ಜೈಲಿಂದ ಹೊರ ಬಂದ ಮೇಲೆ ಕೆರಳಿದ ಡ್ರೋನ್ ಪ್ರತಾಪ್, ನನಗೆ ನ್ಯಾಯ ಬೇಕು ಎಂದ ಬಿಗ್ ಬಾಸ್ ಸ್ಫರ್ಧಿ..!

ಮಾಡಬಾರದ್ದನ್ನೆಲ್ಲಾ ಮಾಡಿ ಮೊನ್ನೆ ಮೊನ್ನೆ ಜೈಲು ಪಾಲಾದವರು ಡ್ರೋನ್ ಪ್ರತಾಪ್. ಡ್ರೋನ್ ತಯಾರಿಸುವ ಕೆಲಸಕ್ಕೆ ತಿಲಾಂಜಲಿ ಹಾಡಿ ಸೋಡಿಯಂ ಮೆಟಲ್ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ಮಾಡಿ ಪೊಲೀಸರ ಅತಿಥಿಯಾಗಿದ್ದ ಸನ್ಮಾನ್ಯ ಡ್ರೋನ್ ಪ್ರತಾಪ್ ಈಗ ಈ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಜೈಲಿಂದ ಹೊರ ಬರುತ್ತಿದ್ದಂತೆಯೇ ಸರ್ಕಾರಕ್ಕೆ ಸವಾಲನ್ನು ಹಾಕಿದ್ಧಾರೆ.

ಹೌದು, ಜೈಲಿಂದ ಹೊರ ಬಂದ ನಂತರ ಮಾತನಾಡಿರುವ ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್‌ನ ಪ್ರಯೋಗ ಮಾಡಿದ ಏಕೈಕ ವ್ಯಕ್ತಿ ಈ ದೇಶದಲ್ಲಿ ನಾನೊಬ್ಬನೇನಾ ಎಂದು ಪ್ರಶ್ನೆ ಕೇಳಿದ್ದಾರೆ. ದೇಶದಲ್ಲಿ ಅನೇಕರು ಈ ತರಹದ ಪ್ರಯೋಗ ಮಾಡಿದ್ದಾರೆ, ತಮ್ಮ ತಮ್ಮ ಯೂಟ್ಯೂಬ್‌ನಲ್ಲಿ ಆ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಎಂದಿರುವ ಡ್ರೋನ್ ಪ್ರತಾಪ್ ಕ್ರೇಜಿ ಎಕ್ಸ್‌ ವೈ ಜೆಡ್ ಮತ್ತು ಮಿಸ್ಟರ್ ಇಂಡಿಯನ್ ಹ್ಯಾಕರ್ ಎಂಬ ಎರಡು ಯೂಟ್ಯೂಬ್ ಚಾನೆಲ್‌ಗಳನ್ನು ಉದಾಹರಣೆಯನ್ನಾಗಿ ನೀಡಿದ್ದಾರೆ. ಅವರ ಮೇಲೆ ಹಾಕದ ಕೇಸ್ ನನ್ನ ಮೇಲೆಯೇ ಯಾಕೆ ಹಾಕಿದ್ದಾರೆ ಎಂದಿದ್ದಾರೆ.

drone-prathap-who-was-granted-bail-in-the-sodium-explosion-experiment-case-questions-the-government

ನಮ್ಮ ದೇಶ ಆಗಿರಬಹುದು ವಿದೇಶ ಆಗಿರಬಹುದು ಎಲ್ಲ ಕಡೆ ಇಂತಹ ನೂರಾರು ವಿಡಿಯೋಗಳಿವೆ ಎಂದಿರುವ ಡ್ರೋನ್ ಪ್ರತಾಪ್, ಕಾನೂನು ಎಲ್ಲರಿಗೂ ಒಂದೇ ಅನ್ನುವುದಾದರೆ ಎಲ್ಲರನ್ನು ಬಿಟ್ಟು ನನ್ನ ಒಬ್ಬನ್ನು ಮಾತ್ರ ಯಾಕೆ ಅರೆಸ್ಟ್ ಮಾಡಿದ್ದೀರಿ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಬೇರೆಯವರೆಲ್ಲ ಇದೇ ತರಹದ ಪ್ರಯೋವನ್ನು ಕೆಜಿ ಗಟ್ಟಲೆ ಸೋಡಿಯಂ ಬಳಸಿ ಮಾಡಿದ್ದಾರೆ ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಈಗಲೂ ಸಿಗುತ್ತವೆ. ಆದರೂ ಅವರ ಮೇಲೆ ಇಲ್ಲದ ಕ್ರಮ ನನ್ನ ಮೇಲೆ ಯಾಕೆ ಜರುಗಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ನಮ್ಮ ದೇಶದ ಕಾನೂನುಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಾವಾ ಎಂದು ಪ್ರಶ್ನೆಯನ್ನು ಕೂಡ ಮಾಡಿರುವ ಡ್ರೋನ್ ಪ್ರತಾಪ್, ನಾನು ಮಾಡಿರೋದು ಸೈನ್ಸ್ ಮತ್ತು ಶಿಕ್ಷಣದ ಉದ್ದೇಶಕ್ಕೆ ಮಾತ್ರ. ನಾನು ಅದನ್ನು ಆರಂಭದಲ್ಲಿಯೇ ಡಿಸ್‌ಕ್ಲೈಮರ್‌ನಲ್ಲಿ ಹಾಕಿದ್ದೇನೆ ಕೂಡ ಎಂದಿದ್ದಾರೆ. ನಾನು ಮಾಡಿರೋದು ಸಿಂಪಲ್ ಸೈನ್ಸ್ ಎಕ್ಸ್‌ಪಿರಿಮೆಂಟ್ ಅಷ್ಟೇ ಎಂದು ಹೇಳಿದ್ದಾರೆ.


ನಮ್ಮ ರಾಜ್ಯದ 8ನೇ ತರಗತಿಯ ಪುಸ್ತಕದಲ್ಲಿರುವ ವಿಚಾರವನ್ನೇ ನಾನು ಇಲ್ಲಿ ಪ್ರಯೋಗ ಮಾಡಿದ್ದೇನೆ, ಕಾಲೇಜ್ ಲ್ಯಾಬ್‌ಗಳಲ್ಲಿ ಸೋಡಿಯಂ ಸುಲಭವಾಗಿ ಸಿಗುತ್ತೆ ಅದಕ್ಕೆ ಎಕ್ಸ್‌ಪ್ಲೋಸಿವ್ ಅಂತ ತೋರಿಸಿ ಮಾಡುವಂತಹದ್ದು ಏನಿಲ್ಲ ಎಂದಿರುವ ಡ್ರೋನ್ ಪ್ರತಾಪ್ ನನ್ನ ಮೇಲೆ ತೆಗೆದುಕೊಂಡತೆ ಬೇರೆಯವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ. ಅವರೆಲ್ಲರೂ ನನಗಿಂತ ಮುಂಚೆ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಅಲ್ಲ ಭಾರತದೆಲ್ಲೆಡೆ ಕಾನೂನು ಒಂದೇ ಎಂದಿದ್ದಾರೆ. ನಾನು ಮಾಡಿದ್ದ ಕೃಷಿಹೊಂಡ ಕೂಡ ನೈಸರ್ಗಿಕವಾದದ್ದು ಅಲ್ಲ ಬದಲಿಗೆ ಆರ್ಟಿಪಿಶಿಯಲ್ ಇನ್ನೂ ಅದೇನು ನೈಸರ್ಗಿಕ ತಾಣ ಕೂಡ ಅಲ್ಲ ಸರ್ಕಾರದ ಸ್ವತ್ತು ಅಲ್ಲ ಈ ಕಾರಣಕ್ಕೆ ನನಗೆ ಈ ಪ್ರಕರಣದಲ್ಲಿ ನ್ಯಾಯ ಬೇಕೆ ಬೇಕು ಎಂದು ಹೇಳಿದ್ದಾರೆ.

ಅಂದ್ಹಾಗೇ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಜನಕಲೋಟಿ ಗ್ರಾಮದ ಬಳಿ ಕೃಷಿ ಹೊಂಡದಲ್ಲಿ ಪ್ರತಾಪ್‌ ಕೆಮಿಕಲ್‌ ಬಳಸಿ ಸ್ಫೋಟಿಸಿದ್ದರು. ಇದರ ವಿಡಿಯೋ ಮಾಡಿದ್ದಲ್ಲದೆ, ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ವೈರಲ್‌ ಆದ ಹಿನ್ನೆಲೆ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಅರೆಸ್ಟ್‌ ಮಾಡಿದ್ದರು.ಬಿಎನ್​ಎಸ್​ ಸೆಕ್ಷನ್ 288 ಹಾಗೂ ಸ್ಫೋಟ ವಸ್ತು ನಿಯಂತ್ರಣ ಕಾಯ್ದೆ 3ರಡಿಯಲ್ಲಿ ಪ್ರತಾಪ್‌ ವಿರುದ್ಧ ಕೇಸ್‌ ದಾಖಲಿಸಿಕೊಂಡಿದ್ದರು. 08 ದಿನಗಳ ಕಾಲ ಜೈಲಿನಲ್ಲಿ ಇದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X