೆ ಎಂದು ನಟ ಪೋಸ್ಟ್ ಮಾಡಿದ್ದಾರೆ.

Drishyam 2 trailer will release on february 8th in Amazon prime

ಸದ್ಯಕ್ಕೆ ರಿಲೀಸ್ ದಿನಾಂಕ ಪ್ರಕಟ ಮಾಡಿಲ್ಲ. ಬಹುಶಃ ಟ್ರೈಲರ್ ಜೊತೆಗೆ ಬಿಡುಗಡೆ ದಿನಾಂಕ ಘೋಷಿಸಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಮೊದಲ ಭಾಗವನ್ನು ನಿರ್ದೇಶಿಸಿದ್ದ ಜಿತು ಜೋಸೆಫ್ ಈ ಚಿತ್ರಕ್ಕೂ ನಿರ್ದೇಶನ ಮಾಡಿದ್ದು, ಈ ಹಿಂದಿನ ಚಿತ್ರದಲ್ಲಿ ಪಾತ್ರಗಳು ಇಲ್ಲಿಯೂ ಮುಂದುವರಿದೆ. ಮೋಹನ್ ಲಾಲ್, ಮೀನಾ, ಹಾಗೂ ಮಕ್ಕಳ ಪಾತ್ರದಲ್ಲಿ ಎಸ್ತರ್ ಅನಿಲ್ ಮತ್ತು ಅನ್ಸಿಬಾ ಹಸನ್ ಬಣ್ಣ ಹಚ್ಚಲಿದ್ದಾರೆ.

ಇನ್ನು ಮೋಹನ್ ಲಾಲ್ ನಟನೆಯ ಮರಕ್ಕರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೋಹನ್ ಲಾಲ್ ಜೊತೆ ಅರ್ಜುನ್ ಸರ್ಜಾ, ಮಂಜು ವಾರಿಯರ್, ಸುನೀಲ್ ಶೆಟ್ಟಿ, ಪ್ರಭು, ಕೀರ್ತಿ ಸುರೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ರಾಮ್ ಎಂಬ ಚಿತ್ರದಲ್ಲಿಯೂ ಮೋಹನ್ ಲಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿದ್ದಾರೆ.

More from Filmibeat

English summary
Drishyam 2 - the second installment in Drishyam franchise will premiere on Amazon prime.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X